ETV Bharat / bharat

ಸಿಕ್ಕಿದ್ದೇ ಚಾನ್ಸು ಎತ್ಕೊಳ್ಳಲೇ.. ಬಿಹಾರದಲ್ಲಿ ಮದ್ಯದ ಬಾಟಲ್​ ಲೂಟಿಗೆ ಇರುವೆಗಳಂತೆ ಮುಕ್ಕಿದ ಜನ.. ವಿಡಿಯೋ

author img

By

Published : Dec 22, 2021, 5:10 PM IST

Villagers Looted Liquor Bottles in Bihar
ಬಿಹಾರದಲ್ಲಿ ಮದ್ಯದ ಬಾಟಲ್​ ಲೂಟಿ ಮಾಡಿದ ಗ್ರಾಮಸ್ಥರು

ಬಿಹಾರದ ಗೋಪಾಲಗಂಜ್​ನಲ್ಲಿ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ಕಾರಿನಲ್ಲಿದ್ದ ಲಿಕ್ಕರ್​ ಬಾಟಲ್​​ಗಳನ್ನು ಗ್ರಾಮಸ್ಥರು ಲೂಟಿ ಮಾಡಿದ್ದಾರೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ..

ಗೋಪಾಲಗಂಜ್(ಬಿಹಾರ) : ಬಿಹಾರದಲ್ಲಿ ಮದ್ಯ ಮಾರಾಟ ನಿಷೇಧವಿದೆ. ಆಗಾಗ ಮದ್ಯದ ದರೋಡೆ ಪ್ರಕರಣಗಳು ವರದಿಯಾಗುತ್ತಿರುತ್ತವೆ. ಇದರ ನಡುವೆ ಗೋಪಾಲ್‌ಗಂಜ್‌ನಲ್ಲಿ ಇಂತಹದ್ದೇ ಘಟನೆಯೊಂದು ಬೆಳಕಿಗೆ ಬಂದಿದೆ. ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ಕಾರಿನಲ್ಲಿದ್ದ ಲಿಕ್ಕರ್​ ಬಾಟಲ್​​ಗಳನ್ನು ಗ್ರಾಮಸ್ಥರು ಲೂಟಿ ಮಾಡಿದ್ದಾರೆ.

ಬಿಹಾರದಲ್ಲಿ ಮದ್ಯದ ಬಾಟಲ್​ ಲೂಟಿ ಮಾಡಿದ ಗ್ರಾಮಸ್ಥರು..

ಗೋಪಾಲಗಂಜ್​ನಲ್ಲಿ ವ್ಯಕ್ತಿಯೊಬ್ಬ ಕಾರಿನಲ್ಲಿ ಮದ್ಯದ ಬಾಟಲಿಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ. ಈ ವೇಳೆ, ಕಾರು ಏಕಾಏಕಿ ಇಲ್ಲಿನ ಬದ್ರಜಿಮಿ ಮಾರುಕಟ್ಟೆಯೊಳಗೆ ನುಗ್ಗಿ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಕೋಪಗೊಂಡ ಗ್ರಾಮಸ್ಥರು, ಕಾರನ್ನು ಧ್ವಂಸ ಮಾಡಲು ಮುಂದಾಗಿದ್ದರು. ಆಗ ಕಾರಿನಲ್ಲಿ ಮದ್ಯದ ಬಾಟಲ್​​​​ಗಳು ಪತ್ತೆಯಾಗಿವೆ. ಘಟನೆ ಬಳಿಕ ಚಾಲಕ ಪರಾರಿಯಾಗಿದ್ದ ಎಂದು ತಿಳಿದು ಬಂದಿದೆ.

ಮದ್ಯದ ಬಾಟಲ್​ಗಳನ್ನು ನೋಡುತ್ತಿದ್ದಂತೆ ಯುವಕರು, ಹಿರಿಯರು, ಮಹಿಳೆಯರು ಸೇರಿದಂತೆ ಗ್ರಾಮಸ್ಥರೆಲ್ಲ ಕಾರಿನಲ್ಲಿದ್ದ ಲಿಕ್ಕರ್​ ಬಾಟಲ್​ಗಳನ್ನು ಲೂಟಿ ಮಾಡಿದ್ದಾರೆ. ಆಗ ಯುವಕರ ಗುಂಪೊಂದು ಮದ್ಯದ ಬಾಟಲಿಗಳನ್ನು ಕಳ್ಳತನ ಮಾಡುತ್ತಿದ್ದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸಖತ್​ ವೈರಲ್​ ಆಗ್ತಿದೆ.

ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸುವ ವೇಳೆ ಗಾಗಲೇ ಕಾರಿನಲ್ಲಿದ್ದ ಮದ್ಯದ ಬಾಟಲ್​ಗಳು ಮಾಯವಾಗಿದ್ದವು. ಈ ಸಂಬಂಧ ಪೊಲೀಸರು ಕೇಸ್​ ದಾಖಲಿಕೊಂಡಿದ್ದು, 8 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಶಸ್ತ್ರಾಸ್ತ್ರಗಳ ಬಿಡಿಭಾಗಗಳ ಪೂರೈಕೆಯಲ್ಲಿ ವಿಳಂಬ..ಯುರೋಪ್​ನ ಎಂಬಿಡಿಎ ಸಂಸ್ಥೆಗೆ ಭಾರತ ದಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.