ETV Bharat / bharat

ಮಲ್ಯ ₹9000- ನೀರವ್‌ ಮೋದಿ ₹14000- ರಿಷಿ ಅಗರ್ವಾಲ್‌ ₹23000.. ಮೋದಿ ಸರ್ಕಾರದ ವಿರುದ್ಧ ವರುಣ್ ಗಾಂಧಿ ಟ್ವೀಟ್‌ ಅಸ್ತ್ರ..

author img

By

Published : Feb 18, 2022, 4:02 PM IST

varun_gandhi
ವರುಣ್​ ಗಾಂಧಿ

ದೇಶದಲ್ಲಿ ಕೋಟಿ ಕೋಟಿ ಸಾಲ ಮಾಡಿದವರು ಐಷಾರಾಮಿ ಜೀವನವನ್ನು ಜೀವಿಸುತ್ತಿದ್ದಾರೆ, ದಿನಕ್ಕೆ 14 ಜನ ಸಾಲಮಾಡಿದ ಜನಸಾಮಾನ್ಯರು ಸಾಯುತ್ತಿದ್ದಾರೆ ಎಂದು ತಮ್ಮದೇ ಸರ್ಕಾರದ ವಿರುದ್ಧ ಟ್ವೀಟ್​ಮಾಡಿದ ವರುಣ್​ ಗಾಂಧಿ...ವರುಣ್ ಗಾಂಧಿ ತಮ್ಮದೇ ಪಕ್ಷ ಮತ್ತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅವರು ಪತ್ರಗಳು ಮತ್ತು ಟ್ವೀಟ್‌ಗಳ ಮೂಲಕ ಸರ್ಕಾರಕ್ಕೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ..

ಲಖನೌ : ಭಾರತೀಯ ಜನತಾ ಪಕ್ಷದ ಪಿಲಿಭಿತ್ ಸಂಸದ ವರುಣ್ ಗಾಂಧಿ ಮತ್ತೊಮ್ಮೆ ತಮ್ಮದೇ ಸರ್ಕಾರವನ್ನು ಟೀಕಿಸಿದ್ದಾರೆ. ಬ್ಯಾಂಕ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವರುಣ್ ಗಾಂಧಿ ಅವರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಮತ್ತು ಕಠಿಣ ಕ್ರಮವನ್ನು ನಿರೀಕ್ಷಿಸುವುದಾಗಿ ಹೇಳಿದ್ದಾರೆ.

ದೇಶದ ದೊಡ್ಡ ಕೈಗಾರಿಕೋದ್ಯಮಿಗಳ ಉದಾಹರಣೆಯನ್ನು ನೀಡಿರುವ ಅವರು, ಸರ್ಕಾರದಿಂದ ಕ್ರಮಕ್ಕೆ ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ. "ವಿಜಯ್ ಮಲ್ಯ- 9000 ಕೋಟಿ, ನೀರವ್ ಮೋದಿ- 14,000 ಕೋಟಿ, ರಿಷಿ ಅಗರ್ವಾಲ್ - 23,000 ಕೋಟಿ. ಇಂದು ದೇಶದಲ್ಲಿ ಸಾಲದ ಹೊರೆಯಿಂದ ದಿನಕ್ಕೆ 14 ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

  • विजय माल्या: 9000 करोड़

    नीरव मोदी: 14000 करोड़

    ऋषि अग्रवाल: 23000 करोड़

    आज जब कर्ज के बोझ तले दब कर देश में रोज लगभग 14 लोग आत्महत्या कर रहे हैं, तब ऐसे धन पशुओं का जीवन वैभव के चरम पर है।

    इस महा भ्रष्ट व्यवस्था पर एक ‘मजबूत सरकार’ से ‘मजबूत कार्यवाही’ की अपेक्षा की जाती है।

    — Varun Gandhi (@varungandhi80) February 18, 2022 " class="align-text-top noRightClick twitterSection" data=" ">

ಅಂತಹ ಸಂಪತ್ತು ಹೊಂದಿದವರು ವೈಭವದ ಜೀವನವನ್ನು ಮಾಡುತ್ತಿದ್ದಾರೆ. ಈ ಮೆಗಾ-ಭ್ರಷ್ಟ ವ್ಯವಸ್ಥೆಯ ಮೇಲೆ ಸರ್ಕಾರ ಬಲವಾದ ಕ್ರಮ ತೆಗೆದುಕೊಳ್ಳುವ ನಿರೀಕ್ಷೆಯಿದೆ" ಟ್ವೀಟ್​ನಲ್ಲಿ ಹೇಳಿದ್ದಾರೆ.

ವರುಣ್ ಗಾಂಧಿ ತಮ್ಮದೇ ಪಕ್ಷ ಮತ್ತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅವರು ಪತ್ರಗಳು ಮತ್ತು ಟ್ವೀಟ್‌ಗಳ ಮೂಲಕ ಸರ್ಕಾರಕ್ಕೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.

4 ದಿನಗಳ ಹಿಂದೆ ಒಂದು ಲಕ್ಷ ಮಂದಿಗೆ ಒತ್ತೆ ಇಟ್ಟಿರುವ ಚಿನ್ನ ಹರಾಜಿಗೆ ಸಂಬಂಧಿಸಿದಂತೆ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯನ್ನು ಟ್ವಿಟರ್​ನಲ್ಲಿ ಅಪ್ಲೋಡ್ ಮಾಡಿ ಪ್ರಶ್ನೆ ಎತ್ತಿದ್ದರು.

ಸಾವಿರಾರು ರೂಪಾಯಿ ಸಾಲ ತೀರಿಸಲು ಸಾಧ್ಯವಾಗದವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಮತ್ತು ಸಾವಿರಾರು ಕೋಟಿ ದೋಚುವವರ ವಿರುದ್ಧ ಐಷಾರಾಮಿ ಜೀವನ ನಡೆಸುತ್ತಾರೆ ಎಂದು ಹೇಳಿದ್ದರು.

ಇದನ್ನೂ ಓದಿ: ಶ್ರೀನಗರದಲ್ಲಿ 'ನಿಗೂಢ ಸ್ಫೋಟ'ಕ್ಕೆ ಅಂಗಡಿ ಉಡೀಸ್​.. ಉಗ್ರರಿಂದ ಗ್ರೆನೇಡ್​ ದಾಳಿ ಶಂಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.