ETV Bharat / bharat

ಸ್ಯಾಮ್ಸನ್ ಆದ ಸತ್ಯಪಾಲ್​! ಯುಪಿಯ ಫತೇಪುರ ಚರ್ಚ್​​ನಲ್ಲಿ ಮತಾಂತರ ಪ್ರಕರಣ ಬೆಳಕಿಗೆ

author img

By

Published : Jan 27, 2023, 2:25 PM IST

Another case of conversion Satyapal becomes Samson
Another case of conversion Satyapal becomes Samson

ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ಮತಾಂತರದ ಪ್ರಕರಣ ಬೆಳಕಿಗೆ ಬಂದಿದೆ. ಚರ್ಚ್​ನಲ್ಲಿ 90 ಹಿಂದೂಗಳ ಸಾಮೂಹಿಕ ಮತಾಂತರ ನಡೆದಿದೆ ಎಂದು ಪ್ರಕರಣ ದಾಖಲಿಸಲಾಗಿದೆ.

ಫತೇಪುರ್ (ಉತ್ತರ ಪ್ರದೇಶ) : ಫತೇಪುರ್ ಜಿಲ್ಲೆಯ ಹರಿಹರಗಂಜ್ ಇಸಿಐ ಚರ್ಚ್‌ನಲ್ಲಿ ಮತಾಂತರ ನಡೆದಿದೆ ಎಂದು ಪ್ರಕರಣ ದಾಖಲಿಸಲಾಗಿದೆ. ಈ ಚರ್ಚ್​ನಲ್ಲಿ 90 ಹಿಂದೂಗಳ ಸಾಮೂಹಿಕ ಮತಾಂತರ ನಡೆದಿದೆ ಎಂದು ದೂರು ದಾಖಲಿಸಲಾಗಿದೆ. ನೈನಿ ಅಗ್ರಿಕಲ್ಚರ್ ಶುವಾಟ್ಸ್​ ಎಂಬ ಸಂಸ್ಥೆಯು (Sam Higginbottom University of Agriculture, Technology And Sciences) ಈ ಮತಾಂತರಗಳಿಗೆ ಫಂಡಿಂಗ್ ಮಾಡುತ್ತಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಹೆಸರಿಸಲಾದ 47 ಮತ್ತು 20 ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಇಸಿಐ ಚರ್ಚ್‌ನಲ್ಲಿ ಇದು ನಾಲ್ಕನೇ ಮತಾಂತರ ಪ್ರಕರಣವಾಗಿದೆ. ಮಾಲ್ವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ತಾರಾಪುರ ಅಸ್ವರ್ ನಿವಾಸಿ ಸತ್ಯಪಾಲ್ ಎಂಬುವರು ಕಳೆದ ಏಪ್ರಿಲ್‌ನಲ್ಲಿ ಸಾಮೂಹಿಕ ಮತಾಂತರ ನಡೆದಿದೆ ಎಂದು ಆರೋಪಿಸಿ ಇವಾಂಜೆಲಿಕಲ್ ಚರ್ಚ್ ಆಫ್ ಇಂಡಿಯಾ (ಇಸಿಐ) ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

ಮತಾಂತರ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದ ಸತ್ಯಪಾಲ್, ಮಿಷನ್ ಆಸ್ಪತ್ರೆಯಲ್ಲಿ ವಾಸಿಸುತ್ತಿರುವ ಭಿತೌರಾ ಪಿಎಚ್‌ಸಿಯಲ್ಲಿ ನಿಯೋಜನೆಗೊಂಡ ಎಎನ್‌ಎಂ ಲಿಲಿ ಸಿ ಅವರನ್ನು ಭೇಟಿಯಾದೆವು ಮತ್ತು ಚರ್ಚ್‌ನಲ್ಲಿ 90 ಹಿಂದೂಗಳೊಂದಿಗೆ ಮತಾಂತರಗೊಂಡೆವು. 40 ದಿನಗಳ ಪ್ರಕ್ರಿಯೆಯ ನಂತರ, SHUATS ಕೊಳದಲ್ಲಿ ಸ್ನಾನ ಮಾಡಿದೆವು ಎಂದು ಹೇಳಿದ್ದಾರೆ. ಮತಾಂತರದ ನಂತರ ಸತ್ಯಪಾಲ್ ಹೆಸರನ್ನು ಸ್ಯಾಮ್ಸನ್ ಎಂದು ಬದಲಾಯಿಸಲಾಗಿದೆ. ಮತಾಂತರ ಘಟನೆಗೂ ನೈನಿ ಕೃಷಿ SHUATS ಗೂ ಲಿಂಕ್ ಇದೆ ಎನ್ನಲಾಗಿದೆ. ಹೆಸರು ತಿಳಿದ 47 ಜನ ಮತ್ತು 20 ಅಪರಿಚಿತರ ವಿರುದ್ಧ ಫೋರ್ಜರಿ, ಮತಾಂತರ, ವಂಚನೆ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಸರ್ಕಲ್ ಅಧಿಕಾರಿ ವೀರ್ ಸಿಂಗ್ ತಿಳಿಸಿದ್ದಾರೆ.

ತನ್ನ ಮೂಲ ಆಧಾರ್ ಕಾರ್ಡ್ ಅನ್ನು ಚರ್ಚ್‌ನವರಿಗೆ ಹಸ್ತಾಂತರಿಸಿದ್ದೆ ಎಂದು ಸತ್ಯಪಾಲ್ ಹೇಳಿದ್ದಾರೆ. ಇದಾದ ಬಳಿಕ ಸ್ಯಾಮ್ಸನ್ ಎಂಬ ಹೆಸರಿನ ನಕಲಿ ಆಧಾರ್ ಕಾರ್ಡ್ ನೀಡಲಾಗಿತ್ತು. ಪ್ರಯಾಗರಾಜ್ ನೈನಿಯಲ್ಲಿರುವ ಯೂನಿವರ್ಸಿಟಿ SHUATS ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲು ಪೊಲೀಸರು ಇದೀಗ ನ್ಯಾಯಾಲಯದಲ್ಲಿ ಸರ್ಚ್ ವಾರಂಟ್ ಕೋರಿದ್ದಾರೆ. ಮತಾಂತರ ಮತ್ತು ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲು ಪೊಲೀಸರು ಮುಂದಾಗಿದ್ದಾರೆ. ಪೊಲೀಸರು ಹಲವಾರು ಬ್ಯಾಂಕ್‌ಗಳಿಂದ ಬ್ಯಾಂಕ್ ಖಾತೆಗಳ ವಿವರಗಳನ್ನು ಕೂಡ ಸಂಗ್ರಹಿಸಿದ್ದಾರೆ.

ಇಂದೋರ್ ಜಿಲ್ಲೆಯಲ್ಲಿ ಮತಾಂತರ: ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದವರನ್ನು ಧಾರ್ಮಿಕ ಮತಾಂತರಕ್ಕೆ ಒತ್ತಾಯಿಸಿದ ಆರೋಪದ ಮೇಲೆ ಚರ್ಚ್‌ನ ಪಾದ್ರಿ, ಮೂವರು ಮಹಿಳೆಯರು ಸೇರಿದಂತೆ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಝಬುವಾ ಜಿಲ್ಲೆಯ ಚರ್ಚ್‌ನ ಪಾದ್ರಿ ಮತ್ತು ಇತರರು ಸೇರಿಕೊಂಡು, 30 ವರ್ಷದ ಬುಡಕಟ್ಟು ವ್ಯಕ್ತಿ ಹತುನಿಯಾ ಗ್ರಾಮದ ಕೃಷಿ ಕಾರ್ಮಿಕ ಮತ್ತು ಆತನ ಕುಟುಂಬಕ್ಕೆ ತಮ್ಮ ಧರ್ಮವನ್ನು ಬದಲಾಯಿಸುವಂತೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಲಾಗಿದೆ.

ಪಾದ್ರಿ ರೇ ಸಿಂಗ್ ಮತ್ತು ಇತರ ಆರು ಮಂದಿ ತನ್ನ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದಿದ್ದಾರೆ ಮತ್ತು ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸುವಂತೆ ಒತ್ತಾಯಿಸಿದ್ದಾರೆ ಎಂದು ಭಿಲ್ ಸಮುದಾಯಕ್ಕೆ ಸೇರಿದ ಮಾನ್ ಸಿಂಗ್ ಬಿಲ್ವಾಲ್ ಎಂಬುವರು ದೂರು ಸಲ್ಲಿಸಿದ್ದಾರೆ ಎಂದು ಕ್ಷಿಪ್ರಾ ಪೊಲೀಸ್ ಠಾಣೆಯ ಪ್ರಭಾರಿ ಗಿರಿಜಾಶಂಕರ್ ಮಹೋಬಿಯಾ ಹೇಳಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮತಾಂತರ ಮತ್ತು ಗೋ ಹತ್ಯೆ ಕಾನೂನು ಇನ್ನಷ್ಟು ಕಠಿಣ ಆಗಬೇಕಿದೆ: ಪೇಜಾವರ ಶ್ರೀ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.