ETV Bharat / bharat

ಯುಪಿಯಲ್ಲಿ ನಾಳೆ 6ನೇ ಹಂತದ ವೋಟಿಂಗ್: ಸಿಎಂ ಯೋಗಿ ಸೇರಿ ಪ್ರಮುಖರ ಭವಿಷ್ಯ ನಿರ್ಧಾರ

author img

By

Published : Mar 2, 2022, 9:37 PM IST

Uttar Pradesh Assembly polls
Uttar Pradesh Assembly polls

ಉತ್ತರ ಪ್ರದೇಶದಲ್ಲಿ ನಾಳೆ 6ನೇ ಹಂತದ ಮತದಾನ ನಡೆಯಲಿದ್ದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಪ್ರಮುಖರು ಕಣದಲ್ಲಿದ್ದಾರೆ.

ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಗುರುವಾರ 6ನೇ ಹಂತದ ಮತದಾನ ನಡೆಯಲಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸೇರಿದಂತೆ ಪ್ರಮುಖ ಮುಖಂಡರ ಭವಿಷ್ಯ ನಿರ್ಧಾರವಾಗಲಿದೆ. ಒಟ್ಟು 57 ಕ್ಷೇತ್ರಗಳಲ್ಲಿ ವೋಟಿಂಗ್​ ಆಗಲಿದ್ದು ಯೋಗಿ ಆದಿತ್ಯನಾಥ್, ಕಾಂಗ್ರೆಸ್​ನ ಅಜಯ್ ಕುಮಾರ್​ ಲಾಲು ಹಾಗೂ ಸಮಾಜವಾದಿ ಪಕ್ಷದ ಸ್ವಾಮಿ ಪ್ರಸಾದ್ ಮೌರ್ಯ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

ಉತ್ತರ ಪ್ರದೇಶದ 403 ವಿಧಾನಸಭೆ ಕ್ಷೇತ್ರಗಳಿಗೆ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಈಗಾಗಲೇ 292 ಕ್ಷೇತ್ರಗಳಿಗೆ 5 ಹಂತಗಳಲ್ಲಿ ಮತದಾನವಾಗಿದೆ. ಉಳಿದ 111 ಕ್ಷೇತ್ರಗಳಿಗೆ 6 ಮತ್ತು 7ನೇ ಹಂತದಲ್ಲಿ ಮತದಾನವಾಗಲಿದೆ. ನಾಳೆ ಅಂಬೇಡ್ಕರ್​ನಗರ, ಬಲ್ರಾಮ್​ಪುರ್, ಸಿದ್ಧಾರ್ಥನಗರ, ಬಸ್ತಿ, ಶಾಂತಿ ಕಬೀರ್ ನಗರ, ಗೋರಖ್ಪುರ್​ ಹಾಗು ಕುಶಿನಗರದಲ್ಲಿ ವೋಟಿಂಗ್ ನಡೆಯಲಿದೆ.

2017ರ ವಿಧಾನಸಭೆ ಚುನಾವಣೆಯ ವೇಳೆ 57 ಕ್ಷೇತ್ರಗಳ ಪೈಕಿ ಬಿಜೆಪಿ 46 ಸ್ಥಾನಗಳಲ್ಲಿ ಭರ್ಜರಿ ಜಯಭೇರಿ ಬಾರಿಸಿತ್ತು. ಆದರೆ, ಈ ಸಲದ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ. ನಾಳೆಯ ಚುನಾವಣೆ ಕಣದಲ್ಲಿ 676 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಒಟ್ಟು 2.14 ಕೋಟಿ ಮತದಾರರು ಇವರ ಭವಿಷ್ಯ ಬರೆಯಲಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಉತ್ತರ ಪ್ರದೇಶ, ಗೋವಾ, ಪಂಜಾಬ್​ ಸೇರಿದಂತೆ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಮಾರ್ಚ್​ 10ರಂದು ಬಹಿರಂಗಗೊಳ್ಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.