ETV Bharat / bharat

ಕೆಂಪುಕೋಟೆ ಗಲಭೆ ಪ್ರಕರಣ: ಪ್ರಮುಖ ಆರೋಪಿ ಗುರ್ಜೋತ್ ಸಿಂಗ್ ಬಂಧನ

author img

By

Published : Jun 28, 2021, 2:43 PM IST

Wanted arrested in Red Fort violence case
ಗುರ್ಜೋತ್ ಸಿಂಗ್ ಬಂಧನ

ಕೆಂಪು ಕೋಟೆ ಹಿಂಸಾಚಾರ ಪ್ರಕರಣದಲ್ಲಿ ಐದು ತಿಂಗಳಿನಿಂದ ಪರಾರಿಯಾಗಿದ್ದ ಗುರ್ಜೋತ್ ಸಿಂಗ್​ನನ್ನುದೆಹಲಿ ಪೊಲೀಸರ ವಿಶೇಷ ವಿಭಾಗ ಬಂಧಿಸಿದೆ.

ನವದೆಹಲಿ: ಕೆಂಪುಕೋಟೆಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿದ್ದ ಗುರ್ಜೋತ್ ಸಿಂಗ್​ ಅವರನ್ನು ಬಂಧಿಸಲಾಗಿದೆ.

ಪಂಜಾಬ್​​ನ ಅಮೃತಸರದಲ್ಲಿ ಗುರ್ಜೋತ್ ಸಿಂಗ್​ನನ್ನು ಪೊಲೀಸರು ಬಂಧಿಸಿದ್ದು, ಈತನ ಬಂಧನಕ್ಕಾಗಿ ದೆಹಲಿ ಮತ್ತು ಪಂಜಾಬ್ ಪೊಲೀಸರು ಬಲೆ ಬೀಸಿದ್ದರು. ಗುರ್ಜೋತ್ ಸಿಂಗ್​ ಕುರಿತು ಮಾಹಿತಿ ನೀಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದರು.

ಈ ಬಗ್ಗೆ ಮಾಹಿತಿ ನೀಡಿದ ಡಿಸಿಪಿ ಸಂಜೀವ್ ಯಾದವ್, ಕೆಂಪು ಕೋಟೆ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ ಮೂಲದ ವ್ಯಕ್ತಿಯನ್ನು ದೆಹಲಿ ಪೊಲೀಸರ ವಿಶೇಷ ವಿಭಾಗ ಬಂಧಿಸಿದೆ. ಆರೋಪಿಯನ್ನು ಗುರ್ಜೋತ್‌ ಸಿಂಗ್‌ ಎಂದು ಗುರುತಿಸಲಾಗಿದ್ದು, ಈತನನ್ನು ಅಮೃತಸರದಲ್ಲಿ ಬಂಧಿಸಲಾಗಿದೆ. ಗುರ್ಜೋತ್‌ ಸಿಂಗ್‌ ಪತ್ತೆಗಾಗಿ ಇಲಾಖೆಯು 1 ಲಕ್ಷ ರೂ. ನಗದು ಬಹುಮಾನ ಘೋಷಿಸಿತ್ತು ಎಂದು ಹೇಳಿದ್ದಾರೆ.

ಜನವರಿ 26ರ ಗಣರಾಜ್ಯೋತ್ಸವ ದಿನದಂದು ಸಾವಿರಾರು ರೈತರು ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಟ್ರ್ಯಾಕ್ಟರ್ ರ‍್ಯಾಲಿ​ ನಡೆಸಿದ್ದರು. ಈ ವೇಳೆ, ಪೊಲೀಸರು ಮತ್ತು ರೈತರ ನಡುವೆ ಘರ್ಷಣೆ ಸಂಭವಿಸಿತ್ತು. ಆಗ ಕೆಲವು ಪ್ರತಿಭಟನಕಾರರು ಕೆಂಪು ಕೋಟೆ ಮೇಲೆ ಹತ್ತಿ ಧರ್ಮ ಸೂಚಕ ಧ್ವಜವನ್ನು ಹಾರಿಸಿದ್ದರು.

ಇದನ್ನೂ ಓದಿ: 'ಭಾರತದ ಸ್ವರ್ಗ'ದಲ್ಲಿ ಶಾಂತಿ ಸ್ಥಾಪಿಸುವುದು ಹೇಗೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.