ETV Bharat / bharat

ಭಾರತ ಪ್ರವಾಸ ಕೈಗೊಂಡ ರಷ್ಯಾ ಮೂಲದ ಸನ್ಯಾಸಿನಿ.. ಇಲ್ಲಿದೆ ಕಾರಣ

author img

By

Published : Feb 24, 2022, 11:03 PM IST

Russian female monk
ರಷ್ಯಾ ಸನ್ಯಾಸಿನಿ

ಅನ್ನಪೂರ್ಣ ದೇವಿ ಅವರು ಭಗವಾನ್ ಶಿವ-ಕೃಷ್ಣ ಮತ್ತು ರಾಮ ಅವರಿಂದಲೂ ಸಹ ಪ್ರಭಾವಿತರಾಗಿದ್ದಾರೆ. ಎಲ್ಲಾ ದೇವರುಗಳನ್ನು ಅವರು ನಿಜವಾದ ಶಿಕ್ಷಕರೆಂದು ಪರಿಗಣಿಸುತ್ತಾರೆ.

ಜುನಾಗಢ( ಗುಜರಾತ): ಸನಾತನ ಹಿಂದೂ ಧರ್ಮದ ಪ್ರಭಾವಕ್ಕೆ ಒಳಗಾಗಿ ಅದರ ಅಧ್ಯಯನ ಮಾಡುವ ಉದ್ದೇಶಕ್ಕೆ ರಷ್ಯಾದ ಮಹಿಳಾ ಸನ್ಯಾಸಿನಿಯೊಬ್ಬರು ಜುನಾಗಢಕ್ಕೆ ಆಗಮಿಸಲಿದ್ದಾರೆ.

ರಷ್ಯಾ ಮೂಲದ ಸನ್ಯಾಸಿನಿ ಮಾತನಾಡಿದರು

'ಅನ್ನಪೂರ್ಣ ದೇವಿ' ಎಂಬ ಭಾರತೀಯ ಹೆಸರನ್ನು ಇಟ್ಟುಕೊಂಡಿರುವ ಅವರು, ಸನಾತನ ಹಿಂದೂ ಧರ್ಮವನ್ನು ಹರಡಲು, ಹಾಗೆಯೇ ಸಾಧನೆ ಮಾಡಲು ಭಾರತ ಪ್ರವಾಸ ಮಾಡುತ್ತಿದ್ದಾರೆ. ಅನೇಕ ವರ್ಷಗಳಿಂದ ಅವರು ಸನಾತನ ಹಿಂದೂ ಧರ್ಮವನ್ನು ಬೋಧಿಸುತ್ತಿದ್ದಾರೆ.

ಮಹಾಶಿವರಾತ್ರಿಯಲ್ಲಿ ಪಾಲ್ಗೊಳ್ಳಲು ಪ್ರವಾಸ: ಭಾವನಾಥದ ಮಹಾಶಿವರಾತ್ರಿ ಜಾತ್ರೆಗೆ ಅವರು ಆಗಮಿಸಿದ್ದಾರೆ. ಅವರು ಸನಾತನ ಹಿಂದೂ ಧರ್ಮ ಪರಂಪರೆಯನ್ನು ಪ್ರೇಕ್ಷಕರಿಗೆ ವ್ಯಾಪಕವಾಗಿ ಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ.

ರಷ್ಯಾ ಮತ್ತು ಭಾರತದಲ್ಲಿ ಧರ್ಮದ ಬಗ್ಗೆ ಜನರಿಂದ ಅಸಡ್ಡೆ: ಅನ್ನಪೂರ್ಣ ದೇವಿ ಅವರು ಭಗವಾನ್ ಶಿವ-ಕೃಷ್ಣ ಮತ್ತು ರಾಮ ಅವರಿಂದಲೂ ಸಹ ಪ್ರಭಾವಿತಳಾಗಿದ್ದಾರೆ. ಎಲ್ಲಾ ದೇವರುಗಳನ್ನು ಅವರು ನಿಜವಾದ ಶಿಕ್ಷಕರೆಂದು ಪರಿಗಣಿಸುತ್ತಾರೆ.

ರಾಮಕೃಷ್ಣ ಮತ್ತು ಭಗವಾನ್ ಶಿವ ಸೇರಿದಂತೆ ಎಲ್ಲಾ ದೇವರು ಮತ್ತು ದೇವತೆಗಳು ಧರ್ಮವನ್ನು ಆಚರಿಸುತ್ತಾರೆ ಮತ್ತು ಜನರಿಗೆ ನೈತಿಕ ಮಾರ್ಗದರ್ಶನ ನೀಡುತ್ತಾರೆ ಎಂದು ಅವರು ಹೇಳುತ್ತಾರೆ.

ಕೊರೊನಾ ಬಗ್ಗೆ ಅನ್ನಪೂರ್ಣ ದೇವಿ ಹೇಳಿದ್ದೇನು? ಕೊರೊನಾ ವೈರಸ್‌ನ ಭಯಾನಕ ಮತ್ತು ಕಠಿಣ ಅವಧಿಯಲ್ಲಿ ರಷ್ಯಾ ಮತ್ತು ಭಾರತವನ್ನು ಹೊರತುಪಡಿಸಿ ಪ್ರಾಯೋಗಿಕವಾಗಿ ಎಲ್ಲಾ ರಾಷ್ಟ್ರಗಳ ಕುಟುಂಬದ ಸದಸ್ಯರು ದೂರವಿದ್ದರು. ಸಾಂಕ್ರಾಮಿಕ ಸಮಯದಲ್ಲಿ ರಷ್ಯಾ ಮತ್ತು ಭಾರತದ ವ್ಯಕ್ತಿಗಳು ಮತ್ತು ಕುಟುಂಬಗಳು ಮಾತ್ರ ಪರಸ್ಪರ ಹತ್ತಿರವಾದವು. ಈ ಸಾಮರ್ಥ್ಯವು ಸನಾತನ ಧರ್ಮವನ್ನು ಅನುಸರಿಸುವ ಮೂಲಕ ಬಂದಿದೆ ಎಂದು ಅವರು ಹೇಳಿದ್ದಾರೆ.

ಓದಿ: ಖಗಾರಿಯಾದಲ್ಲಿ ಬಾಂಬ್ ಸ್ಫೋಟ: ಏಳು ಜನರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.