ETV Bharat / bharat

ನಾಳೆ ದೆಹಲಿ ತಲುಪಲಿದೆ ಭಾರತ್ ಜೋಡೊ ಯಾತ್ರೆ: ಇನ್ನೂ ನಿರ್ಧಾರವಾಗಿಲ್ಲ ಮಾರ್ಗ

author img

By

Published : Dec 23, 2022, 4:23 PM IST

ನಾಳೆ ದೆಹಲಿ ತಲುಪಲಿದೆ ಭಾರತ್ ಜೋಡೊ ಯಾತ್ರೆ: ಇನ್ನೂ ನಿರ್ಧಾರವಾಗಿಲ್ಲ ಮಾರ್ಗ
rahul-gandhi-bharat-jodo-yatra-in-delhi

ಯಾತ್ರೆಯ ಕುರಿತಾಗಿ ಯಾವುದೇ ಅಡ್ವೈಸರಿ ಅಥವಾ ಸಮಯದ ಮಾಹಿತಿ ಇನ್ನೂ ಬಂದಿಲ್ಲ. ಪ್ರಯಾಣದ ಸಮಯವು ಲಭ್ಯವಾದ ನಂತರವೇ, ಕೇಂದ್ರ ವಲಯದಲ್ಲಿನ ಪ್ರಯಾಣದ ಮಾರ್ಗದಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವ ಬಗ್ಗೆ ಮಾಹಿತಿ ನೀಡಲು ಸಾಧ್ಯವಾಗುತ್ತದೆ ಎಂದು ದೆಹಲಿ ಪೊಲೀಸ್‌ ಕೇಂದ್ರ ವಲಯ ಸಂಚಾರ ಪೊಲೀಸ್ ಉಪ ಆಯುಕ್ತರು ಹೇಳಿದ್ದಾರೆ.

ನವದೆಹಲಿ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆಯಲ್ಲಿ ಹೊರಟಿರುವ ರಾಹುಲ್ ಗಾಂಧಿ ಶನಿವಾರ ದೆಹಲಿ ತಲುಪಲಿದ್ದಾರೆ. ಈ ಯಾತ್ರೆ ದೆಹಲಿಯ ಕೆಂಪು ಕೋಟೆಯವರೆಗೆ ಸಾಗಲಿದೆ. ಆದರೆ ಬಾದರ್‌ಪುರದಿಂದ ಕೆಂಪು ಕೋಟೆಗೆ ಯಾವ ಮಾರ್ಗದಲ್ಲಿ ರಾಹುಲ್ ಗಾಂಧಿ ಸಾಗಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಯಾತ್ರೆಯ ಕುರಿತಾಗಿ ಯಾವುದೇ ಅಡ್ವೈಸರಿ ಅಥವಾ ಸಮಯದ ಮಾಹಿತಿ ಇನ್ನೂ ಬಂದಿಲ್ಲ. ಪ್ರಯಾಣದ ಸಮಯವು ಲಭ್ಯವಾದ ನಂತರವೇ, ಕೇಂದ್ರ ವಲಯದಲ್ಲಿನ ಪ್ರಯಾಣದ ಮಾರ್ಗದಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವ ಬಗ್ಗೆ ಮಾಹಿತಿ ನೀಡಲು ಸಾಧ್ಯವಾಗುತ್ತದೆ ಎಂದು ಈ ಮಧ್ಯೆ ದೆಹಲಿ ಪೊಲೀಸ್‌ ಕೇಂದ್ರ ವಲಯ ಸಂಚಾರ ಪೊಲೀಸ್ ಉಪ ಆಯುಕ್ತರು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಎಂದು ಕಾಂಗ್ರೆಸ್ ನಾಯಕ ಕ್ಯಾಪ್ಟನ್ ಖವೀಂದ್ರ ಸಿಂಗ್, ಗುರುವಾರ ರಾತ್ರಿಯೂ ಕಾಂಗ್ರೆಸ್ ನಾಯಕರು ಮತ್ತು ದೆಹಲಿ ಪೊಲೀಸ್ ಅಧಿಕಾರಿಗಳ ನಡುವೆ ಸಭೆ ನಡೆದಿದ್ದು, ಯಾತ್ರೆಯ ಮಾರ್ಗದ ಬಗ್ಗೆ ಒಮ್ಮತ ಮೂಡಿಸಲು ಪ್ರಯತ್ನಿಸಲಾಗಿದೆ. ಸುಪ್ರೀಂ ಕೋರ್ಟ್‌ ಸುತ್ತಮುತ್ತ ವರ್ಷವಿಡೀ ಸೆಕ್ಷನ್ 144 ಜಾರಿಯಲ್ಲಿರುವುದರಿಂದ ಸುಪ್ರೀಂ ಕೋರ್ಟ್ ಬಳಿ ಯಾತ್ರೆ ಕೈಗೊಳ್ಳಲು ದೆಹಲಿ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ತಾವು ತಮ್ಮ ಪ್ರಯಾಣದ ಮಾರ್ಗ ಬದಲಾಯಿಸಲು ಸಿದ್ಧರಾಗಿದ್ದೇವೆ. ಇದಲ್ಲದೇ ದೇಶಾದ್ಯಂತ ನಡೆಯುತ್ತಿರುವ ಈ ಯಾತ್ರೆಗೆ ಅವಕಾಶ ನಿರಾಕರಿಸುವ ನೀಡದ ಪ್ರಶ್ನೆಯೇ ಇಲ್ಲ. ನಾವು ಖಂಡಿತವಾಗಿಯೂ ಕೆಂಪು ಕೋಟೆಯವರೆಗೆ ಯಾತ್ರೆಯಲ್ಲಿ ಸಾಗಲಿದ್ದೇವೆ ಎಂದರು.

ಭಾರತ್ ಜೋಡೋ ಯಾತ್ರೆಗೆ ರಾಹುಲ್ ಗಾಂಧಿಗೆ ಕಾಂಗ್ರೆಸ್ ನೀಡಿದ ಮಾರ್ಗವು ಬಾದರ್‌ಪುರ ಗಡಿಯಿಂದ ದೆಹಲಿ ಪ್ರವೇಶಿಸಲಿದೆ. ಇದಾದ ನಂತರ ಸರಿತಾ ವಿಹಾರ್, ನ್ಯೂ ಫ್ರೆಂಡ್ಸ್ ಕಾಲೋನಿ ಆಶ್ರಮ, ನಿಜಾಮುದ್ದೀನ್ ದರ್ಗಾದಿಂದ ಇಂಡಿಯಾ ಗೇಟ್ ಷಟ್ಕೋನದವರೆಗೆ ಸಾಗಿ, ತಿಲಕ್ ಸೇತುವೆ, ದೆಹಲಿ ಗೇಟ್ ಮೂಲಕ ಕೆಂಪುಕೋಟೆಯಲ್ಲಿ ಪ್ರಯಾಣ ಕೊನೆಗೊಳ್ಳಲಿದೆ. ಈ ಮಾರ್ಗವು ದೆಹಲಿಯ ಪ್ರಮುಖ ಮಥುರಾ ರಸ್ತೆ ಮತ್ತು ಇಂಡಿಯಾ ಗೇಟ್ ಮಧ್ಯ ದೆಹಲಿಯಿಂದ ದಕ್ಷಿಣ ದೆಹಲಿಗೆ ಸಂಪರ್ಕಿಸುವ ಮಾರ್ಗಗಳನ್ನು ಒಳಗೊಂಡಿದೆ. ಯಾತ್ರೆಗೆ ಜನಸಾಗರವೇ ಹರಿದು ಬರುವುದರಿಂದ ದಕ್ಷಿಣ ದೆಹಲಿಯ ಪ್ರದೇಶಗಳಲ್ಲಿ ಜಾಮ್ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ರಾಹುಲ್ ಶೂಲೇಸ್‌ ಕಟ್ಟಿದ ಆರೋಪ: ಅಮಿತ್ ಮಾಳವಿಯಾಗೆ ಕಾಂಗ್ರೆಸ್ ನಾಯಕನ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.