ತೆಲಂಗಾಣದೊಂದಿಗೆ ದೆಹಲಿ, ಆಂಧ್ರ ಸರ್ಕಾರಗಳನ್ನೂ ಉರುಳಿಸಲು ಪಿತೂರಿ: ಬಿಜೆಪಿ ವಿರುದ್ಧ ಕೆಸಿಆರ್ ಆರೋಪ

author img

By

Published : Nov 3, 2022, 9:39 PM IST

Updated : Nov 3, 2022, 10:28 PM IST

trs-chief-kcr-released-footage-of-trsmlas-poaching-case

ಟಿಆರ್​ಎಸ್​​ ಅಧ್ಯಕ್ಷ, ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್​ ಅವರು ತಮ್ಮ ಶಾಸಕರ ಖರೀದಿ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ.

ಹೈದರಾಬಾದ್​ (ತೆಲಂಗಾಣ): ತೆಲಂಗಾಣದ ರಾಜಕೀಯದಲ್ಲಿ ಟಿಆರ್​ಎಸ್​ ಶಾಸಕರ ಖರೀದಿ ಆರೋಪ ಯತ್ನ ಪ್ರಕರಣವು ಈಗಾಗಲೇ ಭಾರಿ ಸಂಚಲನ ಮೂಡಿಸಿದೆ. ಇದೀಗ ಸ್ವತಃ ಟಿಆರ್​ಎಸ್​​ ಅಧ್ಯಕ್ಷ, ಮುಖ್ಯಮಂತ್ರಿ ಕೆ ಚಂದ್ರಶೇಖರ್​ ಅವರು ಪ್ರಮುಖ ವಿಡಿಯೋಗಳ ತುಕುಣುಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ಒಟ್ಟಾರೆ ಮೂರು ಗಂಟೆಗಳ ವಿಡಿಯೋಗಳನ್ನು ಹೈಕೋರ್ಟ್​ಗೆ ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.

ಶಾಸಕರ ಖರೀದಿ ಯತ್ನದ ಆರೋಪದ ಮೇಲೆ ಅಕ್ಟೋಬರ್​ 26ರಂದು ರಾತ್ರಿ ಹೈದರಾಬಾದ್ ಸಮೀಪದ ಮೊಯಿನಾಬಾದ್‌ನಲ್ಲಿರುವ ಫಾರ್ಮ್‌ಹೌಸ್‌ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದರು. ಈ ವೇಳೆ ನಾಲ್ವರು ಟಿಆರ್​ಎಸ್​​ ಶಾಸಕರು ಕೂಡ ಇದ್ದರು. ಅಲ್ಲದೇ, ಟಿಆರ್​ಎಸ್​ ಬಿಡಲು ನಮಗೆ ಬಿಜೆಪಿಯಿಂದ 100 ಕೋಟಿ ರೂ ಹಾಗೂ ಗುತ್ತಿಗೆ ಆಮಿಷವೊಡ್ಡಲಾಗಿದೆ ಎಂದು ಶಾಸಕರು ಆರೋಪಿಸಿದ್ದರು.

ಟಿಆರ್​ಎಸ್​​ ಶಾಸಕರ ಖರೀದಿ ಯತ್ನ ಪ್ರಕರಣ: ವಿಡಿಯೋ ಬಿಡುಗಡೆ ಮಾಡಿದ ಸಿಎಂ ಕೆಸಿಆರ್​

ಇದನ್ನೂ ಓದಿ: ತೆಲಂಗಾಣದಲ್ಲಿ ಸಿಬಿಐ ತನಿಖೆಗಿದ್ದ ಸಾಮಾನ್ಯ ಅನುಮತಿ ಹಿಂಪಡೆದ ಸರ್ಕಾರ

ಇದು ತೆಲಂಗಾಣದಲ್ಲಿ ರಾಜಕೀಯದಲ್ಲಿ ಹೊಸ ಸಂಚಲನ ಉಂಟು ಮಾಡಿತ್ತು. ಅಲ್ಲದೇ, ಆಡಳಿತಾರೂಢ ಬಿಜೆಪಿ ಮತ್ತು ಟಿಆರ್​ಎಸ್​ ನಡುವೆ ತೀವ್ರ ರಾಜಕೀಯ ಕೆಸರೆಚಾಟಕ್ಕೂ ಕಾರಣವಾಗಿತ್ತು. ಈಗ ಸಿಎಂ ಕೆಸಿಆರ್​ ಮತ್ತೆ ಪ್ರಧಾನಿ ನರೇಂದ್ರ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ತೆಲಂಗಾಣ ಚಲನಶೀಲ ರಾಜ್ಯ ಎಂಬ ಕಾರಣಕ್ಕೆ ಕಡೆವಲು ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಅಲ್ಲದೇ, ಶಾಸಕರ ಖರೀದಿ ಯತ್ನ ಆರೋಪಕ್ಕೆ ಸಂಬಂಧಿಸಿದ ಕೆಲ ವಿಡಿಯೋ ತುಣುಕುಗಳನ್ನು ಬಿಡುಗಡೆ ಮಾಡಿರುವ ಕೆಸಿಆರ್​, ಒಟ್ಟಾರೆ ಮೂರು ಗಂಟೆಗಳು ವಿಡಿಯೋ ದೃಶ್ಯಾವಳಿಯನ್ನು ಹೈಕೋರ್ಟ್​ಗೆ ಒಪ್ಪಿಸಿದ್ದೇವೆ ಎಂದು ಹೇಳಿದ್ದಾರೆ. ಈಗಾಗಲೇ ಎಂಟು ಸರ್ಕಾರಗಳನ್ನು ಈ ಗ್ಯಾಂಗ್‌ ಉರುಳಿಸಿದೆ. ಇದರ ಮುಂದಿನ ಪಿತೂರಿಯನ್ನು ವಿಫಲಗೊಳಿಸಲು ನಾವು ಬಯಸಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಟಿಆರ್​ಎಸ್ ಶಾಸಕರ ಖರೀದಿ ಯತ್ನ ಪ್ರಕರಣ: ದೇವಸ್ಥಾನದಲ್ಲಿ ಆಣೆ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ

ಈ ಗ್ಯಾಂಗ್ ಸಣ್ಣ ಅಲ್ಲ... 24 ಮಂದಿ ಈ ಗ್ಯಾಂಗ್​ನಲ್ಲಿದ್ದಾರೆ. ರಾಜಸ್ಥಾನದ ಜೊತೆಗೆ ಉಳಿದೆಲ್ಲ ಸರ್ಕಾರಗಳನ್ನು ಉರುಳಿಸಲು ಷಡ್ಯಂತ್ರ ಮಾಡಲಾಗಿದೆ. ತೆಲಂಗಾಣ ನಂತರ ದೆಹಲಿ ಮತ್ತು ಆಂಧ್ರ ಪ್ರದೇಶದ ಸರ್ಕಾರವನ್ನೂ ಉರುಳಿಸಲು ಬಿಜೆಪಿ ಯೋಜಿಸುತ್ತಿದೆ. ಈ 24 ಜನರ ಗ್ಯಾಂಗ್​ ವಿವಿಧ ರಾಜ್ಯಗಳಲ್ಲಿ ಶಾಸಕರ ಖರೀದಿ ಮತ್ತು ಚುನಾಯಿತ ಸರ್ಕಾರಗಳನ್ನು ಬುಲ್ಡೋಜರ್ ಮಾಡುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಟಿಆರ್​ಎಸ್​​ ಶಾಸಕರ ಖರೀದಿ ಯತ್ನ ಪ್ರಕರಣ: ವಿಡಿಯೋ ಬಿಡುಗಡೆ ಮಾಡಿದ ಸಿಎಂ ಕೆಸಿಆರ್​

ಇವರಿಗೆ ನಕಲಿ ಆಧಾರ್ ಮತ್ತು ಪಾನ್ ಕಾರ್ಡ್ ಕೊಟ್ಟವರು ಯಾರು?. ಸಾವಿರಾರು ಕೋಟಿ ರೂಪಾಯಿ ಯಾರಿಂದ ಬಂತು?. ಶಾಸಕರ ಖರೀದಿ ವಿಚಾರದಲ್ಲಿ ದೆಹಲಿ ಸಿಎಂ ಎಚ್ಚೆತ್ತುಕೊಂಡಿದ್ದಾರೆ. ಈ ವಿಷಯವನ್ನು ಒಂದು ಪ್ರಕರಣವಾಗಿ ಪರಿಗಣಿಸಬೇಡಿ ಎಂದು ನಾವು ನ್ಯಾಯಾಧೀಶರನ್ನು ಕೇಳುತ್ತಿದ್ದೇವೆ. ನಾವು ಈ ವಿಡಿಯೋಗಳನ್ನು ಎಲ್ಲ ರಾಜ್ಯಗಳ ಡಿಜಿಪಿಗಳಿಗೆ ಕಳುಹಿಸುತ್ತಿದ್ದೇವೆ. ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಜನತೆ ಮತ್ತು ಯುವಕರ ಜವಾಬ್ದಾರಿಯಾಗಿದೆ. ವಿರೋಧ ಪಕ್ಷಗಳನ್ನು ನಾಶ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.

ಇದನ್ನೂ ಓದಿ: ಟಿಆರ್​ಎಸ್​ ಶಾಸಕರ ಖರೀದಿ ಯತ್ನ ಆರೋಪ: ಮಹತ್ವದ ಆಡಿಯೋ ಸಂಭಾಷಣೆ ವೈರಲ್​

Last Updated :Nov 3, 2022, 10:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.