ETV Bharat / bharat

ಮುಖದಲ್ಲಿನ ಗಡ್ಡೆಗೆ ಯಶಸ್ವಿ ಶಸ್ತ್ರಚಿಕಿತ್ಸೆ: ವೃದ್ಧೆಗೆ ಹೊಸ ಬದುಕು ನೀಡಿದ ಎಐಐಎಂಎಸ್‌

author img

By

Published : May 16, 2023, 8:43 AM IST

ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (AIIMS) ಗೋರಖ್‌ಪುರದ ದಂತ ಶಸ್ತ್ರಚಿಕಿತ್ಸಾ ವಿಭಾಗದ ತಂಡವು 83 ವರ್ಷದ ವೃದ್ಧೆಯ ಮುಖದ ಮೇಲಿನ ಗಡ್ಡೆಯನ್ನು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಹೊರ ತೆಗೆದಿದೆ.

AIIMS
ಎಐಐಎಂಎಸ್‌

ಗೋರಖ್‌ಪುರ(ಉತ್ತರ ಪ್ರದೇಶ): ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಐಐಎಂಎಸ್‌) ದಂತ ಶಸ್ತ್ರಚಿಕಿತ್ಸಾ ವಿಭಾಗವು ಮಹಾರಾಜ್‌ಗಂಜ್​​ನ ವೃದ್ಧೆಯೊಬ್ಬರಿಗೆ ಹೊಸ ಬದುಕು ನೀಡಿದೆ. ಸರೋಜಾ(83) ಅವರಿಗೆ ಕಳೆದ ಹಲವು ವರ್ಷಗಳಿಂದ ಮುಖದ ಮೇಲೆ ಗೆಡ್ಡೆ ಕಾಣಿಸಿಕೊಂಡಿತ್ತು.

ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಅತ್ಯಂತ ದುಬಾರಿಯಾಗಿದ್ದರಿಂದ ವೃದ್ಧೆ ಚಿಕಿತ್ಸೆಗಾಗಿ ಎಐಐಎಂಎಸ್​ಗೆ ದಾಖಲಾಗಿದ್ದರು. ಅನೇಕ ಆಸ್ಪತ್ರೆಯ ವೈದ್ಯರಿಗಳಿಗೆ ತೋರಿಸಿದರೂ ಸಮಸ್ಯೆ ಪತ್ತೆಯಾಗಿರಲಿಲ್ಲ. ಇವರನ್ನು ಎಐಐಎಂಎಸ್​​ನ ದಂತ ಶಸ್ತ್ರಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜನ್ ಡಾ. ಶೈಲೇಶ್ ಕುಮಾರ್ ಪರೀಕ್ಷಿಸಿದ್ದಾರೆ. ಆಗ ಮುಖದ ಕೆಳಗಿನ ದವಡೆಯ ಮೂಳೆ ಸಂಪೂರ್ಣವಾಗಿ ಟೊಳ್ಳಾಗಿ ಗಡ್ಡೆಯಾಗಿರುವುದು ಪತ್ತೆಯಾಗಿದೆ.

ಇದನ್ನೂ ಓದಿ: ಅಯೋರ್ಟಿಕ್ ಅನ್ಯೂರಿಸಮನ್ ಕಾಯಿಲೆಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಸುಚಿರಾಯು ಆಸ್ಪತ್ರೆ ವೈದ್ಯರ ಸಾಧನೆ!

ಎಐಐಎಂಎಸ್ ಮಾಧ್ಯಮ ಉಸ್ತುವಾರಿ ಪಂಕಜ್ ಶ್ರೀವಾಸ್ತವ ಮಾತನಾಡಿ "ರೋಗಿಯನ್ನು ಪರೀಕ್ಷಿಸಿದ ನಂತರ ಅವರು ಅಪಾಯಕಾರಿ ಮುಖದ ಗಡ್ಡೆಯಿಂದ ಬಳಲುತ್ತಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಮುಖದ ಕೆಳಗಿನ ದವಡೆಯ ಮೂಳೆ ಸಂಪೂರ್ಣವಾಗಿ ಟೊಳ್ಳಾಗಿತ್ತು. ಕೆಲವು ಸಂದರ್ಭಗಳಲ್ಲಿ ಈ ಗಡ್ಡೆ ಕ್ಯಾನ್ಸರ್ ಆಗಿ ಬದಲಾಗಬಹುದು. ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ರೋಗಿಯ ಕೆಳಗಿನ ದವಡೆಯ ಮೂಳೆಯನ್ನು ತೆಗೆಯಲಾಯಿತು. ನಂತರ ದವಡೆಯನ್ನು ಕೃತಕವಾಗಿ ಪುನರ್ನಿರ್ಮಿಸಲಾಯಿತು" ಎಂದು ಅವರು ಹೇಳಿದರು.

ಇದನ್ನೂ ಓದಿ: 185 ಕೆಜಿ ತೂಕದ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ.. ಮರುಜೀವ ಕೊಟ್ಟ ಹಾವೇರಿ ಜಿಲ್ಲಾಸ್ಪತ್ರೆ ವೈದ್ಯರಿಗೆ ಕೃತಜ್ಞತೆ

ಎಐಐಎಂಎಸ್‌ ವಿಭಾಗದ ಡಾ.ಪ್ರಿಯಾಂಕಾ ಮತ್ತು ಅವರ ತಂಡದಿಂದ ರೋಗಿಯ ಪ್ರಜ್ಞಾಹೀನತೆಯನ್ನು ಪರೀಕ್ಷಿಸಿದ್ದರು. ಇಂತಹ ವಯೋವೃದ್ಧ ರೋಗಿಗಳ ಅರಿವಳಿಕೆ ಪ್ರಕ್ರಿಯೆ ಅತ್ಯಂತ ಜಟಿಲವಾಗಿದ್ದು, ಇದಕ್ಕೆ ವಿಶೇಷ ಉಪಕರಣಗಳು ಹಾಗೂ ಸಾಕಷ್ಟು ಸಿದ್ಧತೆ ಅಗತ್ಯ ಎಂದು ಮ್ಯಾಕ್ಸಿಲೊಫೇಶಿಯಲ್ ಸರ್ಜನ್ ಡಾ.ಶೈಲೇಶ್ ತಿಳಿಸಿದರು.

ಸಂಪೂರ್ಣ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರೋಗಿಯ ಶಸ್ತ್ರಚಿಕಿತ್ಸೆಯನ್ನು ದಂತ ಶಸ್ತ್ರಚಿಕಿತ್ಸಾ ವಿಭಾಗದ ಶಸ್ತ್ರಚಿಕಿತ್ಸಕ ಡಾ.ಶೈಲೇಶ್ ಮಾಡಿದ್ದಾರೆ. ನಾಲ್ಕು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿದೆ. ಈ ಯಶಸ್ವಿ ಚಿಕಿತ್ಸೆಗಾಗಿ ಡಾ.ಶೈಲೇಶ್ ಕುಮಾರ್ ಮತ್ತು ಅವರ ತಂಡವನ್ನು ಏಮ್ಸ್ ಕಾರ್ಯನಿರ್ವಾಹಕ ನಿರ್ದೇಶಕಿ ಡಾ.ಸುರೇಖಾ ಕಿಶೋರ್ ಅಭಿನಂದಿಸಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಕಿಮ್ಸ್ ಮತ್ತೊಂದು ಸಾಧನೆ.. ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ..

ನಿರ್ದೇಶಕರು ನಿಯಮಿತವಾಗಿ ರೋಗಿಯ ಆರೋಗ್ಯವನ್ನು ವಿಚಾರಿಸಿದರು. ಈ ಶಸ್ತ್ರಚಿಕಿತ್ಸೆಯಲ್ಲಿ ಅರಿವಳಿಕೆ ವಿಭಾಗದ ಡಾ.ಅನುರಾಧ ಸಹಕರಿಸಿದ್ದಾರೆ. ಅಲ್ಲದೇ ಇದು ಗೋರಖ್‌ಪುರದ ಎಐಐಎಂಎಸ್​ನಲ್ಲಿ ನಡೆದ ವಯಸ್ಸಾದ ರೋಗಿಯ ಮೊದಲ ಯಶಸ್ವಿ ಶಸ್ತ್ರಚಿಕಿತ್ಸೆಯಾಗಿದೆ ಎಂದು ಡಾ.ಶೈಲೇಶ್ ತಿಳಿಸಿದರು.

ಎಐಐಎಂಎಸ್​ ಸ್ಥಾಪನೆಗೂ ಮುನ್ನ ರೋಗಿಗಳು ಆಪರೇಷನ್‌ಗಾಗಿ ದೆಹಲಿ ಅಥವಾ ಲಕ್ನೋಗೆ ಹೋಗಬೇಕಾಗಿತ್ತು. ಆದರೆ ಈಗ ಸರಿಯಾದ ವೈದ್ಯರಿಂದ ಸಕಾಲಕ್ಕೆ ರೋಗ ಪತ್ತೆ ಮತ್ತು ಚಿಕಿತ್ಸೆಯಿಂದ ಜನರಿಗೆ ಅನುಕೂಲವಾಗಿದೆ.

ಇದನ್ನೂ ಓದಿ: ಕ್ಯಾನ್ಸರ್​ ರೋಗಿ ಹೊಟ್ಟೆಯಲ್ಲಿ ಪತ್ತೆಯಾಯ್ತು ಬರೋಬ್ಬರಿ 30 ಕೆಜಿ ತೂಕದ ಗೆಡ್ಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.