ETV Bharat / bharat

'ಪ್ರಧಾನಿ ಮೋದಿ, ಅದಾನಿ ಜೇಬುಗಳ್ಳರಿದ್ದಂತೆ'; ರಾಹುಲ್​ ಗಾಂಧಿ ಟೀಕೆಗೆ ಬಿಜೆಪಿ ತಿರುಗೇಟು

author img

By ETV Bharat Karnataka Team

Published : Nov 22, 2023, 7:39 PM IST

ರಾಹುಲ್​ ಗಾಂಧಿ
ರಾಹುಲ್​ ಗಾಂಧಿ

ರಾಜಸ್ಥಾನ ಚುನಾವಣಾ ಕಣದಲ್ಲಿ ರಾಜಕೀಯ ನಾಯಕರ ವಾಗ್ದಾಳಿ ಮುಂದುವರೆದಿದೆ.

ರಾಜಸ್ಥಾನ/ಚಂಡೀಗಢ: ಪ್ರಧಾನಿ ನರೇಂದ್ರ ಮೋದಿ ದುರಾದೃಷ್ಟ, ಅಪಶಕುನ ಎಂದು ಹೀಯಾಳಿಸಿದ್ದ ರಾಹುಲ್​ಗಾಂಧಿ, ಇದೀಗ ಪ್ರಧಾನಿಯನ್ನು ಜೇಬುಗಳ್ಳನಿಗೆ ಹೋಲಿಸಿದ್ದಾರೆ. ರಾಜಸ್ಥಾನದ ವಿಧಾನಸಭೆ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿರುವ ಕಾಂಗ್ರೆಸ್​ ನಾಯಕ, ಜೇಬುಗಳ್ಳರು ಹೇಗೆ ಒಂಟಿಯಾಗಿ ಬರುವುದಿಲ್ಲವೋ, ಹಾಗೆಯೇ ಪ್ರಧಾನಿ ಮೋದಿ, ಅಮಿತ್​ ಶಾ, ಅದಾನಿ ಒಟ್ಟಾಗಿ ದಾಳಿ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಮೂವರೂ ಗುಂಪಾಗಿ ಬರುತ್ತಾರೆ. ಆದರಲ್ಲಿ ಒಬ್ಬರು (ಮೋದಿ) ಗಮನವನ್ನು ಬೇರೆಡೆಗೆ ಸೆಳೆದರೆ, ಎರಡನೆಯವರು (ಅದಾನಿ) ಹಿಂದಿನಿಂದ ಬಂದು ಜೇಬು ಕತ್ತರಿಸುತ್ತಾರೆ. ಮೂರನೇಯ ವ್ಯಕ್ತಿ (ಅಮಿತ್ ಶಾ) ಜನರಿಂದ ತಪ್ಪಿಸಿಕೊಳ್ಳಲು ನಿಗಾ ವಹಿಸುತ್ತಿರುತ್ತಾರೆ ಎಂದು ಜೇಬುಗಳ್ಳರ ಕರಾಮತ್ತನ್ನು ಉದಾಹರಿಸುವ ಮೂಲಕ ಟೀಕಿಸಿದ್ದಾರೆ.

  • आपको निर्णय लेना है...

    आप राजस्थान में BJP और अडानी की सरकार चाहते हैं या किसानों, मजदूरों, छोटे दुकानदारों की सरकार चाहते हैं।

    अगर आपने BJP की सरकार चुनी तो-

    न स्वास्थ्य सुविधाएं मिलेंगी, न 500 रुपये में रसोई गैस सिलेंडर मिलेगा, न महिलाओं के खाते में पैसे आएंगे, न कैनाल… pic.twitter.com/prxjPtfn1K

    — Rajasthan PCC (@INCRajasthan) November 22, 2023 " class="align-text-top noRightClick twitterSection" data=" ">

ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದೇ ಪ್ರಧಾನಿ ನರೇಂದ್ರ ಮೋದಿಯವರ ಕೆಲಸ. ಅವರು ಟಿವಿಯಲ್ಲಿ ಬಂದು ಹಿಂದೂ-ಮುಸ್ಲಿಂ, ನೋಟು ಅಮಾನ್ಯೀಕರಣ ಅಥವಾ ಜಿಎಸ್‌ಟಿ ವಿಷಯದ ಮೂಲಕ ಸಾರ್ವಜನಿಕರನ್ನು ಸೆಳೆಯುತ್ತಾರೆ. ಅಷ್ಟರಲ್ಲಿ ಅದಾನಿ ಹಿಂಬಾಗಿಲಿನಿಂದ ಬಂದು ದೇಶವನ್ನು ಕೊಳ್ಳೆ ಹೊಡೆಯುತ್ತಾರೆ. ಅಮಿತ್​ ಶಾ ಇವರಿಗೆ ಭದ್ರತೆ ನೀಡುತ್ತಿರುತ್ತಾರೆ ಎಂದು ಹರಿಹಾಯ್ದಿದ್ದಾರೆ.

ಕಾಂಗ್ರೆಸ್​ಗೆ 'ರಾಹು'ಲ್​ ಅಪಶಕುನ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪಶಕುನ, ಜೇಬುಗಳ್ಳ ಎಂದು ಹೀಯಾಳಿಸಿದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಗೆ ಬಿಜೆಪಿ ತಿರುಗೇಟು ನೀಡಿದೆ. ರಾಹುಲ್ ಗಾಂಧಿಯೇ ಕೈ ಪಕ್ಷದ ದೊಡ್ಡ ಅಪಶಕುನ. ಅವರು ಮುಂದಾಳತ್ವ ವಹಿಸಿಕೊಂಡ ಬಳಿಕ ಪಕ್ಷವೇ ಮುಳುಗುತ್ತಿದೆ. ಇದಕ್ಕಿಂತ ದುರಾದೃಷ್ಟ ಮತ್ತೊಂದು ಬೇಕೆ? ಎಂದು ಕಿಚಾಯಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಹರಿಯಾಣದ ಗೃಹ ಸಚಿವ ಅನಿಲ್ ವಿಜ್, ಕಾಂಗ್ರೆಸ್ ನಾಯಕ ತಮ್ಮ ಪಕ್ಷಕ್ಕೇ ದೊಡ್ಡ ಪನೌತಿ (ಅಪಶಕುನ)ಯಾಗಿದ್ದಾರೆ. ಅವರು ಕಾಂಗ್ರೆಸ್‌ನ ಅಧಿಕಾರ ವಹಿಸಿಕೊಂಡ ಬಳಿಕ ಪಕ್ಷವು ಪಾತಾಳಕ್ಕೆ ಕುಸಿದಿದೆ. ರಾಹುಲ್​ ಹೇಳಿಕೆಗಳು ಕಾಂಗ್ರೆಸ್​ನ ಹತಾಶೆಯನ್ನು ಸೂಚಿಸುತ್ತವೆ. ಅವರು ಮೋದಿ ಖ್ಯಾತಿಗೆ ಹೊಟ್ಟೆಕಿಚ್ಚು ಪಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಇದೊಂದು ನಾಚಿಕೆಗೇಡಿನ ಮತ್ತು ಅವಮಾನಕರ ಸಂಗತಿ. ಕಾಂಗ್ರೆಸ್ ನಾಯಕ ದೇಶದ ಕ್ಷಮೆಯಾಚಿಸಬೇಕು. ಪ್ರಧಾನಿ ವಿರುದ್ಧ ಟೀಕಿಸುವುದೇ ಕಾಂಗ್ರೆಸ್​ನ ಕೆಲಸವಾಗಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್‌ನ ನಾಯಕರಿಗೆ, ದೇಶದ ಶತ್ರುಗಳಿಗೆ ಮತ್ತು ಭಯೋತ್ಪಾದಕರಿಗೆ ಮೋದಿ ದುಃಸ್ವಪ್ನವಾಗಿದ್ದಾರೆ. ಹೀಗಾಗಿ ರಾಹುಲ್​ ಗಾಂಧಿ ಇಂತಹ ಹತಾಶೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಪಕ್ಷದ ಹತಾಶೆಯನ್ನೂ ಪ್ರತಿಬಿಂಬಿಸುತ್ತದೆ ಎಂದಿದೆ.

ಇದನ್ನೂ ಓದಿ: 'ಭಾರತ ವಿಶ್ವಕಪ್​ ಗೆಲ್ಲುತ್ತಿತ್ತು, ಅಲ್ಲಿದ್ದ ಕೆಟ್ಟ ಶಕುನದಿಂದ ಸೋತಿತು': ಪ್ರಧಾನಿ ಮೋದಿ ವಿರುದ್ಧ ರಾಹುಲ್​ ಗಾಂಧಿ ಟೀಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.