ETV Bharat / bharat

ಕಡಿಮೆ ಆದಾಯವಿದ್ದವರು ಅನಾರೋಗ್ಯಕರ ಆಹಾರ ಸೇವಿಸುವುದು ಹೆಚ್ಚು: ಅಧ್ಯಯನದಲ್ಲಿ ಬಹಿರಂಗ

author img

By

Published : Aug 27, 2022, 4:18 PM IST

ಕಡಿಮೆ ಆದಾಯವಿದ್ದವರು ಅನಾರೋಗ್ಯಕರ ಆಹಾರ ಸೇವಿಸುವುದು ಹೆಚ್ಚು: ಅಧ್ಯಯನದಲ್ಲಿ ಬಹಿರಂಗ
Parents adopt unhealthy food routines for family wellbeing

ಲಂಡನ್ ಯುನಿವರ್ಸಿಟಿಯ ಸೆಂಟರ್ ಫಾರ್ ಫುಡ್ ಅಟ್ ಸಿಟಿ ಸಂಸ್ಥೆ ನಡೆಸಿದ ಅಧ್ಯಯನವು ಕಡಿಮೆ ಆದಾಯ ಗುಂಪಿನ ಪೋಷಕರು ಆಹಾರ ಕೊಳ್ಳುವ ಅಭ್ಯಾಸಕ್ರಮಗಳ ಬಗ್ಗೆ ಬೆಳಕು ಚೆಲ್ಲಿದೆ. ಈ ಕುಟುಂಬಗಳು ತಮ್ಮ ಸುತ್ತಲಿನ ಆಹಾರ ವಾತಾವರಣದಿಂದ ಹೇಗೆ ಪ್ರಭಾವಿತಗೊಂಡಿದ್ದಾರೆ ಎಂಬುದನ್ನು ಈ ಸಂಶೋಧನೆಯಲ್ಲಿ ಅಧ್ಯಯನ ಮಾಡಲಾಗಿದೆ.

ವಾಶಿಂಗ್ಟನ್: ಕಡಿಮೆ ಆದಾಯದ ಪೋಷಕರು ಸಾಮಾನ್ಯವಾಗಿ ಅನಾರೋಗ್ಯಕರ ಆಹಾರ ಖರೀದಿಸುತ್ತಾರೆ. ಕೇವಲ ಬೆಲೆ ಕಡಿಮೆ ಎಂದು ಮತ್ತು ಸುಲಭವಾಗಿ ಸಿಗುತ್ತದೆ ಎಂಬ ಕಾರಣಗಳ ಹೊರತಾಗಿ ಇನ್ನೂ ಕೆಲ ಅಂಶಗಳಿಂದಾಗಿ ಅವರು ಹೀಗೆ ಮಾಡುತ್ತಾರೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.

ಲಂಡನ್ ಯುನಿವರ್ಸಿಟಿಯ ಸೆಂಟರ್ ಫಾರ್ ಫುಡ್ ಅಟ್ ಸಿಟಿ ಸಂಸ್ಥೆ ನಡೆಸಿದ ಅಧ್ಯಯನವು ಕಡಿಮೆ ಆದಾಯ ಗುಂಪಿನ ಪೋಷಕರು ಆಹಾರ ಕೊಳ್ಳುವ ಅಭ್ಯಾಸಕ್ರಮಗಳ ಬಗ್ಗೆ ಬೆಳಕು ಚೆಲ್ಲಿದೆ. ಈ ಕುಟುಂಬಗಳು ತಮ್ಮ ಸುತ್ತಲಿನ ಆಹಾರ ವಾತಾವರಣದಿಂದ ಹೇಗೆ ಪ್ರಭಾವಿತಗೊಂಡಿದ್ದಾರೆ ಎಂಬುದನ್ನು ಈ ಸಂಶೋಧನೆಯಲ್ಲಿ ಅಧ್ಯಯನ ಮಾಡಲಾಗಿದೆ. ಅಂದರೆ ಮನೆ ಹೊರಗೆ ಎಲ್ಲೆಲ್ಲಿ ಅವರು ಆಹಾರ ಖರೀದಿಸಬಹುದು ಮತ್ತು ಸೇವಿಸಬಹುದು. ಅವರು ನೋಡುವ ಆಹಾರಕ್ಕೆ ಸಂಬಂಧಿಸಿದ ಜಾಹೀರಾತು ಮತ್ತು ಪ್ರಚಾರ ಮತ್ತು ಅವರ ಜೀವನದಲ್ಲಿ ಅವರು ನಿರ್ಧಾರ ತಳೆಯುವ ಅಂಶಗಳ ಮೇಲೆ ಪರಿಣಾಮ ಬೀರುವ ಸಾಮಾಜಿಕ ಆರ್ಥಿಕ ವಿಷಯಗಳ ಬಗ್ಗೆ ಸಂಶೋಧನೆಯಲ್ಲಿ ಅಧ್ಯಯನ ಮಾಡಲಾಗಿದೆ.

ಯಾವ ವಾತಾವರಣದಲ್ಲಿ ಅನಾರೋಗ್ಯಕರ ಆಹಾರಗಳು ಸರ್ವತ್ರವಾಗಿವೆಯೋ, ಕಡಿಮೆ ಬೆಲೆಯಲ್ಲಿ ಸಿಗುತ್ತವೋ ಮತ್ತು ಅವನ್ನು ಜೋರಾಗಿ ಮಾರ್ಕೆಟಿಂಗ್ ಮಾಡಲಾಗುತ್ತದೆಯೋ ಅಂಥ ಆಹಾರಗಳನ್ನು ಕುಟುಂಬಗಳು ತಮ್ಮ ಕುಟುಂಬ ಸದಸ್ಯರಿಗೆ ನೀಡುತ್ತವೆ. ಸಂಶೋಧನೆಗಳಲ್ಲಿ ಇನ್ನಷ್ಟು ವಿಷಯಗಳು ಬೆಳಕಿಗೆ ಬಂದಿದ್ದು, ಯಾವಾಗ ಪೋಷಕರು ತಮ್ಮ ಮಕ್ಕಳೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗಲು ಸಾಧ್ಯವಾಗುವುದಿಲ್ಲವೋ, ಅಂದರೆ ಆಟದ ಕೇಂದ್ರಕ್ಕೆ ಹೋಗಲಾಗುವುದಿದ್ದರೆ ಅಥವಾ ಹತ್ತಿರದಲ್ಲೇ ರಜೆ ಕಳೆಯಲು ಎಲ್ಲೂ ಹೋಗಲು ಆಗದಿದ್ದರೆ, ಆಗ ಅಂಥ ಪೋಷಕರು ತಮ್ಮ ಮಕ್ಕಳಿಗೆ ಹೆಚ್ಚುವರಿಯಾಗಿ ಅನಾರೋಗ್ಯಕರ ಆಹಾರವನ್ನು ಟ್ರೀಟ್ ಆಗಿ ತಿನ್ನಿಸಬಹುದು ಎಂದು ತಿಳಿದು ಬಂದಿದೆ.

ಇಂಥ ಅಭ್ಯಾಸಕ್ರಮಗಳ ಉದಾಹರಣೆಗಳು ಕುಟುಂಬಗಳು ಸ್ಥಳೀಯ ಪಾಸ್ಟ್ ಫುಡ್ ಮಳಿಗೆಗಳಾದ ಚಿಪ್ಪಿ (ಮೀನು ಮತ್ತು ಚಿಪ್ಸ್​ ಅಂಗಡಿ), ಕಬಾಬ್ ಅಂಗಡಿ ಅಥವಾ (ಪ್ರಸಿದ್ಧವಾದ) ಬರ್ಗರ್ ರೆಸ್ಟೋರೆಂಟ್, ಅಥವಾ ಮನೆಯಲ್ಲಿಯೇ ನಡೆಯುವ ಆಹಾರವನ್ನು ಒಳಗೊಂಡ ಚಟುವಟಿಕೆಗಳನ್ನು ಒಳಗೊಂಡಿವೆ.

ಈ ಸಂಶೋಧನೆಯಲ್ಲಿ ಕಡಿಮೆ ಆದಾಯವನ್ನು ಹೊಂದಿರುವ, ಇಂಗ್ಲೆಂಡ್​ನ ಮೂರು ವಲಯಗಳಾದ ಗ್ರೇಟ್ ಯಾರ್ಮೌತ್, ಸ್ಟೋಕ್ ಆನ್ ಟ್ರೆಂಟ್ ಮತ್ತು ಲಂಡನ್ ಬರೋ ಆಫ್ ಲೆವಿಶ್ಯಾಮ್​ ಗಳಲ್ಲಿನ ಸಮಾನ ಸಂಖ್ಯೆಯಲ್ಲಿ 60 ಪೋಷಕರನ್ನು ಒಳಪಡಿಸಲಾಗಿತ್ತು. ಸಂಶೋಧನೆಯಲ್ಲಿ ಪಾಲ್ಗೊಂಡಿದ್ದವರು 18 ವಯಸ್ಸು ಮೇಲ್ಪಟ್ಟವರಾಗಿದ್ದು, ಅವರು ಮಗುವಿನ ತಂದೆಯಾಗಿದ್ದು, ಮನೆಯಲ್ಲಿನ ಅಗತ್ಯ ವಸ್ತುಗಳನ್ನು ಆತನೇ ಖರೀದಿಸುವವರಾಗಿರಬೇಕಿತ್ತು. ಬಹುತೇಕ ಮನೆಗಳಲ್ಲಿ ಮಹಿಳೆಯರೇ ಆಹಾರ ತಯಾರಿಸುವುದರಿಂದ ಸಂಶೋಧನೆಯಲ್ಲಿ 56 ಮಹಿಳೆಯರನ್ನು ತೊಡಗಿಸಿಕೊಳ್ಳಲಾಗಿತ್ತು.

ಸಂಶೋಧನೆಯಲ್ಲಿ ಭಾಗವಹಿಸಿದ್ದ ಎಲ್ಲರೂ ಸೆಮಿ ಸ್ಟ್ರಕ್ಚರ್ಡ್ ಮಾದರಿಯ ಇಂಟರ್​ವ್ಯೂ ಎದುರಿಸಿದರು. ಇಂಟರ್​ವ್ಯೂನಲ್ಲಿ ಖರೀದಿ, ಕುಟುಂಬದಲ್ಲಿ ಆಹಾರ ತಯಾರಿಸುವುದು ಮತ್ತು ಸೇವಿಸುವುದು, ಕುಟುಂಬ ಸದಸ್ಯರ ಭಾಗವಹಿಸುವಿಕೆ ಬಗ್ಗೆ ಕೇಳಲಾಯಿತು. ಇದರಲ್ಲಿ ಮಕ್ಕಳನ್ನು ಸಹ ಪಾಲ್ಗೊಂಡಿದ್ದರು. ಸಂಶೋಧನೆಯ ಫೋಟೋ ಆಧಾರಿತ ಅಭ್ಯಾಸದಲ್ಲಿ ಒಂದು ವಾರದವರೆಗೆ ಭಾಗವಹಿಸಿದ 58 ಜನ, ತಮ್ಮ ಕುಟುಂಬಕ್ಕೆ ಆಹಾರ ಖರೀದಿಸಲು ಸಾಧ್ಯವಾಗದ ಮತ್ತು ಸಾಧ್ಯವಾಗುವ ಮಾಹಿತಿಯ ಫೋಟೋಗಳನ್ನು ಆರಿಸಿಕೊಂಡರು. ಇದರಲ್ಲಿ 22 ಜನ ಶಾಪ್ ಅಲಾಂಗ್ ಎಂಬ ಇಂಟರ್​ವ್ಯೂನಲ್ಲಿ ಸಹ ಭಾಗವಹಿಸಿದರು. ಇದರಲ್ಲಿ ಅವರು ತಮಗಿಷ್ಟವಾದ ಅಂಗಡಿಗಳ ಕಡೆಗೆ ಸಂದರ್ಶನ ಮಾಡುವವರನ್ನು ಕರೆದುಕೊಂಡು ಹೋದರು ಮತ್ತು ಅಲ್ಲಿ ಅವರು ವಸ್ತುಗಳನ್ನು ಖರೀದಿಸಿದರು.

ಮುಂದಿನ ಶಿಫಾರಸುಗಳ ಪ್ರಕಾರ ಸ್ಥಳೀಯ ಪ್ರದೇಶದಲ್ಲಿ ಲಭ್ಯವಿರುವ ಕೈಗೆಟುಕುವ ದರದ ಕುಟುಂಬ ಚಟುವಟಿಕೆಗಳನ್ನು ಸೇರಿಸುವುದಾಗಿತ್ತು. ಈಗಿರುವ ಚಟುವಟಿಕೆಗಳನ್ನು ಇನ್ನಷ್ಟು ಕಡಿಮೆ ಬೆಲೆಯದ್ದನ್ನಾಗಿ ಮಾಡಿ ಅಂದರೆ ಅವು ಡಿಸ್ಕೌಂಟ್ ದರದಲ್ಲಿ ಸಿಗುವಂತೆ ಮಾಡುವುದಾಗಿತ್ತು. ಅಲ್ಲದೆ ಮತ್ತಷ್ಟು ಸೌಲಭ್ಯ ಯೋಜನೆಗಳು, ಬದುಕಿನ ಕೂಲಿ ನೀತಿಗಳು ಮತ್ತು ವಿಶಾಲ ದೃಷ್ಟಿಕೋನದ ಸಾಮಾಜಿಕ ಕ್ರಮಗಳನ್ನು ಕೈಗೊಳ್ಳುವ ಉದ್ದೇಶ ಹೊಂದಲಾಗಿತ್ತು.

ಪ್ರೊಫೆಸರ್ ಕೊರಿನ್ನಾ ಹಾಕ್ಸ್​ ಇವರು ಸಂಶೋಧನಾ ತಂಡದ ಮುಖ್ಯಸ್ಥರಾಗಿದ್ದರು. ಅಲ್ಲದೆ ಇವರು ಸೆಂಟರ್ ಫಾರ್ ಫುಡ್ ಅಟ್ ಸಿಟಿಯಲ್ಲಿ ನಿರ್ದೇಶಕರು ಆಗಿದ್ದಾರೆ. ಅವರು ಹೇಳುವ ಪ್ರಕಾರ- ಈ ದೇಶದಲ್ಲಿ ಸಿಗುವ ಅತ್ಯುತ್ತಮ ಆಹಾರಗಳನ್ನು ನೋಡಿದರೆ, ಅನಾರೋಗ್ಯಕರ ಆಹಾರದ ಸೇವನೆಯಿಂದ ಅದೆಷ್ಟೋ ಜನರ ಆರೋಗ್ಯ ಹಾಳಾಗುತ್ತಿರುವುದು ವಿಷಾದನೀಯ. ಪ್ರತಿದಿನ ವಾಸ್ತವದಲ್ಲಿ ಜನರು ಆಹಾರವನ್ನು ಹೇಗೆ ಅನುಭವಿಸುತ್ತಾರೆ ಎಂಬುದನ್ನು ತಿಳಿಯಲು ಈ ಸಂಶೋಧನೆ ಉಪಯುಕ್ತವಾಗಿದೆ ಎಂದು ಹೇಳಿದರು.

ಅಸಮಾನತೆಗಳನ್ನು ನಿವಾರಿಸುವ ನೀತಿಗಳು ಯಶಸ್ವಿಯಾಗಬೇಕಾದರೆ, ಆಹಾರ ಎಂಬುದು ಕೇವಲ ಪೌಷ್ಟಿಕಾಂಶದ ಮೂಲವಲ್ಲದೆ, ಅದು ಸಾಕಷ್ಟು ವಿಶಾಲ ಸಂಖ್ಯೆಯ ಜನರ ಸಾಮಾಜಿಕ ಮತ್ತು ಆರ್ಥಿಕ ಉನ್ನತಿಯ ಅಗತ್ಯಗಳಲ್ಲೊಂದಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳುತ್ತಾರೆ. ಈ ಸಂಶೋಧನಾ ವರದಿಯು ಹೆಲ್ತ್ ಅಂಡ್ ಪ್ಲೇಸ್ ಆನ್ಲೈನ್ ಜರ್ನಲ್​ನಲ್ಲಿ ಪ್ರಕಟವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.