ETV Bharat / bharat

ವಿವೇಕಾನಂದರ ಪ್ರತಿಮೆಗೆ ಪಾದರಕ್ಷೆ ಧರಿಸಿ ಮಾಲಾರ್ಪಣೆ: ಭಾರಿ ವಿವಾದಕ್ಕೆ ಕಾರಣವಾದ ಸಚಿವರು

author img

By

Published : Jan 12, 2023, 8:57 PM IST

union-minister-garlands-swami-vivekananda-wearing-shoes-sparks-controversy
ವಿವೇಕಾನಂದರ ಪ್ರತಿಮೆಗೆ ಪಾದರಕ್ಷೆ ಧರಿಸಿ ಮಾಲಾರ್ಪಣೆ: ಭಾರಿ ವಿವಾದಕ್ಕೆ ಕಾರಣವಾದ ಬಿಜೆಪಿ ಕೇಂದ್ರ ಸಚಿವ

ಕೇಂದ್ರ ಸಚಿವರಿಂದ ಪಾದರಕ್ಷೇ ಧರಿಸಿ ವಿವೇಕಾನಂದರ ಮೂರ್ತಿಗೆ ಮಾಲಾರ್ಪಣೆ ಆರೋಪ - ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಟಿಎಂಸಿ- ಬಿಜೆಪಿಗೆ ಸಂಸ್ಕೃತಿಯ ಬಗ್ಗೆ ಯಾವುದೇ ಅರಿವಿಲ್ಲ ಎಂದ ಟಿಎಂಸಿ ಜಿಲ್ಲಾ ವಕ್ತಾರ.

ಮಾಲ್ಡಾ (ಪಶ್ಚಿಮ ಬಂಗಾಳ): ಸ್ವಾಮಿ ವಿವೇಕಾನಂದರ 161ನೇ ಜಯಂತಿ ನಿಮಿತ್ತ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವ ಕಪಿಲ್ ಮೊರೇಶ್ವರ್ ಪಾಟೀಲ್ ಗುರುವಾರ ಸ್ವಾಮಿ ವಿವೇಕಾನಂದರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಇಡೀ ದೇಶವೇ ಸ್ವಾಮಿ ವಿವೇಕಾನಂದರಿಗೆ ನಮನ ಸಲ್ಲಿಸಿತು. ಆದರೆ, ಕೇಂದ್ರ ಸಚಿವರು ಮಾಲಾರ್ಪಣೆಗೆ ಭಾರಿ ವಿವಾದಕ್ಕೆ ನಾಂದಿ ಹಾಡಿದ್ದು, ಕೇಂದ್ರ ಸಚಿವ ಮೊರೇಶ್ವರ್​ ಪಾಟೀಲ್​ ಅವರು ಪಾದರಕ್ಷೆನಗಳನ್ನು ಧರಿಸಿ ಸ್ವಾಮಿ ವಿವೇಕಾನಂದ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿದ್ದಾರೆ ಎಂಬ ಆರೋಪ ಮಾಡಲಾಗಿದೆ.

ಕಾರ್ಯಕ್ರಮದ ನಂತರ ಪಶ್ಚಿಮ ಬಂಗಾಳದ ರಾಜ್ಯದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ಗುರುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಮಾಲ್ಡಾದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಸ್ಮರಣಾರ್ಥವಾಗಿ ನಗರದಲ್ಲಿ ಮೆರವಣಿಗೆ ನಡೆಯಿತು. ಮಾಲ್ಡಾ ನಗರದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಕಪಿಲ್ ಮೊರೇಶ್ವರ ಪಾಟೀಲ್​ ಅವರು ಬೃಹತ್​ ಮೆರವಣಿಗೆ ಬಳಿಕ ರಾಮಕೃಷ್ಣ ಮಿಷನ್ ತಲುಪಿದ್ದಾರೆ.

ರಾಮಕೃಷ್ಣ ಮಿಷನ್‌ನಲ್ಲಿ ಪುಷ್ಪಾರ್ಚನೆ ಮಾಡಿದ ನಂತರ ಕೇಂದ್ರ ಸಚಿವರು ಪಾದರಕ್ಷೆ ಧರಿಸಿ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು ಎಂದು ಆರೋಪ ಕೇಳಿ ಬಂದಿದೆ. ಈ ಘಟನೆಯಿಂದಾಗಿ ಟಿಎಂಸಿ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರದ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಜಿಲ್ಲಾ ತೃಣಮೂಲ ವಕ್ತಾರ ಶುಭಮೋಯ್ ಬಸು, ಕೇಂದ್ರ ಸಚಿವರು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುವುದರ ಹಿಂದಿನ ಏಕೈಕ ಉದ್ದೇಶ ಎಂದರೆ ಅದು ರಾಜಕೀಯ ಪ್ರವಾಸೋದ್ಯಮವಾಗಿದೆ ಎಂದು ಆರೋಪಿಸಿದ್ದಾರೆ. ಸಚಿವರಿಗೆ ರಾಜ್ಯದ ಸಂಪ್ರದಾಯ ಮತ್ತು ಸಂಸ್ಕೃತಿಯ ಬಗ್ಗೆ ಅರಿವಿಲ್ಲ ಎಂದು ಟೀಕಿಸಿದ್ದಾರೆ.

''ವಿವೇಕಾನಂದ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದ ನನಗೆ ಇಂದು ನಡೆದ ಘಟನೆಯನ್ನು ಕಂಡರೆ ನಾಚಿಕೆಯಾಗುತ್ತಿದೆ. ಇಂದು ಬೆಳಗ್ಗೆ ನಗರಸಭೆ, ಆಡಳಿತ ಮಂಡಳಿ ಹಾಗೂ ಮಾಲ್ಡಾ ನಗರದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಸೇರಿ ಸ್ವಾಮಿ ವಿವೇಕಾನಂದರನ್ನು ಸ್ಮರಿಸಿಕೊಂಡೆವು. ಬೃಹತ್​ ಮೆರವಣಿಗೆ ನಂತರ ವಿವೇಕಾನಂದರ ಪ್ರತಿಮೆ ಮುಂದೆ ಬಂದೆವು. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರು ಬೂಟುಗಳನ್ನು ಧರಿಸಿ ಸ್ವಾಮೀಜಿಯ ಮೂರ್ತಿಗೆ ಮಾಲಾರ್ಪಣೆ ಮಾಡಿದ್ದಾರೆ ಇದು ಖಂಡನೀಯ’’ ಎಂದು ಜಿಲ್ಲಾ ತೃಣಮೂಲ ವಕ್ತಾರ ಶುಭಮೋಯ್​ ಬಸು ಅವರು ಆರೋಪಿಸಿದರು

"ರಾಜಕೀಯ ಪ್ರವಾಸೋದ್ಯಮಕ್ಕಾಗಿ ಅವರು ಬಂಗಾಳಕ್ಕೆ ಬಂದಿದ್ದಾರೆ. ಕೇಂದ್ರ ಸಚಿವರಿಗೆ ಬಂಗಾಳಿ ಸಂಸ್ಕೃತಿಯ ಬಗ್ಗೆ ಯಾವುದೇ ಕಲ್ಪನೆ ಇಲ್ಲ. ಅವರು ಧೀರ ಸನ್ಯಾಸಿಯನ್ನು ಅವಮಾನಿಸಿದ ರೀತಿ ನಮ್ಮನ್ನು ತಲೆ ತಗ್ಗಿಸುವಂತೆ ಮಾಡುತ್ತದೆ. ಬಿಜೆಪಿಗೆ ಹಿಂದೂ ಧರ್ಮದ ಸಂಸ್ಕೃತಿಯ ಬಗ್ಗೆ ಯಾವುದೇ ಅರಿವಿಲ್ಲ ಎಂದು ಈ ಘಟನೆ ಸಾಬೀತುಪಡಿಸುತ್ತದೆ" ಎಂದು ಟಿಎಂಸಿ ವಕ್ತಾರರು ಕಟುವಾಗಿ ಟೀಕಿಸಿದರು. ಆದರೆ, ಇದುವರೆಗೂ ಈ ಬಗ್ಗೆ ಬಿಜೆಪಿ ಪಕ್ಷವು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ವೈದ್ಯರು ಶಸ್ತ್ರಚಿಕಿತ್ಸೆ ಅರ್ಧದಲ್ಲೇ ಬಿಟ್ಟಿದ್ದಾರೆಂಬ ಆರೋಪ.. ನ್ಯಾಯ ಕೊಡಿಸುವುದಾಗಿ ಸಂಬಂಧಿಕರಿಗೆ ಅಧೀಕ್ಷರ ಭರವಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.