ETV Bharat / bharat

ಏರಿದ Petrol​-ಸ್ಥಿರತೆ ಕಾಪಾಡಿಕೊಂಡ Diesel: ಬೆಂಗಳೂರಲ್ಲಿ ಇಂಧನ ದರ ಎಷ್ಟು ಗೊತ್ತಾ?

author img

By

Published : Jul 5, 2021, 9:09 AM IST

fuel Price
ತೈಲ ಬೆಲೆ

ಬೆಂಗಳೂರಿನಲ್ಲಿ ಲೀಟರ್​ ಪೆಟ್ರೋಲ್​ ದರ 103 ರೂಪಾಯಿ ಹಾಗೂ ಲೀಟರ್​ ಡೀಸೆಲ್​ ದರ 94.72 ರೂಪಾಯಿ ಆಗಿದೆ. ಪೆಟ್ರೋಲ್​ ಬೆಲೆ ದೇಶದೆಲ್ಲೆಡೆ ಏರಿಕೆಯಾಗಿದ್ದು, ಡೀಸೆಲ್​ ಬೆಲೆ ಕೆಲವೆಡೆ ಸ್ಥಿರತೆ ಕಾಪಾಡಿಕೊಂಡಿದೆ.

ನವದೆಹಲಿ/ಬೆಂಗಳೂರು: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮತ್ತೆ ಪೆಟ್ರೋಲ್ ಏರಿಕೆ ಮಾಡಿದ್ದು, ಕೆಲವೆಡೆ ಡೀಸೆಲ್​ ಬೆಲೆ ಸ್ಥಿರವಾಗಿದೆ. ಮುಂಬೈ ಮಹಾನಗರದಲ್ಲಿ ಪ್ರತಿ ಲೀಟರ್ ಬೆಲೆ 105.92 ರೂಪಾಯಿಗೆ ಬಂದು ನಿಂತಿದೆ. ಡೀಸೆಲ್​ ಬೆಲೆ ಸ್ಥಿರವಾಗಿದ್ದು, 96.91 ರೂ. ಆಗಿದೆ.

ಬೆಂಗಳೂರಿನಲ್ಲಿ ಹೀಗಿದೆ ದರ: ಬೆಂಗಳೂರಿನಲ್ಲಿ ಲೀಟರ್​ ಪೆಟ್ರೋಲ್​ ದರ 103 ರೂಪಾಯಿ ಹಾಗೂ ಲೀಟರ್​ ಡೀಸೆಲ್​ ದರ 94.72 ರೂಪಾಯಿ ಆಗಿದೆ.

ಇಂದು ದೇಶಾದ್ಯಂತ ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಕಂಡಿದ್ದು, ರಾಜಧಾನಿ ದೆಹಲಿಯಲ್ಲಿ ಲೀಟರ್​ ಪೆಟ್ರೋಲ್ ಬೆಲೆ 99.86 ಮತ್ತು ಡೀಸೆಲ್​ ಬೆಲೆ 89.36 ರೂ. ಆಗಿದೆ. ಕೋಲ್ಕತ್ತಾದಲ್ಲಿ ಲೀಟರ್​ ಪೆಟ್ರೋಲ್​ ದರ 99.84 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ ಲೀಟರ್​ ಡೀಸೆಲ್​​ ದರ 92.27 ರೂ.ಇದೆ.

ಚೆನ್ನೈನಲ್ಲಿ ಲೀಟರ್​ ಪೆಟ್ರೋಲ್​ ದರ 100.75 ರೂಪಾಯಿಗೆ ಏರಿಕೆಯಾಗಿದ್ದು, ಡೀಸೆಲ್​ ಬೆಲೆ 93.91 ಆಗಿದೆ. ಹೈದರಾಬಾದ್​ನಲ್ಲಿ ಲೀಟರ್​ ಪೆಟ್ರೋಲ್ ದರ 103.5 ರೂಪಾಯಿಗೆ ಏರಿಕೆಯಾಗಿದ್ದು, ಡೀಸೆಲ್​ ಬೆಲೆ ಲೀ.ಗೆ 97.6 ಕ್ಕೆ ತಲುಪಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.