ETV Bharat / bharat

ಪ್ರಧಾನಿ ಮೋದಿ ಹುಟ್ಟುಹಬ್ಬ.. ವ್ಯಾಕ್ಸಿನೇಷನ್​ನಲ್ಲಿ ರೆಕಾರ್ಡ್.. ಮಧ್ಯಾಹ್ನದ ವೇಳೆಗೆ ಕೋಟಿ ದಾಟಿದ ಡೋಸ್​..

author img

By

Published : Sep 17, 2021, 3:24 PM IST

Updated : Sep 17, 2021, 3:49 PM IST

ಪ್ರಧಾನಿ ಮೋದಿ ಹುಟ್ಟುಹಬ್ಬ ಹಿನ್ನೆಲೆ ಬಿಜೆಪಿಯಿಂದ ಲಸಿಕಾ ಅಭಿಯಾನ
ಪ್ರಧಾನಿ ಮೋದಿ ಹುಟ್ಟುಹಬ್ಬ ಹಿನ್ನೆಲೆ ಬಿಜೆಪಿಯಿಂದ ಲಸಿಕಾ ಅಭಿಯಾನ

ಈ ವರ್ಷ ಸಾರ್ವಜನಿಕ ಸೇವೆಯಲ್ಲಿ ಮೋದಿ 20 ವರ್ಷಗಳನ್ನು ಪೂರೈಸಿದ ಹಿನ್ನೆಲೆ ಸೇವಾ ದಿವಸ್ ಆಚರಣೆಯನ್ನು 20 ದಿನಗಳವರೆಗೆ ಆಚರಿಸಲಾಗುತ್ತದೆ..

ನವದೆಹಲಿ : ಭಾರತದಲ್ಲಿ ಇಂದು ದಾಖಲೆಯ ಸಂಖ್ಯೆಯಲ್ಲಿ ಕೋವಿಡ್ ಲಸಿಕೆ ನೀಡಲಾಗಿದೆ. ಇಂದು ಮಧ್ಯಾಹ್ನದ ವೇಳೆಗೆ 1.33 ಕೋಟಿಗೂ ಅಧಿಕ ಡೋಸ್​ಗಳನ್ನು ಹಾಕಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಪ್ರಧಾನಿ ನರೇಂದ್ರ ಮೋದಿಯವರ 71ನೇ ಹುಟ್ಟುಹಬ್ಬದ ಹಿನ್ನೆಲೆ ಇಂದು ದಾಖಲೆಯ ಸಂಖ್ಯೆಯಲ್ಲಿ ಲಸಿಕೆ ನೀಡಲು ಬಿಜೆಪಿ ಯೋಜಿಸಿತ್ತು. ಇಂದಿನ ಲಸಿಕಾ ಅಭಿಯಾನವು ‘ಸೇವಾ ದಿವಸ್’ನ ಭಾಗವಾಗಿದೆ. ಮೊದಲ ಅವಧಿಗೆ ಮೋದಿ ಪ್ರಧಾನಿಯಾದ ವರ್ಷ 2014ರಿಂದ ಬಿಜೆಪಿ ‘ಸೇವಾ ದಿವಸ್’ ನಡೆಸಿಕೊಂಡು ಬರುತ್ತಿದೆ.

ಕಳೆದ ಆರು ವರ್ಷಗಳಲ್ಲಿ ಸೇವಾ ದಿವಸ್ ಆಚರಣೆಯನ್ನು ಒಂದು ವಾರದವರೆಗೆ ಆಚರಿಸಲಾಗುತ್ತಿತ್ತು. ಆದರೆ, ಈ ವರ್ಷ ಸಾರ್ವಜನಿಕ ಸೇವೆಯಲ್ಲಿ ಮೋದಿ 20 ವರ್ಷಗಳನ್ನು ಪೂರೈಸಿದ ಹಿನ್ನೆಲೆ ಸೇವಾ ದಿವಸ್ ಆಚರಣೆಯನ್ನು 20 ದಿನಗಳವರೆಗೆ ಆಚರಿಸಲಾಗುತ್ತದೆ ಎಂದು ಬಿಜೆಪಿ ಹೇಳಿದೆ.

ಬಿಜೆಪಿ ಇಂದು 1.5 ಕೋಟಿ ಡೋಸ್ ಕೊರೊನಾ ಲಸಿಕೆ ನೀಡುವ ಗುರಿ ಹೊಂದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಓದಿ: ‘ನಮೋ’ಗೆ 71 ವರ್ಷದ ಜನ್ಮದಿನದ ಸಂಭ್ರಮ.. ಅವರ ಆಡಳಿತದ ಹಾದಿಯತ್ತ ಒಂದು ನೋಟ

Last Updated :Sep 17, 2021, 3:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.