ETV Bharat / bharat

ಸ್ವಪ್ನಾ ಸುರೇಶ್​ಗೆ ಉದ್ಯೋಗ ನೀಡಿದ್ದ ಎಚ್‌ಆರ್‌ಡಿಎಸ್ ವಿರುದ್ಧ ಪ್ರಕರಣ ದಾಖಲಿಸಿದ ಎಸ್‌ಸಿ/ಎಸ್‌ಟಿ ಆಯೋಗ: ಕಾರಣ?

author img

By

Published : Feb 21, 2022, 3:45 PM IST

ಎಚ್‌ಆರ್‌ಡಿಎಸ್ ವಿರುದ್ಧ ಪ್ರಕರಣ ದಾಖಲಿಸಿದsಎಸ್‌ಸಿ/ಎಸ್‌ಟಿ ಆಯೋಗ
ಎಚ್‌ಆರ್‌ಡಿಎಸ್ ವಿರುದ್ಧ ಪ್ರಕರಣ ದಾಖಲಿಸಿದsಎಸ್‌ಸಿ/ಎಸ್‌ಟಿ ಆಯೋಗ

ಬಿಜೆಪಿ ಪರವಾಗಿರುವ ಎನ್‌ಜಿಒ ಎನ್ನಲಾದ ಎಚ್‌ಆರ್‌ಡಿಎಸ್, ತಿರುವನಂತಪುರಂನಲ್ಲಿರುವ ಯುಎಇ ರಾಯಭಾರಿ ಕಚೇರಿ ಮೂಲಕ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸ್ವಪ್ನಾ ಸುರೇಶ್ ಅವರನ್ನು ನೇಮಕ ಮಾಡಿದ್ದು, ಚರ್ಚೆಗೆ ಗ್ರಾಸವಾಗಿತ್ತು. ಈಗ ಈ ಸಂಸ್ಥೆ ಮೇಲೆ ದೂರು ದಾಖಲಾಗಿದೆ.

ಪಾಲಕ್ಕಾಡ್(ಕೇರಳ): ಇತ್ತೀಚೆಗಷ್ಟೇ ಚಿನ್ನ ಕಳ್ಳಸಾಗಣೆ ಆರೋಪಿ ಸ್ವಪ್ನಾ ಸುರೇಶ್‌ಗೆ ಉದ್ಯೋಗ ನೀಡಿದ್ದ ಎನ್‌ಜಿಒ ಎಚ್‌ಆರ್‌ಡಿಎಸ್ ವಿರುದ್ಧ ಎಸ್‌ಸಿ/ಎಸ್‌ಟಿ ಆಯೋಗ ಪ್ರಕರಣ ದಾಖಲಿಸಿದೆ.

ವಂಚನೆ ದೂರುಗಳ ಹಿನ್ನೆಲೆಯಲ್ಲಿ ಆಯೋಗವು ಎನ್‌ಜಿಒ ವಿರುದ್ಧ ಪ್ರಕರಣ ದಾಖಲಿಸಿದೆ. ಎನ್‌ಜಿಒ ಕಳಪೆ ಗುಣಮಟ್ಟದ ಮನೆಗಳನ್ನು ನಿರ್ಮಿಸಿಕೊಟ್ಟು ಹಣವನ್ನು ಕಬಳಿಸಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ವಸತಿರಹಿತ ಬಡವರಿಂದ ಭೂಮಿಯನ್ನು ಕದಿಯಲು ಎನ್‌ಜಿಒ ಪ್ರಯತ್ನಿಸುತ್ತಿದೆ ಈ ವೇಳೆ ಆರೋಪಿಸಲಾಗಿದೆ.

ಸ್ವಪ್ನಾ ಸುರೇಶ್
ಸ್ವಪ್ನಾ ಸುರೇಶ್

ಬಿಜೆಪಿ ಪರವಾಗಿರುವ ಎನ್‌ಜಿಒ ಎನ್ನಲಾದ ಎಚ್‌ಆರ್‌ಡಿಎಸ್, ತಿರುವನಂತಪುರಂನಲ್ಲಿರುವ ಯುಎಇ ರಾಯಭಾರಿ ಕಚೇರಿ ಮೂಲಕ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸ್ವಪ್ನಾ ಸುರೇಶ್ ಅವರನ್ನು ನೇಮಕ ಮಾಡಿದ್ದು, ಚರ್ಚೆಗೆ ಗ್ರಾಸವಾಗಿತ್ತು.

ಇದನ್ನೂ ಓದಿ: ಕಾಂಗ್ರೆಸ್ ಇಲ್ಲದೆ ಯಾವುದೇ ರಂಗದ ರಚನೆ ಇಲ್ಲ : ಸಂಜಯ್ ರಾವತ್​

ಸ್ವಪ್ನಾ ಈಗ ಹಚ್​ಆರ್​ಡಿಎಸ್​ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ನಿರ್ದೇಶಕಿಯೂ ಹೌದು. ಅವರ ನೇಮಕಾತಿಯು ಬಿಜೆಪಿಯೊಂದಿಗೆ ಅವರ ನಿಕಟ ಸಂಬಂಧವನ್ನು ತೋರಿಸುತ್ತದೆ ಎಂದು ರಾಜಕೀಯ ವಿರೋಧಿಗಳು ಹೇಳಿದ್ದರಿಂದ ಅವರ ನೇಮಕಾತಿ ಬಿಸಿ- ಬಿಸಿ ರಾಜಕೀಯ ಚರ್ಚೆಯ ವಿಷಯವಾಗಿದೆ. ಇನ್ನು ಬಿಜೆಪಿ ಮುಖಂಡ ಎಸ್ ಕೃಷ್ಣಕುಮಾರ್ ಈ ಎನ್​​​ಜಿಒದ ಅಧ್ಯಕ್ಷರಾಗಿದ್ದಾರೆ. ಆದರೆ, ಕೃಷ್ಣಕುಮಾರ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದು ಎಚ್‌ಆರ್‌ಡಿಎಸ್ ಸದಸ್ಯರು ಹೇಳಿದ್ದಾರೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.