ETV Bharat / bharat

ಫಿಫಾ ಫೈನಲ್​ನೊಂದಿಗೆ ಎಣ್ಣೆ​ ಕಿಕ್​.. ಒಂದೇ ದಿನ ಮದ್ಯ ಮಾರಾಟದಿಂದ ತುಂಬಿತು ಕೇರಳದ ಖಜಾನೆ

author img

By

Published : Dec 20, 2022, 9:40 PM IST

Updated : Dec 20, 2022, 9:47 PM IST

on-world-cup-final-day-kerala-sells-rs-50-crore-worth-liquor
ಕೇರಳದಲ್ಲಿ ಫಿಫಾ ಫೈನಲ್​ನೊಂದಿಗೆ ಎಣ್ಣೆ​ ಕಿಕ್​: ಒಂದೇ ದಿನ ಮಾರಾಟವಾದ ಮದ್ಯದ ಎಷ್ಟು ಗೊತ್ತಾ?

ಫಿಫಾ ವಿಶ್ವಕಪ್ ಫೈನಲ್​ ಪಂದ್ಯ ದಿನದಂದು ದಾಖಲೆಯ 50 ಕೋಟಿಯ ಮದ್ಯವನ್ನು ಕೇರಳಿಗರು ಖರೀದಿ ಮಾಡಿದ್ದಾರೆ.

ತಿರುವನಂತಪುರಂ (ಕೇರಳ): ಕತಾರ್​ನಲ್ಲಿ ಭಾನುವಾರ ನಡೆದ ಫಿಫಾ ವಿಶ್ವಕಪ್ ಫೈನಲ್​ ಪಂದ್ಯದಲ್ಲಿ ಫ್ರಾನ್ಸ್​ ವಿರುದ್ಧ​ ಅರ್ಜೆಂಟೀನಾ ತಂಡಗಳು ಪ್ರಶಸ್ತಿಗಾಗಿ ಮೈದಾನದಲ್ಲಿ ತೀವ್ರ ಕಾದಾಟ ನಡೆಸುತ್ತಿದ್ದವು. ರೋಚಕ ಹಣಾಹಣಿಯಿಂದ ಕೂಡಿದ್ದ ಪಂದ್ಯವನ್ನು ವೀಕ್ಷಿಸುತ್ತಿದ್ದ ಕೇರಳದ ಅಭಿಮಾನಿಗಳು ಮದ್ಯದ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲೂ ನಿಂತಿದ್ದರು. ಫೈನಲ್​ ಪಂದ್ಯದ ಒಂದೇ ದಿನ ಫುಟ್ಬಾಲ್​ ಪ್ರಿಯರು ಕೇರಳ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಆದಾಯವನ್ನು ತಂದು ಕೊಟ್ಟಿದ್ದಾರೆ.

ಹೌದು, ಕೇರಳದಲ್ಲಿ ಓಣಂ ಮತ್ತು ವಿಷು ಹಬ್ಬದ ಸಂದರ್ಭದಲ್ಲಿ ದಾಖಲೆ ಮಟ್ಟದಲ್ಲಿ ಮದ್ಯ ಮಾರಾಟವಾಗುತ್ತದೆ. ಫಿಫಾ ವಿಶ್ವಕಪ್ ಫೈನಲ್​ ದಿನವೂ ಹಬ್ಬದಂತೆ ದಾಖಲೆಯ ಮದ್ಯ ಮಾರಾಟವಾಗಿದೆ. ಅಂದು ಸಾಮಾನ್ಯ ದಿನಗಳಲ್ಲಿ ಮದ್ಯ ಮಾರಾಟಕ್ಕಿಂತ 17 ಕೋಟಿಯಷ್ಟು ಹೆಚ್ಚಿನ ಮದ್ಯ ಮಾರಾಟವಾಗಿದೆ. ಅಂದೇ ಒಂದೇ ದಿನ ಒಟ್ಟಾರೆ 50 ಕೋಟಿಯ ಮದ್ಯವನ್ನು ಕೇರಳಿಗರು ಖರೀದಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಫೈನಲ್​ ಪಂದ್ಯದೊಂದಿಗೆ ಕೇರಳಿಗರು ಎಣ್ಣೆ ಕಿಕ್​ ಕೂಡ ಏರಿಸಿಕೊಳ್ಳುತ್ತಿದ್ದರು. ಬಹುತೇಕ ಮದ್ಯದ ಅಂಗಡಿಗಳ ಮುಂದೆ ಸಾಲುಗಟ್ಟಿ ಜನರು ಮದ್ಯ ಖರೀದಿಯಲ್ಲಿ ತೊಡಗಿದ್ದು ಕಂಡು ಬರುತ್ತಿತ್ತು. ಚಾಂಪಿಯನ್​ ಅರ್ಜೆಂಟೀನಾ ತಂಡದ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಕಿಕ್​ ಏರಿಸುತ್ತಿದ್ದರು. ಅರ್ಜಿಂಟೀನಾ ಅಭಿಮಾನಿಗಳ ಗೆಲುವಿನ ಖುಷಿಗೆ ಎಣ್ಣೆ ಕಿಕ್​ ಏರಿಸಿಕೊಂಡರೆ, ಫ್ರಾನ್ಸ್ ಮತ್ತು ಬ್ರೆಜಿಲಿಯನ್ ಅಭಿಮಾನಿಗಳು ತಮ್ಮ ದುಃಖವನ್ನು ಅರಗಿಸಿಕೊಳ್ಳಲು ಮದ್ಯದ ಮೊರೆ ಹೋಗಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ: ಅರ್ಜೆಂಟೀನಾಗೆ ವಿಶ್ವಕಪ್: ಕೇರಳದಲ್ಲಿ ಬಿರಿಯಾನಿ, ಹಲ್ವಾ, ಮೀನು ಉಚಿತವಾಗಿ ವಿತರಿಸಿ ಸಂಭ್ರಮಾಚರಣೆ

Last Updated :Dec 20, 2022, 9:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.