ETV Bharat / bharat

UPSC 2021 Results: ಪರೀಕ್ಷೆಯಲ್ಲಿ ಒಟ್ಟಿಗೆ ಪಾಸ್​ ಆದ ಇಬ್ಬರು ವೈದ್ಯ ಸಹೋದರರು

author img

By

Published : May 30, 2022, 6:48 PM IST

UPSC 2021 Results
UPSC 2021 Results

ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ರಾಜಸ್ಥಾನ ಸಹ ಉತ್ತಮ ಪ್ರದರ್ಶನ ತೋರಿದ್ದು, ಅನೇಕ ಅಭ್ಯರ್ಥಿಗಳು ಪಾಸ್​ ಆಗಿದ್ದಾರೆ. ಪ್ರಮುಖವಾಗಿ ಒಂದೇ ಕುಟುಂಬದ ಇಬ್ಬರು ವೈದ್ಯ ಸಹೋದರರು ಕಠಿಣ ಪರೀಕ್ಷೆ ಪಾಸ್​ ಆಗಿದ್ದಾರೆ.

ಜೈಪುರ್​(ರಾಜಸ್ಥಾನ): 2021ನೇ ಸಾಲಿನ ಯುಪಿಎಸ್​​ಸಿ ಅಂತಿಮ ಪರೀಕ್ಷಾ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಒಟ್ಟು 685 ಅಭ್ಯರ್ಥಿಗಳು ಪಾಸ್​ ಆಗಿದ್ದಾರೆ. ಇದರಲ್ಲಿ ರಾಜಸ್ಥಾನ ಜೈಪುರದ ತನುಶ್ರೀ ಮೀನಾ 120ನೇ ಸ್ಥಾನ ಪಡೆದುಕೊಂಡಿದ್ದು, ಮತ್ತೊಂದೆಡೆ ಗಂಗಾನಗರದ ರವಿ ಸಿಹಾಗ್​​ 18ನೇ ಸ್ಥಾನ ಹಾಗೂ ಬಿರಾಟ್​ ನಗರದ ಸುನೀಲ್​​ ಧ್ವನಂತ್​ 22ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ವಿಶೇಷ ಎಂದರೆ ನಾಗೌರ್​ ಜಿಲ್ಲೆಯ ಇಬ್ಬರು ವೈದ್ಯ ಸಹೋದರರೂ ಪರೀಕ್ಷೆಯಲ್ಲಿ ಒಟ್ಟಿಗೆ ಪಾಸ್​​ ಆಗಿದ್ದಾರೆ.

ಇದನ್ನೂ ಓದಿ: ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ಪ್ರಶಾಂತ್​.. ರಾಜ್ಯದ ಒಂದೇ ಸಂಸ್ಥೆಯ 20 ಅಭ್ಯರ್ಥಿಗಳು ಆಯ್ಕೆ

ನಾಗೌರ್​​ ಜಿಲ್ಲೆಯ ಭಾವಂತ್​ ಗ್ರಾಮದ ಇಬ್ಬರು ವೈದ್ಯರಾದ ಡಾ. ಕೃಷ್ಣ ಕಾಂತ್​ ಕನ್ವಾಡಿಯಾ 382ನೇ ಸ್ಥಾನ ಹಾಗೂ ಡಾ. ರಾಹುಲ್ ಕನ್ವಾಡಿಯಾ 536ನೇ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ ಶಾಸಕ ರಾಮ್​ ಪ್ರತಾಪ್​ ಕಸ್ನಿಯಾ ಅವರ ಸೋದರಳಿಯ ಬಿಕಾನೇರ್ ನಿವಾಸಿ ಮೋಹಿತ್​ ಕಸ್ನಿಯಾ 61ನೇ ಸ್ಥಾನ ಪಡೆದುಕೊಂಡಿದ್ದು, ಬಿಕಾನೇರ್​ನ ಪ್ರಜ್ಞಾ 91ನೇ ರ‍್ಯಾಂಕ್, ದಿನೇಶ್ ಪ್ರತಾಪ್ ಸಿಂಗ್ 208ನೇ ರ‍್ಯಾಂಕ್, ಪುರಸಭೆಯ ಪಿಆರ್​ಒ ಸೀತಾರಾಮ್​ ಮೀನಾ ಅವರ ಪುತ್ರ ಹೇರಾಜ್​ ಮೀನಾ 485ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಉಳಿದಂತೆ ರಾಜಸ್ಥಾನದ ಆಕಾಶ್ ಕುಮಾರ್ ಶರ್ಮಾ 507, ಪರೀಕ್ಷಿತ್ ಸಿಹಾಗ್​ 529 ಸ್ಥಾನ ಪಡೆದಿದ್ದಾರೆ.

ಈ ಸಲದ ಯುಪಿಎಸ್​ಸಿ ಪರೀಕ್ಷೆಯಲ್ಲಿ ಟಾಪ್​ 10 ಸ್ಥಾನಗಳ ಪೈಕಿ ಮೊದಲ ನಾಲ್ಕರಲ್ಲಿ ಮಹಿಳಾ ಅಭ್ಯರ್ಥಿಗಳು ಮೆಲುಗೈ ಸಾಧಿಸಿದ್ದು, ಶೃತಿ ಶರ್ಮಾ,ಅಂಕಿತಾ ಅಗರ್​ವಾಲ್​,ಗಾಮಿನಿ ಸಿಂಗ್ಲಾ ಹಾಗೂ ಐಶ್ವರ್ಯಾ ವರ್ಮಾ ಇದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.