ETV Bharat / bharat

ಶಬರಿಮಲೆ ದೇವಾಲಯ ಭೇಟಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

author img

By

Published : Dec 20, 2020, 8:53 PM IST

RT-PCR test must for devotees in Sabarimala
ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು 48 ಗಂಟೆಗಳ ಮೊದಲು ಮಾಡಿದ ಆರ್​ಟಿ-ಪಿಸಿಆರ್​ ಪರೀಕ್ಷೆಯನ್ನೊಳಗೊಂಡ ಕೋವಿಡ್​ ನೆಗೆಟಿವ್ ಪ್ರಮಾಣ ಪತ್ರ ತರಬೇಕು ಎಂದು ಟಿಡಿಬಿ ಅಧ್ಯಕ್ಷ ಎನ್.ವಾಸು ತಿಳಿಸಿದ್ದಾರೆ.

ತಿರುವನಂತಪುರಂ (ಕೇರಳ) : ಆರ್​ಟಿ-ಪಿಸಿಆರ್​ ಪರೀಕ್ಷೆಯನ್ನೊಳಗೊಂಡ ಕೋವಿಡ್​ ನೆಗೆಟಿವ್ ಪ್ರಮಾಣ ಪತ್ರ ತಂದ ಭಕ್ತರಿಗೆ ಮಾತ್ರ ಡಿಸೆಂಬರ್ 26 ರಿಂದ ಶಬರಿಮಲೆ ದೇವಳ ಭೇಟಿಗೆ ಅವಕಾಶ ನೀಡಲಾಗುವುದು ಎಂದು ತಿರುವಾಂಕೂರು ದೇವಸಂ ಮಂಡಳಿ (ಟಿಡಿಬಿ) ತಿಳಿಸಿದೆ. ಪ್ರತಿದಿನ 5 ಸಾವಿರ ಭಕ್ತರ ಭೇಟಿಗೆ ಅವಕಾಶ ನೀಡಿ ಕೇರಳ ಹೈಕೋರ್ಟ್ ಭಾನುವಾರ ಆದೇಶಿಸಿದೆ.

ದೇವಾಲಯಕ್ಕೆ ಭೇಟಿ ನೀಡುವ ಭಕ್ತರು, 48 ಗಂಟೆಗಳ ಮೊದಲು ಮಾಡಿದ ಆರ್​ಟಿ-ಪಿಸಿಆರ್​ ಪರೀಕ್ಷೆಯನ್ನೊಳಗೊಂಡ ಕೋವಿಡ್​ ನೆಗೆಟಿವ್ ಪ್ರಮಾಣ ಪತ್ರ ತರಬೇಕು ಎಂದು ಟಿಡಿಬಿ ಅಧ್ಯಕ್ಷ ಎನ್. ವಾಸು ತಿಳಿಸಿದ್ದಾರೆ.

ಓದಿ: ಶಬರಿಮಲೆ ಅಯ್ಯಪ್ಪ ಭಕ್ತರಿಗೆ ವರ್ಚುವಲ್​ ಕ್ಯೂ ಬುಕಿಂಗ್​ ಆರಂಭ

ವಾರ್ಷಿಕ ಮಕರ ವಿಲಕ್ಕು (ಮಕರ ಜ್ಯೋತಿ) ಹಬ್ಬದ ಪ್ರಯುಕ್ತ ಡಿಸೆಂಬರ್​ 31 ರಿಂದ 2021 ಜನವರಿ 13 ರವರೆಗೆ ಕೋವಿಡ್​ ನೆಗೆಟಿವ್ ಪ್ರಮಾಣ ಪತ್ರ ತಂದ ಭಕ್ತರಿಗೆ ಶಬರಿಮಲೆ ಬೆಟ್ಟ ಏರಲು ಅವಕಾಶ ನೀಡಲಾಗುವುದು. ಸರ್ಕಾರ ಶಬರಿಮಲೆ ತೀರ್ಥ ಯಾತ್ರಾ ಕಾರ್ಯಕ್ರಮಕ್ಕಾಗಿ 50 ಕೋಟಿ ರೂ ನೀಡಿರುವುದಾಗಿ ವಾಸು ತಿಳಿಸಿದ್ದಾರೆ.

ಈ ಹಿಂದೆ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಆ್ಯಂಟಿಜೆನ್​ ಪರೀಕ್ಷೆ ನಡೆಸಿದ ವರದಿ ತಂದಿದ್ದರೆ ಸಾಕಿತ್ತು. ಇಂದಿನವರೆಗೆ ಪ್ರತಿದಿನ 2 ಸಾವಿರ ಭಕ್ತರ ಭೇಟಿಗೆ ಅವಕಾಶ ನೀಡಲಾಗಿತ್ತು. ಮುಂದಿನ ಸೋಮವಾರದಿಂದ ಶುಕ್ರವಾರದವರೆಗೆ 3 ಸಾವಿರ ಭಕ್ತರ ಭೇಟಿಗೆ ಅವಕಾಶ ನೀಡಲಾಗುವುದು ಎಂದು ದೇವಾಲಯ ಮಂಡಳಿ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.