ETV Bharat / bharat

ತಮಿಳುನಾಡು ಚುನಾವಣೆ: ಕಾಂಗ್ರೆಸ್​ಗೆ 25 ಸೀಟು ನೀಡಿದ ಡಿಎಂಕೆ

author img

By

Published : Mar 8, 2021, 1:53 PM IST

Tamilnadu
ತಮಿಳುನಾಡು ಚುನಾವಣೆ:

ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್​ಗೆ 25 ಸೀಟುಗಳನ್ನು ಡಿಎಂಕೆ ನೀಡಿದೆ.

ಚೆನ್ನೈ: ಸೀಟು ಹಂಚಿಕೆಗಾಗಿ ಕಠಿಣ ಪರಿಶ್ರಮ ಪಟ್ಟ ಬಳಿಕ ಕಾಂಗ್ರೆಸ್​ಗೆ 25 ಸ್ಥಾನಗಳನ್ನು ಡಿಎಂಕೆ ನೀಡಿದೆ. 2016ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ 41 ಸೀಟುಗಳನ್ನು ನೀಡಿತ್ತು. ಆದರೆ, ಈ ಬಾರಿ ಕೇವಲ 25 ಸೀಟುಗಳು ಲಭ್ಯವಾಗಿದೆ.

ಪಕ್ಷದ ಪದಾಧಿಕಾರಿಗಳ ಪ್ರಕಾರ ಡಿಎಂಕೆ ಮುಖ್ಯಸ್ಥ, ಎಂ.ಕೆ. ಸ್ಟಾಲಿನ್​ ಅವರು ಕಾಂಗ್ರೆಸ್ ಪಕ್ಷಕ್ಕೆ 18 ಕ್ಕೂ ಹೆಚ್ಚು ಸ್ಥಾನಗಳನ್ನು ನೀಡಲು ಹಿಂಜರಿಯುತ್ತಿದ್ದರು. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಇಬ್ಬರ ಹಸ್ತಕ್ಷೇಪದ ನಂತರ ಅಂತಿಮವಾಗಿ 25 ಕ್ಷೇತ್ರ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಪಕ್ಷದ ಮುಖಂಡರೊಬ್ಬರು ಈ ಬಗ್ಗೆ ಹೇಳಿಕೆ ನೀಡಿದ್ದು, ಕಾಂಗ್ರೆಸ್​ಗೆ ನೀಡಿದ ಹೆಚ್ಚಿನ ಸ್ಥಾನವು ಉತ್ತಮ ಅಡಿಪಾಯವನ್ನು ಹೊಂದಿಲ್ಲ. ಡಿಎಂಕೆಯು ಸದ್ಯ 25 ಸ್ಥಾನಗಳನ್ನು ನೀಡಿದೆ" ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.