ETV Bharat / bharat

ಲಖಿಂಪುರ ಹಿಂಸಾಚಾರ: ಅಜಯ್ ಮಿಶ್ರಾ ವಜಾಗೊಳಿಸಲು ಟಿಕಾಯತ್ ಆಗ್ರಹ

author img

By

Published : Jan 4, 2022, 8:13 PM IST

Rakesh Tikait says Lakhimpur violence was 'well planned', seeks Ajay Mishra's dismissal
Rakesh Tikait says Lakhimpur violence was 'well planned', seeks Ajay Mishra's dismissal

ಲಖಿಂಪುರ ಹಿಂಸಾಚಾರ ಪ್ರಕರಣದಲ್ಲಿ ಎಸ್‌ಐಟಿ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಪುತ್ರನ ಹೆಸರಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರನ್ನು ವಜಾಗೊಳಿಸಬೇಕೆಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್​ ಆಗ್ರಹಿಸಿದ್ದಾರೆ.

ನವದೆಹಲಿ/ಘಾಜಿಯಾಬಾದ್: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಆರೋಪಪಟ್ಟಿ ಸಲ್ಲಿಸಿದ ಒಂದು ದಿನದ ನಂತರ ರೈತ ಮುಖಂಡ ಮತ್ತು ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್​ ಕೇಂದ್ರ ಸಚಿವರನ್ನು ವಜಾಗೊಳಿಸುವಂತೆ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ.

ಸೋಮವಾರ ನ್ಯಾಯಾಲಯದಲ್ಲಿ ಸಲ್ಲಿಸಲಾದ 5,000 ಪುಟಗಳ ಚಾರ್ಜ್‌ಶೀಟ್​​ನಲ್ಲಿ ಅಕ್ಟೋಬರ್ 3 ರಂದು ಹಿಂಸಾಚಾರ ನಡೆದ ಸ್ಥಳದಲ್ಲಿ ಆಶಿಶ್ ಮಿಶ್ರಾ ಅವರಿದ್ದರು ಎಂದು ಉಲ್ಲೇಖಿಸಲಾಗಿದೆ. ಇದರ ಆಧಾರದ ಮೇಲೆ ಟಿಕಾಯತ್​ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಹರಿಯಾಣ: ಈವರೆಗೆ 30 ಮಂದಿ ಪಾಕ್‌, ಆಫ್ಘನ್‌ ವಲಸಿಗರಿಗೆ ಭಾರತದ ಪೌರತ್ವ

ಲಖಿಂಪುರ ಪ್ರಕರಣದ ಎಸ್‌ಐಟಿಯ ಆರೋಪಪಟ್ಟಿ ನೋಡಿದರೆ ಎಲ್ಲವೂ ಪೂರ್ವ ಯೋಜಿತವಾಗಿರುವುದು ಸ್ಪಷ್ಟವಾಗಿದೆ. ಸಚಿವರ ಪುತ್ರನನ್ನು ಪ್ರಕರಣದ ಪ್ರಮುಖ ಆರೋಪಿ ಎಂದು ಹೆಸರಿಸಲಾಗಿದೆ. ಟೆನಿಯನ್ನು ಈಗ ಸಂಪುಟದಿಂದ ಕೂಡಲೇ ವಜಾಗೊಳಿಸಬೇಕು ಎಂದು ಟಿಕಾಯತ್​ ಟ್ವೀಟ್ ಮಾಡಿದ್ದಾರೆ.

  • लखीमपुर हत्याकांड में Sit की रिपोर्ट आने के बाद यह स्पष्ट हो गया है कि सब सुनियोजित था। गृहराज्य मंत्री का बेटा केस का मुख्यारोपी है। चार्जशीट के बाद टेनी को मंत्रिमंडल में बनाये रखने की कोई गुंजाइश नही बची है
    सरकार अजय टेनी को तुरंत बर्खास्त करे#ajaymishrateni @ANI @PTI_News

    — Rakesh Tikait (@RakeshTikaitBKU) January 3, 2022 " class="align-text-top noRightClick twitterSection" data=" ">

ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಭೇಟಿಯ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರು ಸಾವಿಗೀಡಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.