ETV Bharat / bharat

ಜೂ.7ರಿಂದ 424 ಗಣ್ಯರಿಗೆ ಭದ್ರತೆ ಮರು ನಿಯೋಜನೆ: ಹೈಕೋರ್ಟ್‌ಗೆ ಪಂಜಾಬ್ ಸರ್ಕಾರದ ವರದಿ

author img

By

Published : Jun 2, 2022, 8:29 PM IST

punjab-govt-to-restore-security-of-424-persons-from-june-7
ಜೂ.7ರಿಂದ 424 ಗಣ್ಯರಿಗೆ ಭದ್ರತೆ ಮರು ನಿಯೋಜನೆ: ಹೈಕೋರ್ಟ್‌ಗೆ ಪಂಜಾಬ್ ಸರ್ಕಾರದ ವರದಿ

ಗುರುವಾರ ಸರ್ಕಾರ ಹೈಕೋರ್ಟ್‌ನಲ್ಲಿ ತನ್ನ ಹೇಳಿಕೆ ದಾಖಲಿಸಿದ್ದು, ಜೂನ್ 7ರಿಂದ ಎಲ್ಲ 424 ಗಣ್ಯರಿಗೆ ಮರುಭದ್ರತೆ ಕೊಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಹೀಗಾಗಿ ಮುಂದಿನ ವಿಚಾರಣೆಯನ್ನು ಜುಲೈ 22ಕ್ಕೆ ನ್ಯಾಯಾಲಯ ಮುಂದೂಡಿದೆ.

ಚಂಡೀಗಢ (ಪಂಜಾಬ್): ಪಂಜಾಬ್​ನಲ್ಲಿ ತಾತ್ಕಾಲಿಕವಾಗಿ ಹಿಂಪಡೆದಿರುವ 424 ಗಣ್ಯರ ಭದ್ರತೆಯನ್ನು ಜೂನ್ 7ರಿಂದ ಮರುಸ್ಥಾಪಿಸುವುದಾಗಿ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಸರ್ಕಾರ ಗುರುವಾರ ಪಂಜಾಬ್-ಹರಿಯಾಣ ಹೈಕೋರ್ಟ್‌ಗೆ ತಿಳಿಸಿದೆ.

ಸರ್ಕಾರ ಭದ್ರತೆ ಹಿಂಪಡೆದ ಮರು ದಿನವೇ ಮೇ 29ರಂದು ಮಾನ್ಸಾ ಜಿಲ್ಲೆಯಲ್ಲಿ ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಹತ್ಯೆಯಾಗಿತ್ತು. ಇತ್ತ, ತಮಗೆ ನೀಡಿದ್ದ 'ಝಡ್' ಶ್ರೇಣಿ ಭದ್ರತೆಯನ್ನು ಹಿಂಪಡೆದಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಕಾಂಗ್ರೆಸ್ ನಾಯಕರಾದ ಮಾಜಿ ಉಪ ಮುಖ್ಯಮಂತ್ರಿ ಓಂಪ್ರಕಾಶ್ ಸೋನಿ ಹೈಕೋರ್ಟ್​ ಮೆಟ್ಟಿಲೇರಿದ್ದರು.

ಜೂ.7ರಿಂದ 424 ಗಣ್ಯರಿಗೆ ಭದ್ರತೆ ಮರು ನಿಯೋಜನೆ: ಹೈಕೋರ್ಟ್‌ಗೆ ಪಂಜಾಬ್ ಸರ್ಕಾರದ ವರದಿ

ಈ ನಡುವೆ ಸರ್ಕಾರ ಭದ್ರತೆ ಹಿಂಪಡೆದ ವಿಷಯವಾಗಿ ಹೈಕೋರ್ಟ್ ಸೋಮವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. ಎಷ್ಟು ಜನರ ಭದ್ರತೆ ಕಡಿತಗೊಳಿಸಲಾಗಿದೆ ಮತ್ತು ಈ ಕ್ರಮಕ್ಕೆ ಕಾರಣವೇನು ಎಂಬುದರ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಉಚ್ಛ ನ್ಯಾಯಾಲಯ ಸೂಚಿಸಿತ್ತು.

ಹೀಗಾಗಿ ಗುರುವಾರ ಸರ್ಕಾರ ಹೈಕೋರ್ಟ್‌ನಲ್ಲಿ ತನ್ನ ಹೇಳಿಕೆ ದಾಖಲಿಸಿದ್ದು, ಜೂನ್ 7ರಿಂದ ಎಲ್ಲ 424 ಗಣ್ಯರಿಗೆ ಮರುಭದ್ರತೆ ಕೊಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಹೀಗಾಗಿ ಮುಂದಿನ ವಿಚಾರಣೆಯನ್ನು ಜುಲೈ 22ಕ್ಕೆ ನ್ಯಾಯಾಲಯ ಮುಂದೂಡಿದೆ.

ವಿಚಾರಣೆ ಬಳಿಕ ಮಾಜಿ ಡಿಸಿಎಂ ಓಂಪ್ರಕಾಶ್ ಸೋನಿ ಪರ ವಕೀಲೆ ಮಧು ದಯಾಳ್ ಮಾತನಾಡಿ, ಭದ್ರತೆ ಹಿಂಪಡೆದ ಕುರಿತಾಗಿ ಪಂಜಾಬ್ ಸರ್ಕಾರವು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್​ಗೆ ವರದಿ ಸಲ್ಲಿಸಿದೆ. ಇದೇ ವೇಳೆ ಜೂನ್ 6ರಂದು ನಡೆದ ಆಪರೇಷನ್ ಬ್ಲೂ ಸ್ಟಾರ್ ವಾರ್ಷಿಕ ಕಾರ್ಯಕ್ರಮ ಹಿನ್ನೆಲೆಯಲ್ಲಿ ಭದ್ರತೆಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ. ಅಲ್ಲದೇ, ಜೂ.7ರಿಂದ ಭದ್ರತೆ ಮರುಸ್ಥಾಪಿಸುವುದಾಗಿಯೂ ಸರ್ಕಾರ ತಿಳಿಸಿದೆ ಎಂದು ಮಾಹಿತಿ ನೀಡಿದರು.

ಇನ್ನು, ಮೇ 28ರಂದು ಪಂಜಾಬ್ ಸರ್ಕಾರವು 424 ಜನರ ಭದ್ರತೆ ಹಿಂತೆಗೆದುಕೊಂಡಿತ್ತು. ಇದರಲ್ಲಿ ಸಿಧು ಮೂಸೆವಾಲಾ ಕೂಡ ಸೇರಿದ್ದರು. ಆದರೆ, ಇದರ ಮರು ದಿನವೇ ಅವರನ್ನು ಭಾನುವಾರ ಅಪರಿಚಿತ ದುಷ್ಕರ್ಮಿಗಳಿಂದ ಗುಂಡಿಕ್ಕಿ ಕೊಲೆ ಮಾಡಿದ್ದರು.

ಇದನ್ನೂ ಓದಿ: ಮೂಸೆವಾಲಾ ಹಂತಕರ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ಬಹುಮಾನ: ಭೂಪ್ಪಿ ರಾಣಾ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.