ETV Bharat / bharat

ಯುಪಿ ವಿಧಾನಸಭೆ: ಮೊದಲ ಹಂತದ ಚುನಾವಣೆಗೆ ಮತದಾನ ಆರಂಭ​​; ಯೋಗಿ ಸಂಪುಟದ 9 ಸಚಿವರ ಭವಿಷ್ಯ ನಿರ್ಧಾರ

author img

By

Published : Feb 10, 2022, 4:51 AM IST

Updated : Feb 10, 2022, 7:04 AM IST

UP Assembly polls
UP Assembly polls

ಉತ್ತರ ಪ್ರದೇಶದಲ್ಲಿಂದು 58 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಸಚಿವರಾಗಿದ್ದ 9 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಲಖನೌ(ಉತ್ತರ ಪ್ರದೇಶ): ಪಂಚರಾಜ್ಯ ಚುನಾವಣೆಗಳ ಪೈಕಿ ಇಂದು ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಚುನಾವಣೆಗೆ ಮತದಾನ ಆರಂಭವಾಗಿದೆ. 403 ಕ್ಷೇತ್ರಗಳ ಪೈಕಿ 11 ಜಿಲ್ಲೆಗಳ 58 ಕ್ಷೇತ್ರಗಳಲ್ಲಿ ವೋಟಿಂಗ್​​ ಆಗಲಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದ್ದು, ಸಂಜೆ 6 ಗಂಟೆಯವರೆಗೆ ಮತದಾರರಿಗೆ ವೋಟ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಈ ಎಲ್ಲ ವಿಧಾನಸಭೆ ಕ್ಷೇತ್ರಗಳಿಗೆ ಇಂದು ಮತದಾನ
ಮೊದಲ ಹಂತದಲ್ಲಿ 58 ಕ್ಷೇತ್ರಗಳಿಗೆ ಮತದಾನ

ಮುಜಾಫರ್​ನಗರ, ಮೀರತ್, ಭಾಗಪತ್, ಗಾಜಿಯಾಬಾದ್​, ಶಾಮ್ಲಿ, ಹಂಪೂರ್, ಗೌತಮ್ ಬುದ್ಧನಗರ, ಬುಲದ್​ಶಹರ್​, ಅಲಿಘಡ, ಆಗ್ರಾ ಮತ್ತು ಮಥುರಾದಲ್ಲಿ ಮತದಾನವಾಗಲಿದೆ. ಪಟ್ಟು 623 ಅಭ್ಯರ್ಥಿಗಳು ತಮ್ಮ ಭವಿಷ್ಯ ನಿರ್ಧರಿಸಿಕೊಳ್ಳಲಿದ್ದು, ಒಟ್ಟು 2.27 ಕೋಟಿ ಜನರು ಮತದಾನ ಮಾಡಲಿದ್ದಾರೆ.

ಈ ಎಲ್ಲ ವಿಧಾನಸಭೆ ಕ್ಷೇತ್ರಗಳಿಗೆ ಇಂದು ಮತದಾನ
ಈ ಎಲ್ಲ ವಿಧಾನಸಭೆ ಕ್ಷೇತ್ರಗಳಿಗೆ ಇಂದು ಮತದಾನ

ಯೋಗಿ ಆದಿತ್ಯನಾಥ್ ಸಚಿವ ಸಂಪುಟದಲ್ಲಿ ಮಂತ್ರಿಗಳಾಗಿ ಕಾರ್ಯ ನಿರ್ವಹಿಸಿರುವ 9 ಸಚಿವರು ಕಣದಲ್ಲಿದ್ದು, ಇಂದು ಅವರ ಭವಿಷ್ಯ ನಿರ್ಧಾರವಾಗಲಿದೆ. ಇದರ ಜೊತೆಗೆ ರಾಷ್ಟ್ರೀಯ ಲೋಕದಳ ಮುಖ್ಯಸ್ಥ ಜಯಂತ್​ ಚೌಧರಿ ಕೂಡ ಕಣದಲ್ಲಿದ್ದಾರೆ. ಈ ಹಿಂದೆ 2017ರಲ್ಲಿ ಚುನಾವಣೆಯಲ್ಲಿ 58 ಕ್ಷೇತ್ರಗಳ ಪೈಕಿ ಭಾರತೀಯ ಜನತಾ ಪಾರ್ಟಿ 53 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿತ್ತು. ಈ ಭಾಗದಲ್ಲಿ ಜಾಟ್​ ಸಮುದಾಯ ಪ್ರಬಲವಾಗಿದ್ದು, ಇದೇ ಕಾರಣಕ್ಕಾಗಿ ಬಿಜೆಪಿ 17 ಜಾಟ್​ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ. ಕೇಂದ್ರ ಸರ್ಕಾರ ಕೃಷಿ ಕಾಯ್ದೆ ಜಾರಿಗೆ ತಂದ ಬಳಿಕ ಈ ಭಾಗದ ಜನರು ಆಡಳಿತ ಪಕ್ಷ ಬಿಜೆಪಿ ವಿರುದ್ಧ ತಿರುಗಿಬಿದ್ದಿದ್ದಾರೆ. ಇದೇ ಕಾರಣಕ್ಕಾಗಿ ಕೇಂದ್ರ ಸರ್ಕಾರ ಕೃಷಿ ಕಾಯ್ದೆ ವಾಪಸ್ ಪಡೆದುಕೊಂಡಿತ್ತು. ಇದೀಗ ಜಾಟ್ ಸಮುದಾಯ ಯಾರಿಗೆ ಜೈಕಾರ ಹಾಕಲಿದ್ದಾರೆಂಬುದು ತೀವ್ರ ಕುತೂಹಲ ಮೂಡಿಸಿದೆ.

ಇಂದು ಚುನಾವಣೆ ನಡೆಯಲಿರುವ ಎಲ್ಲ ಕ್ಷೇತ್ರಗಳ ಮಾಹಿತಿ
ಇಂದು ಚುನಾವಣೆ ನಡೆಯಲಿರುವ ಎಲ್ಲ ಕ್ಷೇತ್ರಗಳ ಮಾಹಿತಿ

ಇದನ್ನೂ ಓದಿರಿ: ಪ್ರೇಮಿಗಳ ದಿನದಂದು ಮದುವೆಯಾಗಲಿದೆ ಟ್ರಾನ್ಸ್​​ಜೆಂಡರ್ ಜೋಡಿ!

ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 7 ಹಂತದಲ್ಲಿ ಮತದಾನವಾಗಲಿದ್ದು, ಮುಂದಿನ ತಿಂಗಳ 10ರಂದು ಫಲಿತಾಂಶ ಬಹಿರಂಗೊಳ್ಳಲಿದೆ.

Last Updated :Feb 10, 2022, 7:04 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.