ETV Bharat / bharat

‘ಮಹಾ’ ಸರ್ಕಾರದ ರಿಮೋಟ್ ಕಂಟ್ರೋಲ್​ ಶರದ್ ಪವಾರ್​ ಎಂದ ಪಟೋಲೆ: ಎಲ್ಲ ರಾಜಕೀಯದಾಟ!

author img

By

Published : Jul 15, 2021, 10:24 AM IST

ಶರದ್ ಪವಾರ್​
ಶರದ್ ಪವಾರ್​

ಮಹಾರಾಷ್ಟ್ರದಲ್ಲಿ ಮೈತ್ರಿ ಪಕ್ಷಗಳಾಗಿದ್ದರೂ ಕೆಲ ದಿನಗಳ ಹಿಂದಷ್ಟೇ ಹಾವು - ಮುಂಗುಸಿಯಂತಿದ್ದ ಕಾಂಗ್ರೆಸ್​-ಎನ್​ಸಿಪಿ ನಾಯಕರು ಇದೀಗ ಪರಸ್ಪರ ಗುಣಗಾನದಲ್ಲಿ ತೊಡಗಿದ್ದಾರೆ. ನಾನಾ ಪಟೋಲೆ, ಶರದ್ ಪವಾರ್​ ಅವರನ್ನು ಮಹಾರಾಷ್ಟ್ರ ಸರ್ಕಾರದ ರಿಮೋಟ್ ಕಂಟ್ರೋಲ್ ಎಂದು ಕರೆದಿದ್ದಾರೆ.

ಮುಂಬೈ (ಮಹಾರಾಷ್ಟ್ರ): ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್​ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ರಿಮೋಟ್ ಕಂಟ್ರೋಲ್ ಎಂದು ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಹೇಳಿದ್ದಾರೆ. ಮಹಾರಾಷ್ಟ್ರ ರಾಜಕೀಯ ಒಕ್ಕೂಟದಲ್ಲಿ ಎರಡನೇ ಅತಿ ದೊಡ್ಡ ಪಕ್ಷ ಎನ್​ಸಿಪಿಯಾಗಿದ್ದು, ಶಿವಸೇನೆ, ಕಾಂಗ್ರೆಸ್​, ಎನ್​ಸಿಪಿ ಮೈತ್ರಿಯನ್ನು ನಿಯಂತ್ರಿಸುತ್ತದೆ.

ಈ ಕುರಿತು ಪ್ರತಿಕ್ರಿಯಿಸಿದ ನಾನಾ ಪಟೋಲೆ, ಪವಾರ್​ ಈ ಎಂವಿಎ ಸರ್ಕಾರದ ರಿಮೋಟ್ ಕಂಟ್ರೋಲ್. ನವೆಂಬರ್​ನಲ್ಲಿ ಅಧಿಕಾರಕ್ಕೆ ಬಂದ ಈ ಸರ್ಕಾರದ ಕರ್ತೃ ಅವರೇ ಎಂದು ಪರಿಗಣಿಸಲಾಗಿದೆ ಎಂದರು.

ಈ ಹಿಂದೆ ಪಟೋಲೆ, ಶರದ್ ಪವಾರ್ ನೇತೃತ್ವದ ಎನ್​ಸಿಪಿಯನ್ನು ದೂಷಿಸಿದ್ದರು. ಅಲ್ಲದೇ ನಾವೀಗಾಗಲೇ ಮೋಸ ಹೋಗಿದ್ದೇವೆ. ಮುಂದಿನ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಇದೀಗ ಶರದ್ ಪವಾರ್ ಅವರನ್ನೇ ಹೊಗಳಿ ಅಚ್ಚರಿಗೆ ಕಾರಣವಾಗಿದ್ದಾರೆ.

ಯಾವುದೇ ಸಾಂವಿಧಾನಿಕ ಹುದ್ದೆ ಹೊಂದಿರುವ ವ್ಯಕ್ತಿಯ ಪ್ರಭಾವವನ್ನು ಒತ್ತಿ ಹೇಳಲು ಈ ರಿಮೋಟ್ ಕಂಟ್ರೋಲ್ ಎಂಬ ಪದ ಬಳಸಲಾಗುತ್ತಿದೆ. 1995-99 ರ ಅವಧಿಯಲ್ಲಿ ಶಿವಸೇನಾ ಸಂಸ್ಥಾಪಕ, ದಿವಂಗತ ಬಾಲ್​ ಠಾಕ್ರೆಗೆ ಮೊದಲ ಬಾರಿಗೆ ಈ ಪದ ಬಳಸಲಾಗಿತ್ತು.

ಇದನ್ನೂ ಓದಿ:ಪಂಜಾಬ್​​​​ ಕಾಂಗ್ರೆಸ್​ ಸಾರಥ್ಯ ವಹಿಸಲಿದ್ದಾರಾ ನವಜೋತ್ ಸಿಂಗ್ ಸಿಧು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.