ETV Bharat / bharat

ಉತ್ತರ ಪ್ರದೇಶ ವಿಧಾನಸಭೆ ಫೈಟ್​​: ಕೊನೆಗೂ ಅಭ್ಯರ್ಥಿಗಳ ಲಿಸ್ಟ್ ರಿಲೀಸ್ ಮಾಡಿದ ಸಮಾಜವಾದಿ

author img

By

Published : Jan 24, 2022, 10:02 PM IST

Samajwadi Party declares candidates list
Samajwadi Party declares candidates list

Samajwadi Party declares candidates list: ಉತ್ತರ ಪ್ರದೇಶದಲ್ಲಿ ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಕನಸು ಕಾಣುತ್ತಿರುವ ಸಮಾಜವಾದಿ ಪಕ್ಷ ಇಂದು ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಿದ್ದು, ಅಳೆದು ತೂಗಿ ಅಭ್ಯರ್ಥಿಗಳಿಗೆ ಮಣೆ ಹಾಕಿದೆ.

ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶ ವಿಧಾನಸಭೆಗೆ ಮೊದಲನೇ ಹಂತದ ಚುನಾವಣೆ ಫೆ.10ರಂದು ನಡೆಯಲಿದ್ದು, ಇದಕ್ಕೆ ಕೆಲ ದಿನಗಳು ಬಾಕಿ ಇರುವಾಗ ಸಮಾಜವಾದಿ ಪಕ್ಷ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು 159 ಅಭ್ಯರ್ಥಿಗಳ ಪಟ್ಟಿಯಲ್ಲಿ ಅಖಿಲೇಶ್ ಯಾದವ್​ ಹೆಸರು ಕೂಡ ಇದ್ದು, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಖಚಿತಗೊಂಡಿದೆ.

ಪಟ್ಟಿಯ ಪ್ರಕಾರ ಸಮಾಜವಾದಿ ಪಕ್ಷದ ಪ್ರಮುಖ ಅಖಿಲೇಶ್ ಯಾದವ್​​​ ಕರ್ಹಾಲ್​ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದು, ಇದೇ ಮೊದಲ ಸಲ ವಿಧಾನಸಭೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಉಳಿದಂತೆ ಕೈರಾನಾದಿಂದ ನಹಿದ್​ ಹಸನ್​, ಸುವಾರ್​​ನಿಂದ ಅಬ್ದುಲ್ಲಾ ಅಜಮ್ ಖಾನ್​, ರಾಂಪುರದಿಂದ ಅಜಮ್ ಖಾನ್​​ ಹಾಗೂ ಜಸ್ವಂತ್​ನಗರದಿಂದ ಶಿವಪಾಲ್​ ಸಿಂಗ್ ಯಾದವ್​​ ಕಣಕ್ಕಿಳಿಯುತ್ತಿದ್ದಾರೆ.

ಪೂರ್ವ ಉತ್ತರ ಪ್ರದೇಶದ ಅಜಂಗಢದಿಂದ ಲೋಕಸಭೆ ಸಂಸದರಾಗಿರುವ ಅಖಿಲೇಶ್ ಯಾದವ್​​ ಇಲ್ಲಿಯವರೆಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರಲಿಲ್ಲ. ಆದರೆ, ಇದೇ ಮೊದಲ ಸಲ ಅವರು ಕಣಕ್ಕಿಳಿದಿದ್ದಾರೆ. 2012ರಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಅತಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿದ್ದ ವೇಳೆ ಅತಿ ಕಿರಿಯ ವಯಸ್ಸಿನ ಅಖಿಲೇಶ್ ಯಾದವ್​(38 ವರ್ಷ) ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಇದನ್ನೂ ಓದಿರಿ: ನಾಮಪತ್ರ ರದ್ದು.. ಪೆಟ್ರೋಲ್​ ಸುರಿದುಕೊಂಡು AAP ಅಭ್ಯರ್ಥಿ ಆತ್ಮಹತ್ಯೆಗೆ ಯತ್ನ!

ಕಳೆದ ಕೆಲ ದಿನಗಳ ಹಿಂದೆ ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರಿಕೊಂಡಿರುವ ಸ್ವಾಮಿ ಪ್ರಸಾದ್ ಮೌರ್ಯಗೂ ಟಿಕೆಟ್ ಖಚಿತವಾಗಿದೆ. ಆದರೆ ಅವರ ಮಗ ಉತ್ಕೃಷ್ಟ್ ಮೌರ್ಯಗೆ ಮೊದಲ ಲಿಸ್ಟ್​ನಲ್ಲಿ ಟಿಕೆಟ್​ ಘೋಷಣೆ ಮಾಡದಿರುವುದು ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಈಗಾಗಲೇ ಕಾಂಗ್ರೆಸ್​, ಬಿಜೆಪಿ ಸೇರಿದಂತೆ ಇತರೆ ಪಕ್ಷಗಳು ತಮ್ಮ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿ, ಪಟ್ಟಿ ರಿಲೀಸ್ ಮಾಡಿವೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.