ETV Bharat / bharat

ಚುರುಕಿನ ನಡಿಗೆ ಬದುಕಿನ ಒತ್ತಡ ನಿವಾರಣೆಗೆ ರಾಮಬಾಣ

author img

By

Published : Apr 18, 2022, 10:06 PM IST

ನೀವು ಜಿಮ್​ಗೆ ಹೋಗುವ ಅಗತ್ಯವಿಲ್ಲ. ಭಾರವಾದ ತೂಕವನ್ನು ಎತ್ತುವ ಅಗತ್ಯವೂ ಇಲ್ಲ. ಆದರೆ, ಚುರುಕಾದ ನಡಿಗೆಯಂತಹ ಸಣ್ಣ ಪ್ರಮಾಣದ ದೈಹಿಕ ಚಟುವಟಿಕೆ ಮಾನಸಿಕ ಖಿನ್ನತೆಯ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನಡಿಗೆ
ನಡಿಗೆ

ದಿನನಿತ್ಯ ವ್ಯಾಯಾಮ ಮಾಡದ ವ್ಯಕ್ತಿಗಳಿಗೆ ಹೋಲಿಸಿದರೆ ವಾರಕ್ಕೆ ಸುಮಾರು 1.25 ಗಂಟೆಗಳ ಸರಳ ವೇಗದಲ್ಲಿ ನಡೆಯುವ ಜನರು 18 ಪ್ರತಿಶತದಷ್ಟು ಕಡಿಮೆ ಮಾನಸಿಕ ಖಿನ್ನತೆ ಹೊಂದಿರುತ್ತಾರೆ ಎಂದು ಕೇಂಬ್ರಿಡ್ಜ್ ಮತ್ತು ಸಿಡ್ನಿ ವಿಶ್ವವಿದ್ಯಾನಿಲಯಗಳು ಸೇರಿದಂತೆ ಅಂತರರಾಷ್ಟ್ರೀಯ ಸಂಶೋಧಕರ ತಂಡದ ನೇತೃತ್ವದ ಅಧ್ಯಯನ ವರದಿಗಳು ತಿಳಿಸಿವೆ.

'ಯಾವುದೇ ಚಟುವಟಿಕೆಯಿಂದ ಕನಿಷ್ಠ ಕೆಲವು ಕಡೆಗೆ ಚಲಿಸುವಾಗ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು' ಎಂಬುದನ್ನು ಜರ್ನಲ್​ JAMA ಸೈಕಿಯಾಟ್ರಿಯಲ್ಲಿ ಲೇಖಕರು ತಿಳಿಸಿದ್ದಾರೆ. ನಮ್ಮ ಸಂಶೋಧನೆಗಳು ಉನ್ನತ ಜೀವನಶೈಲಿಯ ಕುರಿತು ಜನರಿಗೆ ಶಿಫಾರಸುಗಳನ್ನು ಮಾಡುವ ಆರೋಗ್ಯ ವೈದ್ಯರಿಗೆ ಸಹಾಯಕವಾಗಿದೆ. ಅದರಲ್ಲೂ ವಿಶೇಷವಾಗಿ ವ್ಯಾಯಾಮವನ್ನು 'ಅವಾಸ್ತವಿಕ' ಎಂದು ಗ್ರಹಿಸುವ ವ್ಯಕ್ತಿಗಳಿಗೆ ಇದು ಸಹಕಾರಿ ಎಂದಿದ್ದಾರೆ.

ಮಾನಸಿಕ ಖಿನ್ನತೆಯನ್ನು ಕಡಿಮೆ ಮಾಡಲು ವ್ಯಾಯಾಮದ ಅಗತ್ಯತೆ ಎಷ್ಟಿದೆ ಎಂಬುದನ್ನು ನಿರ್ಧರಿಸಲು ತಂಡವು 1,90,000 ಜನರ ಮೇಲೆ 15 ಅಧ್ಯಯನಗಳನ್ನು ನಡೆಸಿ ಮೆಟಾ ವಿಶ್ಲೇಷಣೆ ಮಾಡಿತು. ವಾರಕ್ಕೆ 2.5 ಗಂಟೆಗಳ ವೇಗದ ನಡಿಗೆ ಕೈಗೊಂಡರೆ ಸುಮಾರು 25 ಪ್ರತಿಶತದಷ್ಟು ಖಿನ್ನತೆ ಕಡಿಮೆ ಆಗುತ್ತದೆ ಎಂದು ಸಂಶೋಧನೆಗಳು ಬಹಿರಂಗಪಡಿಸಿವೆ. ಅಲ್ಲದೇ, ವ್ಯಾಯಾಮ ಮಾಡಿದ ಜನರು ಸುಮಾರು 43 ಪ್ರತಿಶತದಷ್ಟು ಕಡಿಮೆ ಮಾನಸಿಕ ಆರೋಗ್ಯ ಹೊಂದಿದ್ದಾರೆಂದು ಅಧ್ಯಯನ ತಿಳಿಸಿದೆ.

ವಾರಕ್ಕೆ ಕೇವಲ ಮೂರು ಬಾರಿ ನಡೆದಾಡುವುದು ಸಹ ಜನರಿಗೆ ವ್ಯಾಯಾಮ ಮಾಡದೆ ಇರುವ ವ್ಯಕ್ತಿಗಳಿಗಿಂತ ಉತ್ತಮ ಮಾನಸಿಕ ಆರೋಗ್ಯವನ್ನು ನೀಡುತ್ತದೆ ಎಂದು ಯೇಲ್ ವಿಶ್ವವಿದ್ಯಾನಿಲಯದ ಮನೋವೈದ್ಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕ, ಅಧ್ಯಯನ ಲೇಖಕ ಆಡಮ್ ಚೆಕ್ರೌಡ್ ಸಿಎನ್‌ಎನ್‌ಗೆ ತಿಳಿಸಿದ್ದಾರೆ. ವಾರದಲ್ಲಿ ಮೂರರಿಂದ ಐದು ಬಾರಿ ಕನಿಷ್ಠ 45 ನಿಮಿಷಗಳ ಅವಧಿಗಳಲ್ಲಿ ವ್ಯಾಯಾಮ ಮಾಡುವುದು ಮಾನಸಿಕ ಆರೋಗ್ಯ ಸುಧಾರಿಸಲು ಹೆಚ್ಚು ಪ್ರಯೋಜನಕಾರಿ ಎಂದು 2018 ರ ಅಧ್ಯಯನವು ತಿಳಿಸಿದೆ. ಅಲ್ಲದೇ, ಮನೆಕೆಲಸಗಳನ್ನು ಮಾಡುವುದು ಸಹ ಕಳಪೆ ಮಾನಸಿಕ ಆರೋಗ್ಯದ ದಿನಗಳನ್ನು ಸುಮಾರು 10 ಪ್ರತಿಶತದಷ್ಟು ಕಡಿಮೆ ಮಾಡುತ್ತದಂತೆ.

2020ರಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನದ ಕಡಿಮೆ ವ್ಯಾಯಾಮವು ಖಿನ್ನತೆಯನ್ನು ಬೆಳೆಸಿಕೊಳ್ಳುವುದರ ವಿರುದ್ಧ ಮಕ್ಕಳನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಹೇಳುತ್ತದೆ. 12ನೇ ವಯಸ್ಸಿನಲ್ಲಿ ಪ್ರತಿದಿನ 60 ನಿಮಿಷಗಳ ಸರಳ ನಡಿಗೆಯು 18 ನೇ ವಯಸ್ಸಿನಲ್ಲಿ ಕಂಡುಬರುವ ಖಿನ್ನತೆಯನ್ನು ಸರಿ ಸುಮಾರು 10 ಪ್ರತಿಶತದಷ್ಟು ಕಡಿತ ಮಾಡುತ್ತದೆ. ಈ ಚಟುವಟಿಕೆಗಳು ಓಟ, ಬೈಕಿಂಗ್ ಮತ್ತು ವಾಕಿಂಗ್, ಹಾಗೆಯೇ, ಕೆಲಸಗಳನ್ನು ಮಾಡುವುದು, ಚಿತ್ರಕಲೆ ಮುಂತಾದ ಚಟುವಟಿಕೆಗಳನ್ನು ಒಳಗೊಂಡಿವೆ ಎಂದು ಸಿಎನ್​ಎನ್​ ವರದಿ ಮಾಡಿದೆ.

ಇದನ್ನೂ ಓದಿ: 'ದಿಂಗಾಲೇಶ್ವರ ಶ್ರೀಗಳು ಕಮಿಷನ್‌ ಬಗ್ಗೆ ದಾಖಲೆ ಕೊಡಲಿ, ಸಂಪೂರ್ಣ ತನಿಖೆ ಮಾಡ್ತೇವೆ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.