ETV Bharat / bharat

ಐಇಡಿ ನಿಷ್ಕ್ರಿಯಗೊಳಿಸಿದ ಭದ್ರತಾ ಪಡೆಗಳು: ತಪ್ಪಿದ ದೊಡ್ಡ ದುರಂತ

author img

By

Published : Apr 14, 2022, 11:14 AM IST

Security forces defuse IED in J&K's Doda
ಐಇಡಿ ನಿಷ್ಕ್ರಿಯಗೊಳಿಸಿದ ಭದ್ರತಾ ಪಡೆಗಳು: ತಪ್ಪಿದ ದೊಡ್ಡ ದುರಂತ

ಜಮ್ಮು ಕಾಶ್ಮೀರದಲ್ಲಿ ಉಗ್ರರು ರೂಪಿಸಿದ್ದ ಸ್ಫೋಟಕ ಸಂಚನ್ನು ವಿಫಲಗೊಳಿಸಲಾಗಿದೆ.

ಜಮ್ಮು(ಜಮ್ಮು ಕಾಶ್ಮೀರ್) : ಕಣಿವೆನಾಡಿನಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರೆಸಿವೆ. ಬುಧವಾರ ಸಂಜೆ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಘಾಟ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ನಿಷ್ಕ್ರಿಯಗೊಳಿಸುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿವೆ ಎಂದು ವರದಿಗಳು ಗುರುವಾರ ತಿಳಿಸಿವೆ.

ವರದಿಗಳ ಪ್ರಕಾರ, ಅನುಮಾನಾಸ್ಪದ ವಸ್ತುಗಳಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದ ನಂತರ ಪೊಲೀಸರು ಮತ್ತು ಸಿಆರ್‌ಪಿಎಫ್ ತಂಡ ಸ್ಥಳಕ್ಕೆ ಧಾವಿಸಿ ಪ್ರದೇಶವನ್ನು ಪರಿಶೀಲನೆ ನಡೆಸಿವೆ. ಈ ವೇಳೆ ಬ್ಯಾಗ್​ನಲ್ಲಿ ಐಇಡಿ ಇರುವುದು ಕಂಡು ಬಂದಿದ್ದು, ಭದ್ರತಾ ಪಡೆಗಳು ಸ್ಫೋಟಕವನ್ನು ನಿಷ್ಕ್ರಿಯಗೊಳಿಸಿದ್ದಾರೆ. ನಂತರ ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.