ETV Bharat / bharat

26 ದಿನಗಳಿಂದ ದೇಶದಲ್ಲಿ ಬದಲಾಗದ ಪೆಟ್ರೋಲ್​-ಡೀಸೆಲ್​ ಬೆಲೆ: ಮಹಾನಗರಗಳ ಲೀ. ತೈಲ ಬೆಲೆ ಹೀಗಿದೆ..

author img

By

Published : Aug 12, 2021, 9:22 AM IST

Petrol, Diesel Prices
ಪೆಟ್ರೋಲ್​-ಡೀಸೆಲ್​ ಬೆಲೆ

ದೆಹಲಿ, ಬೆಂಗಳೂರು, ಚೆನ್ನೈ, ಮುಂಬೈ ಹಾಗು ಹೈದರಾಬಾದ್ ಮಹಾನಗರಗಳು ಸೇರಿದಂತೆ ಅನೇಕ ಭಾಗಗಳಲ್ಲಿ ಕಳೆದ 26 ದಿನಗಳಿಂದ ತೈಲಬೆಲೆಯಲ್ಲಿ ವ್ಯತ್ಯಯ ಕಂಡುಬಂದಿಲ್ಲ.

ನವದೆಹಲಿ/ಬೆಂಗಳೂರು: ಕಳೆದ 26 ದಿನಗಳಿಂದ ದೇಶದಲ್ಲಿ ತೈಲಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ದೆಹಲಿ, ಬೆಂಗಳೂರು, ಚೆನ್ನೈ, ಮುಂಬೈ, ಹೈದರಾಬಾದ್ ಮಹಾನಗರಗಳು ಸೇರಿದಂತೆ ಅನೇಕ ಭಾಗಗಳಲ್ಲಿ ಬದಲಾವಣೆಯಾಗದೆ ತೈಲಬೆಲೆ ಮುಂದುವರೆದಿದೆ. ಮುಂಬೈ ಮಹಾನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್​ಗೆ 107.83 ರೂಪಾಯಿಗಳಿದ್ದು, ಡೀಸೆಲ್​ ಬೆಲೆ 97.45 ರೂ. ಇದೆ.

Petrol, Diesel Prices
ದೇಶದಲ್ಲಿ ಇಂದಿನ ಪೆಟ್ರೋಲ್​-ಡೀಸೆಲ್​ ಬೆಲೆ

ರಾಜ್ಯ ರಾಜಧಾನಿಯಲ್ಲೂ ಕಳೆದ ದಿನದಂತೆ ಇಂದೂ ಸಹ ಲೀಟರ್​ ಪೆಟ್ರೋಲ್​ ದರ 105.25 ರೂ. ಹಾಗೂ ಲೀಟರ್​ ಡೀಸೆಲ್​ ದರ 95.26 ರೂ ಆಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಲೀಟರ್​ ಪೆಟ್ರೋಲ್ ಬೆಲೆ 101.84 ರೂ ಮತ್ತು ಡೀಸೆಲ್​ ಬೆಲೆ 89.87 ರೂಪಾಯಿಗೆ ಇದೆ.

ಕೋಲ್ಕತ್ತಾದಲ್ಲಿಯೂ ಸಹ ಪೆಟ್ರೋಲ್​ ಬೆಲೆ 102.08 ರೂ.ಗೆ ತಲುಪಿದ್ದು, ಡೀಸೆಲ್​ ಬೆಲೆ 93.02 ಆಗಿದೆ. ಹೈದರಾಬಾದ್​ನಲ್ಲಿ ಲೀಟರ್​ ಪೆಟ್ರೋಲ್ ದರ 105.83 ರೂಪಾಯಿ ಇದ್ದು, ಡೀಸೆಲ್​ ಬೆಲೆ ಲೀ.ಗೆ 97.96 ಕ್ಕೆ ತಲುಪಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.