ETV Bharat / bharat

ದೇಶದಲ್ಲಿ ಕೋವಿಡ್​ ಮರಣ ಪ್ರಮಾಣ ಶೇ.1.41ಕ್ಕೆ ಇಳಿಕೆ.. 1.66 ಕೋಟಿ ಮಂದಿಗೆ ಲಸಿಕೆ

author img

By

Published : Mar 4, 2021, 10:50 AM IST

Total number of corona cases, deaths, Vaccination in India
ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್​​

ಭಾರತದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 1,57,435ಕ್ಕೆ ಏರಿಕೆಯಾಗಿದ್ದರೂ ಮರಣ ಪ್ರಮಾಣ ಶೇ.1.41ಕ್ಕೆ ಇಳಿಕೆಯಾಗಿದೆ.

ನವದೆಹಲಿ: ದೇಶಾದ್ಯಂತ 3ನೇ ಹಂತಹ ಕೊರೊನಾ ವ್ಯಾಕ್ಸಿನೇಷನ್​ ಅಭಿಯಾನ ನಡೆಯುತ್ತಿದೆ. ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್​ ವಿರುದ್ಧದ ಹೋರಾಟದಲ್ಲಿರುವ ಮುಂಚೂಣಿ ಕಾರ್ಮಿಕರ ಬಳಿಕ ಇದೀಗ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಸಿಕೆ ನೀಡಲಾಗುತ್ತಿದೆ. ಜನವರಿ 16ರಿಂದ ಈವರೆಗೆ ಒಟ್ಟು 1,66,16,048 ಮಂದಿಗೆ ಲಸಿಕೆ ನೀಡಲಾಗಿದೆ.

Total number of corona cases, deaths, Vaccination in India
ಭಾರತದ ಕೊರೊನಾ ಹೋರಾಟ

ಕಳೆದ 24 ಗಂಟೆಗಳಲ್ಲಿ 17,407 ಸೋಂಕಿತರು ಪತ್ತೆಯಾಗಿದ್ದು, 89 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 1,11,56,923 ಹಾಗೂ ಮೃತರ ಸಂಖ್ಯೆ 1,57,435ಕ್ಕೆ ಏರಿಕೆಯಾಗಿದೆ. ಆದರೆ ಮರಣ ಪ್ರಮಾಣ ಶೇ.1.41ಕ್ಕೆ ಇಳಿಕೆಯಾಗಿದೆ.

ಒಟ್ಟು ಸೋಂಕಿತರ ಪೈಕಿ ಶೇ.97.3 ರಷ್ಟು ಅಂದರೆ 1,08,26,075 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಉಳಿದಂತೆ ಶೇ.1.55 ರಷ್ಟು (1,73,413) ಕೇಸ್​​ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Total number of corona cases, deaths, Vaccination in India
ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್​​

ಮಾರ್ಚ್​​ 3ರ ವರೆಗೆ 21,91,78,908 ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 7,75,631 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.