ETV Bharat / bharat

ತೃತೀಯ ಲಿಂಗಿಯನ್ನು ಪ್ರೀತಿಸಿ ಮದುವೆಯಾದ ಯುವಕ: ಹಲವೆಡೆಯಿಂದ ಶುಭಾಶಯ

author img

By

Published : Oct 28, 2021, 11:41 AM IST

Symbol of Love: Transwomen gets married to youth in Kallakurichi
ತೃತೀಯ ಲಿಂಗಿಯನ್ನು ಪ್ರೀತಿಸಿ ಮದುವೆಯಾದ ಯುವಕ: ತಮಿಳುನಾಡಿನ ಹಲವೆಡೆಯಿಂದ ಶುಭಾಶಯ

ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಮತ್ತು ತೃತೀಯ ಲಿಂಗಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು, ತಮಿಳುನಾಡಿನ ಹಲವೆಡೆಯಿಂದ ಶುಭಾಶಯಗಳು ಹರಿದುಬಂದಿವೆ.

ಕಲ್ಲಕುರುಚಿ(ತಮಿಳುನಾಡು): ಯುವಕನೋರ್ವ ತೃತೀಯ ಲಿಂಗಿಯನ್ನು ವಿವಾಹವಾಗಿರುವ ಅಪರೂಪದ ಘಟನೆ ತಮಿಳುನಾಡಿನ ಕಲ್ಲಕುರುಚಿ ಜಿಲ್ಲೆಯ ಉಲ್ಲುತ್ತುಪೆಟ್ಟೈ ಎಂಬಲ್ಲಿ ಬುಧವಾರ ನಡೆಯಿತು.

29 ವರ್ಷದ ಚೆನ್ನೈ ಮೂಲದ ಯುವಕ ಮನೋ ಎಂಬಾತ 25 ವರ್ಷದ ತೃತೀಯ ಲಿಂಗಿ ಮಹಿಳೆಯಾದ ರಿಯಾಳನ್ನು ವಿವಾಹವಾಗಿದ್ದಾನೆ.

Symbol of Love: Transwomen gets married to youth in Kallakurichi

ಮನೋ ಮತ್ತು ರಿಯಾ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದು, ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಪೋಷಕರ ಒಪ್ಪಿಗೆಯಿಲ್ಲದೇ ನಡೆದ ಮದುವೆ ಹಿಂದೂ ಸಂಪ್ರದಾಯದಂತೆ ನೆರವೇರಿದೆ.

Symbol of Love: Transwomen gets married to youth in Kallakurichi
ವಿವಾಹದ ಬ್ಯಾನರ್

ತಮಿಳುನಾಡಿನಲ್ಲಿ ಇಂಥ ಘಟನೆ ಇದೇ ಮೊದಲೇನಲ್ಲ. ಈ ಹಿಂದೆ ಕೊಯಮತ್ತೂರು ಮತ್ತು ತೂತುಕುಡಿ ಜಿಲ್ಲೆಗಳಲ್ಲಿ ಈ ರೀತಿಯ ವಿವಾಹಗಳು ಜರುಗಿವೆ. ಕೊಯಮತ್ತೂರಿನಲ್ಲಿ ನಡೆದ ಪ್ರಕರಣದಲ್ಲಿ ಮೊದಲಿಗೆ ವಿವಾಹ ನೋಂದಣಿ ಮಾಡಿಕೊಳ್ಳಲು ಅಧಿಕಾರಿ ನಿರಾಕರಿಸಿದ್ದು, ನಂತರ ಮದ್ರಾಸ್ ಹೈಕೋರ್ಟ್ ವಿವಾಹ ನೋಂದಣಿ ಮಾಡಿಕೊಳ್ಳಬೇಕೆಂದು ಆದೇಶ ನೀಡಿದೆ.

ಇದನ್ನೂ ಓದಿ: ವಿದ್ಯಾರ್ಥಿನಿ ಕೊಲೆ ಮಾಡಿ ಮುಳ್ಳಿನ ಕಂಟಿಯಲ್ಲಿ ಬಿಸಾಕಿ ಹೋದ ಕಿರಾತಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.