ETV Bharat / bharat

ಡಿಜಿ & ಐಜಿಪಿ ಸಮ್ಮೇಳನ: ಹಳೆ ಕಾನೂನುಗಳ ರದ್ದು, ಪೊಲೀಸರಿಗೆ ಆಧುನಿಕ ತರಬೇತಿ ಮಹತ್ವ ತಿಳಿಸಿದ ಪ್ರಧಾನಿ

author img

By

Published : Jan 23, 2023, 10:58 AM IST

pm modi
ಮೋದಿ

ಡಿಜಿಪಿಗಳ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜೈಲುಗಳ ಸುಧಾರಣೆ ಸೇರಿದಂತೆ ಬಳಕೆಯಲ್ಲಿಲ್ಲದ ಕ್ರಿಮಿನಲ್ ಕಾನೂನುಗಳನ್ನು ರದ್ದುಗೊಳಿಸುವ ಇಂಗಿತ ವ್ಯಕ್ತಪಡಿಸಿದರು.

ನವದೆಹಲಿ: "ಪೊಲೀಸ್ ಪಡೆಗಳನ್ನು ಹೆಚ್ಚು ಸಂವೇದನಾಶೀಲಗೊಳಿಸಬೇಕು. ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಅವರಿಗೆ ತರಬೇತಿ ನೀಡಬೇಕು. ಗಸ್ತುಗಳಂತಹ ಸಾಂಪ್ರದಾಯಿಕ ಪೊಲೀಸ್ ಕಾರ್ಯವಿಧಾನಗಳನ್ನು ಇನ್ನಷ್ಟು ಶಕ್ತಿಯುತಗೊಳಿಸಬೇಕು" ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.

ಡೈರೆಕ್ಟರ್ ಜನರಲ್‌ಗಳು/ಇನ್ಸ್​ಪೆಕ್ಟರ್ ಜನರಲ್ ಆಫ್ ಪೊಲೀಸ್​(ಡಿಜಿ ಮತ್ತು ಐಜಿಪಿ) 57ನೇ ಅಖಿಲ ಭಾರತ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ರಾಜ್ಯ ಪೊಲೀಸ್ ಮತ್ತು ಕೇಂದ್ರ ಏಜೆನ್ಸಿಗಳ ನಡುವಿನ ಸಹಕಾರವನ್ನು ಒತ್ತಿ ಹೇಳಿದರು. ಬಳಿಕ ಬಳಕೆಯಲ್ಲಿಲ್ಲದ ಕ್ರಿಮಿನಲ್ ಕಾನೂನುಗಳನ್ನು ರದ್ದುಗೊಳಿಸಲು ಮತ್ತು ರಾಜ್ಯಗಳಾದ್ಯಂತ ಪೊಲೀಸ್ ಸಂಸ್ಥೆಗಳಿಗೆ ಮಾನದಂಡಗಳನ್ನು ರೂಪಿಸಲು ಶಿಫಾರಸು ಮಾಡಿದರು. ಇದೇ ವೇಳೆ, ಪೊಲೀಸ್ ಪಡೆಗಳಿಗೆ ಹೆಚ್ಚು ಸೂಕ್ಷ್ಮ ಮತ್ತು ಹೊಸ ತಂತ್ರಜ್ಞಾನಗಳನ್ನು ಬಳಸಿ ತರಬೇತಿ ನೀಡಬೇಕು. ಆಗಾಗ್ಗೆ ಅಧಿಕಾರಿಗಳು ಭೇಟಿ ನೀಡುವ ಮೂಲಕ ಗಡಿ ಭದ್ರತೆ ಹಾಗೂ ಕರಾವಳಿ ಭದ್ರತೆಯನ್ನು ಬಲಪಡಿಸಬೇಕು ಎಂದು ನಿರ್ದೇಶನ ನೀಡಿದರು.

ಇದನ್ನೂ ಓದಿ: ನವೆಂಬರ್​ನಲ್ಲಿ ಡಿಜಿಪಿ ಮತ್ತು ಐಜಿಪಿಗಳ ವಾರ್ಷಿಕ ಸಭೆ.. ಪ್ರಧಾನಿ ಮೋದಿ, ಗೃಹಸಚಿವ ಶಾ ಭಾಗಿ

ಏಜೆನ್ಸಿಗಳಿಗೆ ಡೇಟಾ ವಿನಿಮಯವನ್ನು ಸುಗಮಗೊಳಿಸಲು ಅನುಕೂಲವಾಗುವಂತೆ ರಾಷ್ಟ್ರೀಯ ಡೇಟಾ ಆಡಳಿತ ಚೌಕಟ್ಟಿನ ಪ್ರಾಮುಖ್ಯತೆಯನ್ನು ಪ್ರಧಾನಿ ಒತ್ತಿ ಹೇಳಿದರು. ಬಯೋಮೆಟ್ರಿಕ್ಸ್ ಇತ್ಯಾದಿಗಳಂತಹ ತಾಂತ್ರಿಕ ಕ್ರಮಗಳನ್ನು ಮತ್ತಷ್ಟು ಬಳಸಿಕೊಳ್ಳಬೇಕು, ಗಸ್ತು ತಿರುಗುವಂತಹ ಸಾಂಪ್ರದಾಯಿಕ ಕಾರ್ಯವಿಧಾನಗಳನ್ನು ಇನ್ನಷ್ಟು ಬಲಪಡಿಸುವ ಅವಶ್ಯಕತೆಯಿದೆ ಎಂದು ಅವರು ಸಲಹೆ ಕೊಟ್ಟರು.

ಇದನ್ನೂ ಓದಿ: ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ತವರಿನಲ್ಲಿ ಪ್ರಧಾನಿ ಮೋದಿ ಹವಾ: ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್​ ಬಂದೋಬಸ್ತ್

ಜೈಲು ನಿರ್ವಹಣೆಯಲ್ಲೂ ಬೇಕಿದೆ ಸುಧಾರಣೆ: ಜೈಲು ಸುಧಾರಣೆ ಬಗ್ಗೆಯೂ ಪ್ರಧಾನಿ ಒಲವು ತೋರಿದರು. ಹೊಸ ಹೊಸ ಸವಾಲುಗಳನ್ನು ಚರ್ಚಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಡಿಜಿಪಿ / ಐಜಿಪಿ ಸಮ್ಮೇಳನಗಳನ್ನು ನಡೆಸುವಂತೆ ತಿಳಿಸಿದರು. ಸಮ್ಮೇಳನದಲ್ಲಿ ಭಯೋತ್ಪಾದನೆ ನಿಗ್ರಹ, ಬಂಡಾಯ ನಿಗ್ರಹ ಮತ್ತು ಸೈಬರ್ ಭದ್ರತೆ ಸೇರಿದಂತೆ ಪೊಲೀಸ್ ಮತ್ತು ರಾಷ್ಟ್ರೀಯ ಭದ್ರತೆಯ ವಿವಿಧ ಅಂಶಗಳ ಕುರಿತು ಸಂವಾದ ನಡೆಯಿತು.

ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಮಾರು 600ಕ್ಕೂ ಅಧಿಕ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಸ್ವತಂತ್ರವಾಗಿ ಕೆಲಸ ಮಾಡಿ, ನಿಮ್ಮೊಂದಿಗೆ ನಾನಿರುವೆ: ಪೊಲೀಸರಿಗೆ ಗೃಹ ಸಚಿವರ ಅಭಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.