ETV Bharat / bharat

COVID 3rd Wave: ಐಸಿಎಂಆರ್​ನಿಂದ ಗುಡ್ ​ನ್ಯೂಸ್

author img

By

Published : Jun 26, 2021, 1:12 PM IST

Third-wave unlikely to be as severe as second wave: ICMR study
Covid 3rd Wave: ಐಸಿಎಂಆರ್​ನಿಂದ ಗುಡ್​ನ್ಯೂಸ್

COVID ಮೂರನೇ ಅಲೆ ಎರಡನೆ ಅಲೆಯಷ್ಟು ಅಪಾಯಕಾರಿಯಾಗಿಲ್ಲ ಎಂದು ಐಸಿಎಂಆರ್​ನ ಸಂಶೋಧಕರು ಜನತೆಗೆ ಸಿಹಿ ಸುದ್ದಿ ನೀಡಿದ್ದಾರೆ. ಆದ್ರೆ ಕೋವಿಡ್ ವೈರಸ್​ನ ಹೊಸ ವೇರಿಯಂಟ್​ಗಳು ರೋಗ ನಿರೋಧಕ ಶಕ್ತಿಯನ್ನು ಮೀರಿಸುವ ಸಾಮರ್ಥ್ಯ ಹೊಂದಿರುತ್ತವೆ ಹಾಗೂ ರೂಪಾಂತರ ತಳಿಗಳು ಹರಡುವ ವೇಗ ಹೆಚ್ಚಾಗಿದೆ ಎಂದು ​ಆತಂಕ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಕೊರೊನಾ ಮೂರನೆ ಅಲೆಯ ಭಯದಲ್ಲಿರುವ ದೇಶದ ಜನತೆಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಮೂರನೇ ಅಲೆಯು ಎರಡನೇ ಅಲೆಗಿಂತ ಅಪಾಯಕಾರಿಯಾಗಿರುವ ಸಾಧ್ಯತೆ ಕಡಿಮೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್​​) ಅಭಿಪ್ರಾಯ ವ್ಯಕ್ತಪಡಿಸಿದೆ.

'ಭಾರತದಲ್ಲಿ ಮೂರನೇ ಅಲೆಯ ಸಾಧ್ಯತೆ: ಗಣಿತ ಮಾದರಿ ಆಧಾರಿತ ವಿಶ್ಲೇಷಣೆ' ಎಂಬ ವರದಿಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಶುಕ್ರವಾರ ಪ್ರಕಟಿಸಿದ್ದು, ಈ ವರದಿಯಲ್ಲಿ ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆಯ ಅಪಾಯದ ಮಟ್ಟ ಕಡಿಮೆ ಎಂದು ಮಾಹಿತಿ ನೀಡಿದೆ.

ಈ ಅಧ್ಯಯನದಲ್ಲಿ ಮೂರನೇ ಅಲೆ ಹೇಗೆ ಸಂಭವಿಸುತ್ತದೆ ಎಂದು ವಿಶ್ಲೇಷಿಸುತ್ತದೆ. ಆದರೂ ವ್ಯಾಕ್ಸಿನೇಷನ್ ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದು ಮತ್ತಷ್ಟು ಅಪಾಯವನ್ನು ತಪ್ಪಿಸುವ ಏಕೈಕ ಮಾರ್ಗ ಎಂದು ಸಂಶೋದಕರು ಅಭಿಪ್ರಾಯಪಟ್ಟಿದ್ದಾರೆ.

ಆದರೂ ಕೆಲವೊಂದು ಅಪಾಯಗಳನ್ನು ಐಸಿಎಂಆರ್ ಗಮನಿಸಿದೆ. ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತಿರುವ ವ್ಯಕ್ತಿಗಳಲ್ಲಿ ಅಪಾಯ ಹೆಚ್ಚಾಗಿರುತ್ತದೆ. ಕೋವಿಡ್ ವೈರಸ್​ನ ಹೊಸ ವೇರಿಯಂಟ್​ಗಳು ರೋಗ ನಿರೋಧಕ ಶಕ್ತಿಯನ್ನು ಮೀರಿಸುವ ಸಾಮರ್ಥ್ಯ ಹೊಂದಿರುತ್ತವೆ ಹಾಗೂ ರೂಪಾಂತರ ತಳಿಗಳು ಹರಡುವ ವೇಗ ಹೆಚ್ಚಾಗಿದೆ ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಭಯೋತ್ಪಾದಕರಿಗೆ ಶರಣಾಗಲು ಸೂಚಿಸಿದ ಭದ್ರತಾ ಪಡೆ: ಭಾರತೀಯ ಸೇನೆಯಿಂದ ವಿಡಿಯೋ

ದೇಶದಲ್ಲಿ ಕೋವಿಡ್ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳು ಅನ್​ಲಾಕ್​ ಪ್ರಕ್ರಿಯೆಗಳನ್ನು ಆರಂಭಿಸಿದ್ದು, ಈ ಅನ್​ಲಾಕ್​ ಪ್ರಕ್ರಿಯೆಯಿಂದಲೂ ಕೋವಿಡ್ ಮೂರನೇ ಅಲೆ ಅತ್ಯಂತ ವೇಗವಾಗಿ ನಡೆಯಲಿದೆ ಎನ್ನಲಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.