ETV Bharat / bharat

ಫಿಟ್ನೆಸ್​ ಚಾಲೆಂಜ್​ನಲ್ಲಿ ಯಶಸ್ವಿಯಾದ ಅಂಕಿತ್​ರೊಂದಿಗೆ ಪ್ರಧಾನಿ ಮೋದಿ ಸ್ವಚ್ಛತಾ ಅಭಿಯಾನ

author img

By ETV Bharat Karnataka Team

Published : Oct 1, 2023, 4:23 PM IST

PM Modi participates in Swachh Bharat campaign with Ankit who started 75 day challenge
PM Modi participates in Swachh Bharat campaign with Ankit who started 75 day challenge

ಗಾಂಧಿ ಜಯಂತಿಯ ಮುನ್ನಾದಿನವಾದ ಇಂದು ದೇಶಾದ್ಯಂತ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

ನವದೆಹಲಿ : ಗಾಂಧಿ ಜಯಂತಿಯ ಮುನ್ನಾದಿನವಾದ ಇಂದು (ಭಾನುವಾರ) ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದರು. ಯುವಕರಲ್ಲಿ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಕರೆ ನೀಡಲಾಗಿದ್ದ 75 ದಿನಗಳ ಚಾಲೆಂಜ್​ನಲ್ಲಿ ಯಶಸ್ವಿಯಾದ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಹೆಸರು ಮಾಡಿರುವ ಅಂಕಿತ್ ಬೈಯಾನ್​ಪುರಿಯಾ ಅವರೊಂದಿಗೆ ಸೇರಿ ಪ್ರಧಾನಿ ಕಸ ಗುಡಿಸಿದ್ದು ವಿಶೇಷವಾಗಿತ್ತು.

  • Today, as the nation focuses on Swachhata, Ankit Baiyanpuriya and I did the same! Beyond just cleanliness, we blended fitness and well-being also into the mix. It is all about that Swachh and Swasth Bharat vibe! @baiyanpuria pic.twitter.com/gwn1SgdR2C

    — Narendra Modi (@narendramodi) October 1, 2023 " class="align-text-top noRightClick twitterSection" data=" ">

ಸ್ವಚ್ಛ ಭಾರತ ಅಭಿಯಾನದಲ್ಲಿ ಒಂದಾಗಿ ಪಾಲ್ಗೊಂಡಿದ್ದ ಪ್ರಧಾನಿ ಮತ್ತು ಅಂಕಿತ್ ಇಬ್ಬರೂ ಫಿಟ್ನೆಸ್ ಮತ್ತು ಸ್ವಚ್ಛತೆಯ ಬಗ್ಗೆ ಚರ್ಚಿಸಿದರು ಎಂದು ಪಿಎಂ ಮೋದಿ ತಮ್ಮ ಎಕ್ಸ್ ನಲ್ಲಿ ಪೋಸ್ಟ್​ ಮಾಡಿದ ವೀಡಿಯೊದಲ್ಲಿ ತೋರಿಸಲಾಗಿದೆ. ಅಂಕಿತ್ ತನ್ನ ಇನ್​ಸ್ಟಾಗ್ರಾಮ್ ಪ್ರೊಫೈಲ್​ನಲ್ಲಿ 4.9 ಮಿಲಿಯನ್ ಫಾಲೋವರ್​ಗಳನ್ನು ಹೊಂದಿದ್ದಾರೆ.

"ಇಂದು, ರಾಷ್ಟ್ರವು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿರುವ ಮಧ್ಯೆ ಅಂಕಿತ್ ಬೈಯಾನ್​ಪುರಿಯಾ ಮತ್ತು ನಾನು ಕೂಡ ಸ್ವಚ್ಛತಾ ಅಭಿಯಾನ ಕೈಗೊಂಡಿದ್ದೇವೆ. ಸ್ವಚ್ಛತೆ ಮಾತ್ರವಲ್ಲದೆ ಫಿಟ್ನೆಸ್ ಮತ್ತು ಯೋಗಕ್ಷೇಮವನ್ನು ಸಹ ಈ ಅಭಿಯಾನದಲ್ಲಿ ಸೇರಿಸಿದ್ದೇವೆ. ಇದು ಆ ಸ್ವಚ್ಛ ಮತ್ತು ಸ್ವಸ್ಥ ಭಾರತ್ ಎಂಬ ಘೋಷಣೆಯ ಬಗೆಗಿನ ವಿಚಾರವಾಗಿದೆ!" ಎಂದು ವೀಡಿಯೊಗೆ ಶೀರ್ಷಿಕೆ ನೀಡಲಾಗಿದೆ.

"ನಾನು ಇಂದು ನಿಮ್ಮಿಂದ ಏನನ್ನಾದರೂ ಕಲಿಯುತ್ತೇನೆ" ಎಂದು ಪ್ರಧಾನಿ ಮೋದಿಯವರು ಅಂಕಿತ್​ಗೆ ಹೇಳುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಸ್ವಚ್ಛತಾ ಅಭಿಯಾನವು ಫಿಟ್ನೆಸ್​ಗೆ ಹೇಗೆ ಸಹಾಯ ಮಾಡುತ್ತದೆ ಎಂದು ಪ್ರಧಾನಿ ಮೋದಿ ಅಂಕಿತ್ ಅವರಿಗೆ ಪ್ರಶ್ನಿಸುತ್ತಾರೆ. "ಪರಿಸರವನ್ನು ಸ್ವಚ್ಛವಾಗಿಡುವುದು ನಮ್ಮ ಕರ್ತವ್ಯ. ಪರಿಸರವು ಆರೋಗ್ಯಕರವಾಗಿದ್ದರೆ ನಾವು ಸಹ ಆರೋಗ್ಯಕರವಾಗಿರುತ್ತೇವೆ" ಎಂದು ಅಂಕಿತ್ ಪ್ರಧಾನಿ ಮೋದಿಗೆ ಉತ್ತರಿಸಿದರು.

ಸೋನಿಪತ್​ನ ನಿಮ್ಮ ಗ್ರಾಮದಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಹೇಗೆ ಮೂಡಿತು ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು. ಜನ ಈಗ ಸ್ವಚ್ಛತೆಯ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ ಎಂದು ಅಂಕಿತ್ ಇದಕ್ಕೆ ಉತ್ತರಿಸಿದರು. ಸ್ವಚ್ಛ ಭಾರತವು ದೇಶದ ಎಲ್ಲಾ ನಾಗರಿಕರ ಸಾಮೂಹಿಕ ಜವಾಬ್ದಾರಿಯಾಗಿದೆ ಮತ್ತು ಇದಕ್ಕಾಗಿ ಸಾರ್ವಜನಿಕರ ಭಾಗವಹಿಸುವಿಕೆ ಬಹಳ ಮುಖ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸ್ವಚ್ಛತೆ ಕಾಪಾಡಲು ಮತ್ತು ದೇಶದ ಉಜ್ವಲ ಭವಿಷ್ಯ ನಿರ್ಮಾಣಕ್ಕಾಗಿ ಭಾನುವಾರ ಬೆಳಗ್ಗೆ 10 ಗಂಟೆಗೆ ಪ್ರತಿಯೊಬ್ಬರೂ ಒಂದು ಗಂಟೆ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ಕರೆ ನೀಡಿದ್ದರು.

281 ಸೆಕೆಂಡುಗಳ ವೀಡಿಯೊದಲ್ಲಿ, ಫಿಟ್ನೆಸ್​ ಚಟುವಟಿಕೆಗಳಿಗಾಗಿ ಪ್ರತಿದಿನ ಎಷ್ಟು ಸಮಯ ವಿನಿಯೋಗಿಸುತ್ತಿರುವಿರಿ ಎಂದು ಪಿಎಂ ಮೋದಿ ಅಂಕಿತ್ ಅವರಿಗೆ ಕೇಳುತ್ತಾರೆ. ಅದಕ್ಕೆ ಅವರು 4-5 ಗಂಟೆಗಳ ಕಾಲ ಎಂದು ಹೇಳಿದರು. "ನೀವು ವ್ಯಾಯಾಮ ಮಾಡುವುದನ್ನು ನೋಡಿ ನಾನು ಪ್ರೇರೇಪಿತನಾಗಿದ್ದೇನೆ" ಎಂದು ಅಂಕಿತ್ ಪ್ರಧಾನಿ ಮೋದಿಗೆ ಹೇಳಿದರು. ಆಗ ಪ್ರಧಾನಿ ಮೋದಿ, "ನಾನು ಹೆಚ್ಚು ವ್ಯಾಯಾಮ ಮಾಡುವುದಿಲ್ಲ. ನನ್ನ ದೈನಂದಿನ ಚಟುವಟಿಕೆಗಳನ್ನು ಪೂರೈಸಲು ಅಗತ್ಯವಿರುವಷ್ಟು ವ್ಯಾಯಾಮವನ್ನು ಮಾತ್ರ ನಾನು ಮಾಡುತ್ತೇನೆ." ಎಂದರು.

"ನಾನು ಜೀವನದಲ್ಲಿ ಶಿಸ್ತು ಪಾಲಿಸುತ್ತೇನೆ. ಆದರೆ ಎರಡು ವಿಷಯಗಳಲ್ಲಿ ನನಗೆ ಶಿಸ್ತು ಪಾಲಿಸಲಾಗುತ್ತಿಲ್ಲ. ಒಂದು, ಊಟದ ಸಮಯ. ಎರಡನೆಯದಾಗಿ, ನಿದ್ರೆ. ನಿದ್ರೆಗೆ ಹೆಚ್ಚಿನ ಸಮಯವನ್ನು ನೀಡಬೇಕು, ಆದರೆ ನನಗೆ ಸಾಧ್ಯವಾಗುತ್ತಿಲ್ಲ" ಎಂದು ಪ್ರಧಾನಿ ಮೋದಿ ಹೇಳಿದರು.

"ಮೂಲತಃ ನಾನೊಬ್ಬ ಕ್ರೀಡಾಪಟು, ಆದರೆ ಕೆಲ ಗಾಯಗಳಿಂದಾಗಿ ಕ್ರೀಡೆಯಿಂದ ದೂರವಿದ್ದೇನೆ. ಕ್ರೀಡಾಪಟುಗಳು ಪದಕ ಗೆದ್ದಾಗ ನೀವು ವೈಯಕ್ತಿಕವಾಗಿ ಅವರನ್ನು ಕರೆದು ಮಾತನಾಡಿಸುವುದನ್ನು ನೋಡಿದ್ದೇನೆ. ಫಿಟ್ ಇಂಡಿಯಾ ಮತ್ತು ಖೇಲೋ ಇಂಡಿಯಾ ಉಪಕ್ರಮಗಳು ಕ್ರೀಡಾಪಟುಗಳನ್ನು ಪ್ರೇರೇಪಿಸುತ್ತಿವೆ" ಎಂದು ಅಂಕಿತ್ ಹೇಳಿದರು. ನಿಮ್ಮ 75 ದಿನಗಳ ಸವಾಲು ಏನಾಗಿತ್ತು ಎಂದು ಪ್ರಧಾನಿ ಮೋದಿ ಅಂಕಿತ್ ಅವರಿಗೆ ಕೇಳಿದರು.

"ನಾನು ಐದು ನಿಯಮಗಳನ್ನು ಪಾಲಿಸುತ್ತೇನೆ. ಮೊದಲಿಗೆ, ದಿನಕ್ಕೆ ಎರಡು ಬಾರಿ ವ್ಯಾಯಾಮ ಮಾಡುತ್ತೇನೆ, ಒಂದು ಒಳಾಂಗಣ ಮತ್ತು ಇನ್ನೊಂದು ಹೊರಾಂಗಣ. ಪ್ರತಿದಿನ ನಾಲ್ಕು ಲೀಟರ್ ನೀರು ಕುಡಿಯುತ್ತೇನೆ. ಯಾವುದಾದರೂ ಪುಸ್ತಕದ 10 ಪುಟಗಳನ್ನು ಓದುತ್ತೇನೆ. ಆರಂಭದಲ್ಲಿ ನಾನು ಶ್ರೀಮದ್ ಭಾಗವತವನ್ನು ಓದಿದ್ದೇನೆ. ಈಗ ಶಿವ ಪುರಾಣವನ್ನು ಓದುತ್ತಿದ್ದೇನೆ. ನಾಲ್ಕನೆಯದಾಗಿ, ನಾನು ಕಟ್ಟುನಿಟ್ಟಾದ ಆಹಾರ ಪದ್ಧತಿಯನ್ನು ಅನುಸರಿಸುತ್ತೇನೆ. ಕೊನೆಯದಾಗಿ, ನನ್ನಲ್ಲಿನ ಪ್ರಗತಿಯನ್ನು ದಾಖಲಿಸಲು ನಾನು ಸೆಲ್ಫಿ ತೆಗೆದುಕೊಳ್ಳುತ್ತೇನೆ" ಎಂದು ಅಂಕಿತ್ ಹೇಳಿದರು.

ವರದಿಗಳ ಪ್ರಕಾರ, ಅಂಕಿತ್ ಬೈಯಾನ್ಪುರಿಯಾ ಜೂನ್ 28, 2023 ರಂದು ತಮ್ಮ 75 ಕಠಿಣ ಸವಾಲನ್ನು ಪ್ರಾರಂಭಿಸಿದರು ಮತ್ತು ಅಂತಿಮವಾಗಿ ಸೆಪ್ಟೆಂಬರ್ 11, 2023 ರಂದು ಈ ಕಠಿಣ ಸವಾಲನ್ನು ಪೂರ್ಣಗೊಳಿಸಿದರು. ಅವರು ತಮ್ಮ 75 ದಿನಗಳ ಸವಾಲಿನ ಸಮಯದಲ್ಲಿ ಪ್ರತಿದಿನ ಇನ್​ಸ್ಟಾಗ್ರಾಮ್​ನಲ್ಲಿ ವೀಡಿಯೊ ಪೋಸ್ಟ್​ ಮಾಡುತ್ತಿದ್ದರು.

ಇದನ್ನೂ ಓದಿ : ಪ್ರತಿ ನಿಮಿಷಕ್ಕೆ ಲಕ್ಷಾಂತರ ಡಾಲರ್​ ಗಳಿಕೆ! ಅಸಲಿಯತ್ತೇನು? ಎಲೋನ್ ಮಸ್ಕ್ ಸ್ಪಷ್ಟನೆ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.