ETV Bharat / bharat

ಪೂಂಚ್ ಭಯೋತ್ಪಾದಕ ದಾಳಿ ಪ್ರಕರಣ.. ಧಾರ್ಮಿಕ ಗುರು, ಸರ್ಕಾರಿ ನೌಕರ ಸೇರಿ ಆರು ಮಂದಿ ಬಂಧನ

author img

By

Published : May 1, 2023, 9:42 PM IST

ಪೂಂಚ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಉಗ್ರಗಾಮಿಗಳೊಂದಿಗೆ ನಂಟು ಹೊಂದಿರುವ ಶಂಕೆಯ ಮೇಲೆ ಮದರಸ ಮೊಲ್ವಿ ಸೇರಿದಂತೆ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Six held in Jammu, including govt employee and preacher, in connection with Poon
ಪೂಂಚ್ ಭಯೋತ್ಪಾದಕ ದಾಳಿ ಸಂಬಂಧ ಆರು ಮಂದಿ ಪೊಲೀಸರ ವಶಕ್ಕೆ

ಶ್ರೀನಗರ(ಮ್ಮು ಮತ್ತು ಕಾಶ್ಮೀರ): ಇಲ್ಲಿನ ಗಡಿ ಜಿಲ್ಲೆ ಪೂಂಚ್ ನಲ್ಲಿ ಏಪ್ರಿಲ್ 20 ರಂದು ಸೇನಾ ವಾಹನದ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಧಾರ್ಮಿಕ ಧರ್ಮಗುರು ಮತ್ತು ಓರ್ವ ಸರ್ಕಾರಿ ನೌಕರ ಮತ್ತು ಇತರೆ ನಾಲ್ವರನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಪೂಂಚ್ ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರಗಾಮಿಗಳೊಂದಿಗೆ ನಂಟು ಹೊಂದಿರುವ ಶಂಕೆಯ ಮೇಲೆ ಮರ್ಕಝ್ ಉಲ್ ಮಾರಿಫ್ ಎಂಬ ಮದರಸಾದ ಮೊಲ್ವಿ ಮಂಜೂರ್ ಎಂಬುವವರನ್ನು ಜಮ್ಮು ನಗರದ ಬಥಿಂಡಿಯಲ್ಲಿ ಬಂಧಿಸಲಾಗಿದೆ.

ವಿಚಾರಣೆಲ್ಲಿ ಪೂಂಚ್ ಮೂಲದ ಮೊಲ್ವಿ ಮಂಜೂರ್ ಗಡಿಯಾಚೆಗಿನ ಉಗ್ರಗಾಮಿಗಳೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ತಿಳಿದುಬಂದಿತ್ತು. ಜಿಲ್ಲಾ ಕೇಂದ್ರ ಪೂಂಚ್‌ನಿಂದ ಸುಮಾರು 90 ಕಿಮೀ ದೂರದಲ್ಲಿರುವ ಭಿಂಬರ್ ಗಲಿಯ ಸಾಂಗಿಯೋಟ್‌ಗೆ ಸಾಗುತ್ತಿದ್ದ ಸೇನಾ ವಾಹನದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಐವರು ಸೈನಿಕರು ಸಾವನ್ನಪ್ಪಿದರು ಮತ್ತು ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.

ಈ ಕುರಿತು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್ಬಾಗ್ ಸಿಂಗ್ ಮಾತನಾಡಿ, "ಪೂಂಚ್​ನ ಭಾಟಾ ಡುರಿಯನ್ ಪ್ರದೇಶದಲ್ಲಿ ನಡೆದ ದಾಳಿಯನ್ನು ಉಗ್ರಗಾಮಿಗಳು ಸ್ಥಳೀಯರ ಬೆಂಬಲದೊಂದಿಗೆ ದಾಳಿ ನಡೆಸಿದ್ದಾರೆ ಮತ್ತು ಅವರು ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ಸ್ಟೀಲ್ ಲೇಪಿತ ಗುಂಡುಗಳು ಮತ್ತು ಐಇಡಿಗಳನ್ನು ಬಳಸಿದ್ದರು. ರಜೌರಿ-ಪೂಂಚ್ ಪ್ರದೇಶದಲ್ಲಿ ಒಂಬತ್ತರಿಂದ 12 ವಿದೇಶಿ ಉಗ್ರರು ಸಕ್ರಿಯವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ" ಎಂದು ಮಾಹಿತಿ ನೀಡಿದ್ದರು.

"ಸ್ಥಳೀಯರ ಬೆಂಬಲವಿಲ್ಲದೆ ಇಂತಹ ದಾಳಿಗಳನ್ನು ನಡೆಸಲು ಸಾಧ್ಯವಿಲ್ಲ. ಭಯೋತ್ಪಾದಕರಿಗೆ ರಹಸ್ಯ ಸ್ಥಳದಲ್ಲಿ ಆಶ್ರಯ ನೀಡಲಾಗಿತ್ತು ಮತ್ತು ನಂತರ ದಾಳಿ ನಡೆಸಿದ ಸ್ಥಳದವರೆಗೆ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿತ್ತು. ಅವರು ಈ ಪ್ರದೇಶವನ್ನು ಸರಿಯಾಗಿ ಪರಿಶೀಲಿಸಿದ್ದರು ಮತ್ತು ಮಳೆಯ ಹೊರತಾಗಿಯೂ ಅಪಾಯಕಾರಿ ತಿರುವಿನ ಕಾರಣದಿಂದಾಗಿ ಬಹುತೇಕ ಶೂನ್ಯ ವೇಗದಲ್ಲಿ ಚಲಿಸುತ್ತಿದ್ದ ಸೇನಾ ವಾಹನವನ್ನು ಗುರಿಯಾಗಿಸುವಲ್ಲಿ ಅವರು ಯಶಸ್ವಿಯಾದರು" ಎಂದು ಡಿಜಿಪಿ ತಿಳಿಸಿದರು.

ಇದನ್ನೂ ಓದಿ:ಗ್ರೆನೇಡ್​ ದಾಳಿಯಲ್ಲಿ ಐವರು ಯೋಧರು ಹುತಾತ್ಮ: ಉಗ್ರರ ಬೇಟೆಗೆ ಕಾರ್ಯಾಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.