ETV Bharat / bharat

ದೇವಸ್ಥಾನದ ಬಳಿ ನಿಲ್ಲಿಸಿದ್ದ ರಾಯಲ್​ ಎನ್​ಫೀಲ್ಡ್​​ಗೆ ಬೆಂಕಿ, ಸ್ಫೋಟ - ಭೀಕರ ವಿಡಿಯೋ

author img

By

Published : Apr 4, 2022, 9:10 PM IST

Royal Enfield Catches Fire And Explodes
ರಾಯಲ್​ ಎನ್​ಫೀಲ್ಡ್​​ಗೆ ಬೆಂಕಿ, ಸ್ಫೋಟ

ದೇವಸ್ಥಾನದ ಬಳಿ ನಿಲ್ಲಿಸಿದ್ದಾಗ ಬುಲೆಟ್​​ ಬೈಕ್​ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯಲು ಆರಂಭಿಸಿದೆ. ನಂತರ ಎಲ್ಲರ ಕಣ್ಣಿದುರಿಗೇ ಅದು ಸ್ಫೋಟಗೊಂಡಿದೆ. ಇದರಿಂದ ಸುತ್ತ-ಮುತ್ತಲಿದ್ದ ಜನರು ಭಯಭೀತರಾಗಿದ್ದಾರೆ.

ಅನಂತಪುರ(ಆಂಧ್ರಪ್ರದೇಶ): ರಾಯಲ್​ ಎನ್​ಫೀಲ್ಡ್​​ ಬೈಕ್​ಗೆ ಹಠಾತ್ ಬೆಂಕಿ ಹೊತ್ತಿಕೊಂಡು ಅದು ಭಾರಿ ಶಬ್ದದೊಂದಿಗೆ ಸ್ಫೋಟಗೊಂಡ ಭೀಕರ ಘಟನೆ ಆಂಧ್ರಪ್ರದೇಶದ ಅನಂತಪುರದಲ್ಲಿ ನಡೆದಿದೆ. ನೋಡನೋಡುತ್ತಿದ್ದಂತೆ ಬುಲೆಟ್​​ ಬೈಕ್​ ಸ್ಫೋಟಗೊಂಡಿದ್ದರಿಂದ ಜನರು ಬೆಚ್ಚಿದ್ದಿದ್ದಾರೆ.

ಅನಂತಪುರದ ಗುಂತಕಲ್​ ವಲಯದ ಕಸಪುರಂ ನೆಟ್ಟಿಕಂಟಿಯ ಪ್ರಸಿದ್ಧ ಅಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ಭಕ್ತರೊಬ್ಬರಿಗೆ ಸೇರಿದ ರಾಯಲ್​ ಎನ್​ಫೀಲ್ಡ್ ಹೀಗೆ ಸ್ಫೋಟಗೊಂಡು ಸುಟ್ಟು ಹೋಗಿದೆ. ಇದು ರವಿಚಂದ್ರ ಎಂಬುವರಿಗೆ ಸೇರಿದ್ದಾಗಿದ್ದು, ಜಾತ್ರೆ ಮತ್ತು ಯುಗಾದಿ ಹಬ್ಬದ ನಿಮಿತ್ತ ಮೈಸೂರಿನಿಂದ ಈತ ದೇವಸ್ಥಾನಕ್ಕೆ ಬಂದಿದ್ದ ಎನ್ನಲಾಗ್ತಿದೆ. ದೇವಸ್ಥಾನದ ಬಳಿ ನಿಲ್ಲಿಸಿದ್ದಾಗ ಬುಲೆಟ್​​ ಬೈಕ್​ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯಲು ಆರಂಭಿಸಿದೆ. ನಂತರ ಎಲ್ಲರ ಕಣ್ಣಿದುರಿಗೇ ಅದು ಸ್ಫೋಟಗೊಂಡಿದೆ.

ದೇವಸ್ಥಾನದ ಬಳಿ ನಿಲ್ಲಿಸಿದ್ದ ರಾಯಲ್​ ಎನ್​ಫೀಲ್ಡ್​​ಗೆ ಬೆಂಕಿ, ಸ್ಫೋಟ

ಇದರಿಂದ ಸುತ್ತ-ಮುತ್ತಲಿದ್ದ ಜನರು ಭಯಗೊಂಡಿದ್ದಾರೆ. ಅಲ್ಲದೇ, ಓರ್ವ ಮಹಿಳೆಗೆ ಬೆಂಕಿಯ ಕಿಡಿ ತಾಗಿ ಕಾಲಿಗೆ ಸಣ್ಣ ಗಾಯವಾಗಿದೆ. ಬೈಕ್​ ನಿಲ್ಲಿಸಿದ್ದ ಸ್ಥಳದ ಸುತ್ತಲು ಬೇರೆ ಬೈಕ್​ಗಳು ಮತ್ತು ಸಣ್ಣ-ಪುಟ್ಟು ಅಂಗಡಿಗಳು ಇದ್ದವು. ಹೀಗಾಗಿ ತಕ್ಷಣವೇ ಪೊಲೀಸರು ಮತ್ತು ಸ್ಥಳೀಯರು ನೀರು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ. ಬುಲೆಟ್​​ಗೆ ಬೆಂಕಿ ಹೊತ್ತಿಕೊಂಡ ದೃಶ್ಯಗಳು ಮೊಬೈಲ್​ನಲ್ಲಿ ಸೆರೆಯಾಗಿವೆ.

ಇದನ್ನೂ ಓದಿ: ಪಾಟ್ನಾದಲ್ಲಿದೆ ಡೀಸೆಲ್ ಎಂಜಿನ್ ಬುಲೆಟ್ : ಒಂದು ಲೀಟರ್​ಗೆ 80 ಕಿ.ಮೀ ಮೈಲೇಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.