ETV Bharat / bharat

ಉತ್ತರ ಪ್ರದೇಶದಲ್ಲಿ ಮತ್ತೊಂದು 'ಲವ್​ ಜಿಹಾದ್​': ಇಬ್ಬರು ಕಾರ್ಮಿಕರ ವಿರುದ್ಧ ದೂರು ದಾಖಲು

author img

By

Published : Dec 2, 2020, 5:19 PM IST

Two labourers booked under anti-conversion law in UP
ಸಾಂದರ್ಭಿಕ ಚಿತ್ರ

ಉತ್ತರಪ್ರದೇಶದಲ್ಲಿ ಈಗ ಕಾನೂನು ರಹಿತ ಮತಾಂತರ, ಬಲವಂತದ ಮತಾಂತರ ಅಥವಾ ಮದುವೆ ಉದ್ದೇಶದಿಂದ ಮತಾಂತರ ಮಾಡುವ 'ಲವ್ ಜಿಹಾದ್' ವಿರುದ್ಧ ಕಠಿಣ ಕಾನೂನು ಜಾರಿಗೆ ತರಲಾಗಿದೆ. ಈ ಹೊಸ ಕಾನೂನಿನ ಹೊರತಾಗಿಯೂ ಪ್ರಕರಣಗಳು ನಡೆಯುತ್ತಿದ್ದು, ಇಂದು ಮತ್ತೊಂದು ದೂರು ದಾಖಲಾಗಿದೆ.

ಉತ್ತರಪ್ರದೇಶ (ಮುಜಫರ್​ನಗರ): 'ಲವ್ ಜಿಹಾದ್' ವಿರುದ್ಧ ಕಠಿಣ ಕಾನೂನು ಸಮರ ಸಾರಿರುವ ಉತ್ತರಪ್ರದೇಶ, ಮುಜಾಫರ್​ನಗರ ಜಿಲ್ಲೆಯಲ್ಲಿ ಕಾನೂನು ಮೀರಿದ ವ್ಯಕ್ತಿಗಳಿಬ್ಬರ ವಿರುದ್ಧ ದೂರು ದಾಖಲಾಗಿದೆ.

ಕಾನೂನು ರಹಿತ ಮತಾಂತರ, ಬಲವಂತದ ಮತಾಂತರ ಅಥವಾ ಮದುವೆ ಉದ್ದೇಶದಿಂದ ಮತಾಂತರ ಮಾಡುವ 'ಲವ್ ಜಿಹಾದ್' ವಿರುದ್ಧ ಕಠಿಣ ಕಾನೂನು ತಂದ ಬಳಿಕವೂ ಇಂತಹ ಘಟನೆಗಳು ನಡೆಯುತ್ತಿದ್ದು, ಇದಕ್ಕೂ ಮುನ್ನ ಎರಡು ಪ್ರಕರಣಗಳು ದಾಖಲಾಗಿವೆ. ಇದೀಗ ಮೂರನೇ ಪ್ರಕರಣ ನಡೆದಿದ್ದು, ಇಬ್ಬರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮೊದಲ 'ಲವ್​ ಜಿಹಾದ್​' ಕೇಸ್​ ದಾಖಲು

ಹರಿದ್ವಾರದ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ನದೀಮ್ ಮತ್ತು ಸಲ್ಮಾನ್ ಎಂಬಿಬ್ಬರ ವಿರುದ್ಧ ಮಂಗಳವಾರ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್​ ಅಧಿಕಾರಿ ಕೆ.ಪಿ. ಸಿಂಗ್ ಮಾಹಿತಿ ನೀಡಿದ್ದಾರೆ.

ಶನಿವಾರ ರಾತ್ರಿ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರ ವಿರುದ್ಧ ಮೊದಲ ಪ್ರಕರಣ ದಾಖಲಿಸಲಾಗಿದ್ದು, ಷರೀಫ್‌ನಗರ ಗ್ರಾಮದ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಮಗಳಿಗೆ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದಾರೆ ಎಂದು ಹಿಂದೂ ವ್ಯಕ್ತಿಯೊಬ್ಬರು ಆರೋಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.