ETV Bharat / bharat

ಟ್ವಿಟರ್ ಬ್ಲೂ ವೆರಿಫಿಕೇಶನ್ ಆರಂಭ: ವೆಬ್​​ನಲ್ಲಿ ಮಾಸಿಕ 650, ಮೊಬೈಲ್​​ಗಳಲ್ಲಿ 900 ರೂ. ಶುಲ್ಕ

author img

By

Published : Feb 9, 2023, 1:43 PM IST

ಎಲೋನ್ ಮಸ್ಕ್ ಒಡೆತನದ ಟ್ವಿಟರ್ ವೆಬ್‌ನಲ್ಲಿ ವೆರಿಫೈಡ್ ಬ್ಲೂ ಸೇವೆಗೆ ತಿಂಗಳಿಗೆ ರೂ 650 ಮತ್ತು ಆಂಡ್ರಾಯ್ಡ್ ಹಾಗೂ ಐಒಎಸ್ ಮೊಬೈಲ್ ಸಾಧನಗಳಲ್ಲಿ ರೂ 900 ಶುಲ್ಕ ವಿಧಿಸಲಿದೆ.

ಟ್ವಿಟರ್ ಬ್ಲೂ ವೆರಿಫಿಕೇಶನ್ ಆರಂಭ: ಮಾಸಿಕ 650 ರೂ., 900 ರೂ. ಶುಲ್ಕ
Twitter Blue with verification now in India, starts at Rs 650 per month

ನವದೆಹಲಿ: ಭಾರತದ ಬಳಕೆದಾರರಿಗೆ ವೆಬ್​ನಲ್ಲಿ ಟ್ವಿಟರ್ ವೆರಿಫೈಡ್​ ಬ್ಲೂ ಸರ್ವಿಸ್​ಗೆ ಪ್ರತಿ ತಿಂಗಳಿಗೆ 650 ರೂಪಾಯಿ ಹಾಗೂ ಆ್ಯಂಡ್ರಾಯ್ಡ್​ ಮತ್ತು ಐಒಎಸ್ ಡಿವೈಸ್​ಗಳಿಗೆ ಪ್ರತಿ ತಿಂಗಳಿಗೆ 900 ರೂಪಾಯಿ ಚಾರ್ಜ್ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ. ಟ್ವಿಟರ್ ಬ್ಲೂ ಸರ್ವಿಸ್ ಈಗ ಭಾರತ, ಬ್ರೆಜಿಲ್ ಮತ್ತು ಇಂಡೋನೇಷ್ಯಾಕ್ಕೆ ವಿಸ್ತರಣೆಯಾಗಿದೆ. ಎಲೋನ್ ಮಸ್ಕ್ ಒಡೆತನದ ಟ್ವಿಟರ್ ಬ್ಲೂ ಸರ್ವಿಸ್​ಗೆ ಭಾರತದಲ್ಲಿ ವರ್ಷಕ್ಕೆ 6,800 ರೂಪಾಯಿಗಳ ರಿಯಾಯಿತಿ ವಾರ್ಷಿಕ ಯೋಜನೆಯನ್ನು ಸಹ ನೀಡುತ್ತಿದೆ. ಇದು ತಿಂಗಳಿಗೆ ಸರಿಸುಮಾರು 566.67 ರೂಪಾಯಿ ಆಗುತ್ತದೆ.

ಭಾರತದಲ್ಲಿ ಆರಂಭವಾಗಿರುವ ಬ್ಲೂ ಸರ್ವಿಸ್ ಈಗ ಅಮೆರಿಕ, ಕೆನಡಾ, ಜಪಾನ್, ಯುನೈಟೆಡ್ ಕಿಂಗಡಂ ಮತ್ತು ಸೌದಿ ಅರೇಬಿಯಾ ಸೇರಿದಂತೆ 15 ಜಾಗತಿಕ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಈ ತಿಂಗಳ ಆರಂಭದಲ್ಲಿ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ತನ್ನ ಬ್ಲೂ ಸರ್ವಿಸ್ ಸಬ್​ಸ್ಕ್ರಿಪ್ಷನ್ ಸೇವೆಯನ್ನು ಇನ್ನೂ ಆರು ದೇಶಗಳಿಗೆ ವಿಸ್ತರಿಸಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲಿ, ಟ್ವಿಟರ್ ತನ್ನ ಬ್ಲೂ ಸಬ್​ಸ್ಕ್ರಿಪ್ಷನ್ ಅರ್ವಿಸ್ ಅನ್ನು ವೆರಿಫಿಕೇಶನ್​ನೊಂದಿಗೆ ಮರು ಪ್ರಾರಂಭಿಸಿತ್ತು. ಜಾಗತಿಕವಾಗಿ ಇದನ್ನು ಬಳಸಲು ಆಂಡ್ರಾಯ್ಡ್ ಬಳಕೆದಾರರಿಗೆ $8 ಮತ್ತು ಐಫೋನ್ ಬಳಕೆದಾರರಿಗೆ $11 ಚಾರ್ಜ್ ಮಾಡಲಾಗುತ್ತದೆ.

ಟ್ವಿಟರ್ ಈಗ ಅಮೆರಿಕದಲ್ಲಿ ಬ್ಲೂ ಸರ್ವಿಸ್ ಸಬ್​ಸ್ಕ್ರೈಬರ್​ಗಳಿಗೆ 4,000 ಅಕ್ಷರಗಳ ದೀರ್ಘ ಟ್ವೀಟ್‌ಗಳನ್ನು ರಚಿಸಲು ಅನುಮತಿಸಲು ಪ್ರಾರಂಭಿಸಿದೆ. ಟ್ವಿಟರ್ ಬ್ಲೂ ಸಬ್​ಸ್ಕ್ರೈಬರ್​ ತಮ್ಮ ಹೋಮ್ ಟೈಮ್‌ಲೈನ್‌ನಲ್ಲಿ ಶೇಕಡಾ 50 ರಷ್ಟು ಕಡಿಮೆ ಜಾಹೀರಾತು ಕಾಣಿಸುತ್ತವೆ. ಬ್ಲೂ ಚೆಕ್‌ಮಾರ್ಕ್‌ಗಳೊಂದಿಗೆ, ಟ್ವಿಟರ್ ಬ್ಲೂ ವೈಶಿಷ್ಟ್ಯಗಳು ಚಂದಾದಾರರಿಗೆ ತಮ್ಮ ಟ್ವಿಟರ್ ಅನುಭವವನ್ನು ವರ್ಧಿಸಲು ಮತ್ತು ಕಸ್ಟಮೈಸ್ ಮಾಡಲು ಅವಕಾಶ ನೀಡುತ್ತವೆ. ಇದರಲ್ಲಿ ಕಸ್ಟಮ್ ಅಪ್ಲಿಕೇಶನ್ ಐಕಾನ್‌ಗಳು, ಕಸ್ಟಮ್ ನ್ಯಾವಿಗೇಷನ್, ಗುಣಮಟ್ಟದ ಲೇಖನಗಳು, ಟ್ವೀಟ್ ರದ್ದುಗೊಳಿಸುವಿಕೆ, ದೀರ್ಘಾವಧಿಯ ವೀಡಿಯೊ ಅಪ್‌ಲೋಡ್ ಮತ್ತು ಇನ್ನೂ ಹೆಚ್ಚಿನವು ಸೇರಿವೆ.

ಟ್ವಿಟರ್ ವೆರಿಫಿಕೇಶನ್ ಎಂಬ ಹೊಸ ಸೇವೆ ಆರಂಭ: ಪ್ರತಿಷ್ಠೆಯ ಆಧಾರದಲ್ಲಿ ವೆರಿಫೈಡ್ ಆದ ಎಲ್ಲ ಖಾತೆಗಳು ಆಳವಾಗಿ ಭ್ರಷ್ಟಗೊಂಡಿರುವುದರಿಂದ ಶೀಘ್ರದಲ್ಲೇ ಅವು ತಮ್ಮ ಬ್ಲೂ ಬ್ಯಾಡ್ಜ್‌ಗಳನ್ನು ಕಳೆದುಕೊಳ್ಳುತ್ತವೆ ಎಂದು ಮಸ್ಕ್ ಈಗ ಹೇಳಿದ್ದಾರೆ. ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ಕಂಪನಿಗಳಿಗಾಗಿ ಟ್ವಿಟರ್ ವೆರಿಫಿಕೇಶನ್ ಎಂಬ ಹೊಸ ಸೇವೆಯನ್ನು ಸಹ ಪ್ರಾರಂಭಿಸಿದೆ. ಇದು ಟ್ವಿಟರ್‌ನಲ್ಲಿ ವ್ಯಾಪಾರ ಘಟಕಗಳಿಗೆ ಸೇವೆಯಾಗಿದ್ದು ಅದು ಅಧಿಕೃತ ವ್ಯಾಪಾರ ಖಾತೆಗಳಿಗೆ ಗೋಲ್ಡ್ ಚೆಕ್‌ಮಾರ್ಕ್ ಅನ್ನು ಸೇರಿಸುತ್ತದೆ. ಬಿಸಿನೆಸ್ ಅಕೌಂಟ್ ಗೋಲ್ಡ್ ಬ್ಯಾಡ್ಜ್‌ ಪಡೆಯಬೇಕಾದರೆ ತಿಂಗಳಿಗೆ $1,000 ಪಾವತಿಸಬೇಕಾಗುತ್ತದೆ. ಹಣ ಪಾವತಿಸದ ಬ್ರ್ಯಾಂಡ್‌ಗಳು ಮತ್ತು ಸಂಸ್ಥೆಗಳು ತಮ್ಮ ಚೆಕ್‌ಮಾರ್ಕ್‌ಗಳನ್ನು ಕಳೆದುಕೊಳ್ಳುತ್ತವೆ.

ಇದನ್ನು ಓದಿ:ಆರ್‌ಬಿಐ ಎಂಪಿಸಿ ಸಭೆಯಿಂದ ಉತ್ತಮ ಫಲಿತಾಂಶ: ಲಾಭದೊಂದಿಗೆ ವಹಿವಾಟು ಆರಂಭ

ಒಂದು ಕಡೆ ಟ್ವಿಟರ್ ಬ್ಲೂ ವೆರಿಫಿಕೇಶನ್ ಆರಂಭವಾಗಿದ್ದರೆ, ಮತ್ತೊಂದೆಡೆ, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಕೆಲ ಹೊತ್ತಿನವರೆಗೆ ಜಾಗತಿಕವಾಗಿ ಸಾವಿರಾರು ಬಳಕೆದಾರರಿಗೆ ಡೌನ್ ಆಗಿವೆ ಎಂದು ವರದಿಯಾಗಿದೆ. ಅಮೆರಿಕದಲ್ಲಿ ಈ ಸೇವೆಗಳಲ್ಲಿ ಗರಿಷ್ಠ ವ್ಯತ್ಯಯವಾಗಿದೆ. ಹಲವಾರು ಟ್ವಿಟ್ಟರ್ ಬಳಕೆದಾರರು ತಮ್ಮ ಹೊಸ ಟ್ವೀಟ್‌ಗಳನ್ನು ಪೋಸ್ಟ್ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಅವರಿಗೆ 'ನೀವು ಟ್ವೀಟ್‌ಗಳನ್ನು ಕಳುಹಿಸಲು ದೈನಂದಿನ ಮಿತಿಯನ್ನು ಮೀರಿದ್ದೀರಿ' ಎಂಬ ಎರರ್ ಮೆಸೇಜ್ ಕಾಣಿಸುತ್ತಿದೆ ಎಂದು ವರದಿಯಾಗಿದೆ. ಟ್ವಿಟರ್‌ನ ಸಪೋರ್ಟ್ ಟೀಂ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸಮಸ್ಯೆಯ ಬಗ್ಗೆ ತಿಳಿದಿದೆ ಮತ್ತು ಅದನ್ನು ಸರಿಪಡಿಸಲು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದೆ.

ಇದನ್ನೂ ಓದಿ: ಶೇ 100ರಷ್ಟು ವಿಘಟನೀಯ ಪರಿಸರಸ್ನೇಹಿ ಸ್ಟ್ರಾ ಆವಿಷ್ಕಾರ.. ಏನಿದರ ಉಪಯೋಗ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.