ETV Bharat / bharat

'ಸ್ವಾತಂತ್ರ್ಯ ಸಿಕ್ಕಿದ್ದು 2014 ರಲ್ಲಿ, 1947ರಲ್ಲಿ ಸಿಕ್ಕಿದ್ದು ಭಿಕ್ಷೆ': ಕಂಗನಾ ಹೇಳಿಕೆಗೆ ವರುಣ್ ಗಾಂಧಿ ಕಿಡಿ

author img

By

Published : Nov 11, 2021, 3:59 PM IST

ಕಂಗನಾ ರಣಾವತ್ ಹೇಳಿಕೆಗೆ ವರುಣ್ ಗಾಂಧಿ ಕಿಡಿ
ಕಂಗನಾ ರಣಾವತ್ ಹೇಳಿಕೆಗೆ ವರುಣ್ ಗಾಂಧಿ ಕಿಡಿ

ಒಂದು ಬಾರಿ ಮಹಾತ್ಮ ಗಾಂಧಿಯವರ ತ್ಯಾಗವನ್ನು ಅವಮಾನಿಸುತ್ತೀರಿ, ಕೆಲವೊಮ್ಮೆ ಅವರ ಹಂತಕನನ್ನು ಗೌರವಿಸುತ್ತೀರಿ ಮತ್ತು ಈಗ ಮಂಗಲ್ ಪಾಂಡೆ, ರಾಣಿ ಲಕ್ಷ್ಮೀಬಾಯಿ, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಬಗ್ಗೆ ತಿರಸ್ಕಾರ ವ್ಯಕ್ತಪಡಿಸುತ್ತಿದ್ದೀರಿ. ನಾನು ಇದನ್ನು ಹುಚ್ಚುತನ ಎನ್ನಬೇಕಾ ಅಥವಾ ದೇಶದ್ರೋಹ ಎಂದು ಕರೆಯಬೇಕೇ? ಎಂದು ವರುಣ್ ಗಾಂಧಿ ಅವರು ಕಂಗನಾ ಅವರನ್ನು ಪ್ರಶ್ನಿಸಿದ್ದಾರೆ.

ನವದೆಹಲಿ: ಭಾರತಕ್ಕೆ ನಿಜವಾಗಿ ಸ್ವಾತಂತ್ರ್ಯ ಸಿಕ್ಕಿದ್ದು 2014 ರಲ್ಲಿ. 1947ರಲ್ಲಿ ಸಿಕ್ಕಿದ್ದು ಭಿಕ್ಷೆ ಎಂದು ಹೇಳಿದ್ದ ಸಿನಿಮಾ ನಟಿ ಕಂಗನಾ ರಣಾವತ್ (Kangana Ranaut) ವಿರುದ್ಧ ಬಿಜೆಪಿ ಸಂಸದ ವರುಣ್ ಗಾಂಧಿ (Lok Sabha MP Varun Gandhi) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದೊಂದು ದೇಶವಿರೋಧಿ ಕೃತ್ಯವಾಗಿದೆ ಎಂದು ಅವರು ಹರಿಹಾಯ್ದಿದ್ದಾರೆ.

ನಮ್ಮ ಸ್ವಾತಂತ್ರ್ಯ ಚಳವಳಿಯ ಅನಂತ ತ್ಯಾಗಗಳನ್ನು ಜನರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಲಕ್ಷಾಂತರ ಜೀವಗಳನ್ನು ಹೋರಾಟಕ್ಕಾಗಿ ಕಳೆದುಕೊಂಡರು. ಹಲವಾರು ಕುಟುಂಬಗಳು ನಾಶವಾದವು. ಈ ಹಿನ್ನೆಲೆಯಲ್ಲಿ ಅವರ ಹೇಳಿಕೆಯನ್ನು ಕೇವಲ ಅಸಡ್ಡೆ ಅಥವಾ ನಿಷ್ಠುರ ಹೇಳಿಕೆಯಾಗಿ ಪರಿಗಣಿಸಿ ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದು ದೇಶವಿರೋಧಿ ಕೃತ್ಯ. ಇದನ್ನು ಹಾಗೆಯೇ ಕರೆಯಬೇಕು. ಇಲ್ಲದಿದ್ದರೆ ಸ್ವಾತಂತ್ರ್ಯಕ್ಕಾಗಿ ರಕ್ತ ಸುರಿಸಿದ ಎಲ್ಲರಿಗೂ ದ್ರೋಹವಾಗುತ್ತದೆ ಎಂದು ಕಂಗನಾ ವಿರುದ್ಧ ಗಾಂಧಿ ಕಿಡಿಕಾರಿದ್ದಾರೆ.

  • कभी महात्मा गांधी जी के त्याग और तपस्या का अपमान, कभी उनके हत्यारे का सम्मान, और अब शहीद मंगल पाण्डेय से लेकर रानी लक्ष्मीबाई, भगत सिंह, चंद्रशेखर आज़ाद, नेताजी सुभाष चंद्र बोस और लाखों स्वतंत्रता सेनानियों की कुर्बानियों का तिरस्कार।

    इस सोच को मैं पागलपन कहूँ या फिर देशद्रोह? pic.twitter.com/Gxb3xXMi2Z

    — Varun Gandhi (@varungandhi80) November 11, 2021 " class="align-text-top noRightClick twitterSection" data=" ">

ಒಂದು ಬಾರಿ ಮಹಾತ್ಮ ಗಾಂಧಿಯವರ ತ್ಯಾಗವನ್ನು ಅವಮಾನಿಸುತ್ತೀರಿ, ಕೆಲವೊಮ್ಮೆ ಅವರ ಹಂತಕನನ್ನು ಗೌರವಿಸುತ್ತೀರಿ ಮತ್ತು ಈಗ ಮಂಗಲ್ ಪಾಂಡೆ, ರಾಣಿ ಲಕ್ಷ್ಮೀಬಾಯಿ, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಬಗ್ಗೆ ತಿರಸ್ಕಾರ ವ್ಯಕ್ತಪಡಿಸುತ್ತಿದ್ದೀರಿ. ನಾನು ಇದನ್ನು ಹುಚ್ಚುತನ ಎನ್ನಬೇಕಾ ಅಥವಾ ದೇಶದ್ರೋಹ ಎಂದು ಕರೆಯಬೇಕೇ? ಎಂದು ಅವರು ಪ್ರಶ್ನಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಕಂಗನಾ ಅವರು ಮಾತನಾಡಿದ ಕೆಲವು ವಿಡಿಯೋ ತುಣುಕುಗಳನ್ನು ವರುಣ್ ಗಾಂಧಿ ಶೇರ್​ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರು "ಅದು ಸ್ವಾತಂತ್ರ್ಯವಲ್ಲ 'ಭೀಖ್' (ಭಿಕ್ಷೆ), ಮತ್ತು ಸ್ವಾತಂತ್ರ್ಯವು 2014 ರಲ್ಲಿ ಬಂದಿತು" ಎಂದು ಹೇಳಿದ್ದಾರೆ (That was not freedom but 'bheekh' (alms).

ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಶಸ್ತಿ ಪಡೆದ ಕಂಗನಾ 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದನ್ನು ಉಲ್ಲೇಖಿಸಿ ಆ ರೀತಿ ಹೇಳಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.