ETV Bharat / bharat

ಗ್ರಾಹಕರಿಗೆ ಗುಡ್​ನ್ಯೂಸ್ ​: ಅಡುಗೆ ಎಣ್ಣೆ ಬೆಲೆಯಲ್ಲಿ ಶೇ.15ರವರೆಗೆ ಇಳಿಕೆ

author img

By

Published : Dec 27, 2021, 7:03 PM IST

oil prices reduced
oil prices reduced

ಕಳೆದ ಕೆಲ ದಿನಗಳ ಹಿಂದೆ ಅಡುಗೆ ಎಣ್ಣೆ ಬೆಲೆ ಇಳಿಕೆ ವಿಚಾರವಾಗಿ ತೈಲ ಉದ್ಯಮದ ಪ್ರಮುಖರೊಂದಿಗೆ ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಸಭೆ ನಡೆಸಿದ್ದರು. ಈ ವೇಳೆ ಬೆಲೆ ಇಳಿಕೆ ಮಾಡುವಂತೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಅಡುಗೆ ಎಣ್ಣೆ ದರದಲ್ಲಿ ಇಳಿಕೆಯಾಗಿದೆ. ಬರುವ ಮಾರ್ಚ್​​ 2022ರವರೆಗೆ ಈ ಬೆಲೆ ಜಾರಿಯಲ್ಲಿರಲಿದೆ..

ಮುಂಬೈ : ಸತತವಾಗಿ ಏರಿಕೆಯತ್ತ ಮುಖಮಾಡಿದ್ದ ಪ್ರಮುಖ ಕಂಪನಿಗಳ ಅಡುಗೆ ಎಣ್ಣೆ ಬೆಲೆಯಲ್ಲಿ ಇದೀಗ ಸ್ವಲ್ಪ ಪ್ರಮಾಣದ ಇಳಿಕೆಯಾಗಿದೆ. ಇದರಿಂದ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.

ಅಡುಗೆ ಎಣ್ಣೆ ಮೇಲಿನ ಗರಿಷ್ಠ ರಿಟೇಲ್​ ದರ(ಎಂಆರ್​ಪಿ) ಶೇ. 10ರಿಂದ 15ರಷ್ಟು ಇಳಿಕೆ ಮಾಡಲಾಗಿದೆ ಎಂದು ಸಾಲ್ವೆಂಟ್​ ಎಕ್ಸ್​ಟ್ರ್ಯಾಕ್ಟರ್ಸ್​​​​ ಅಸೋಸಿಯೇಷನ್​​​ ಆಫ್​ ಇಂಡಿಯಾ(SEA) ಹೇಳಿಕೊಂಡಿದೆ. ಪ್ರಮುಖವಾಗಿ ರುಚಿ ಸೋಯಾ, ಅದಾನಿ ವಿಲ್ಮಾರ್​, ಇಮಾಮಿ, ಜೆಮಿನಿ ಕಂಪನಿಗಳ ತೈಲ ಬೆಲೆಯಲ್ಲಿ ಇಳಿಕೆಯಾಗಿದೆ.

ಹಬ್ಬದ ಸಮಯದಲ್ಲಿ ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಬೆಲೆ ಇಳಿಕೆ ಮಾಡಲಾಗಿದೆ. ಖಾದ್ಯ ತೈಲಗಳ ಮೇಲೆ ಶೇ.10ರಿಂದ 15ರಷ್ಟು ಕಡಿತಗೊಳಿಸಲಾಗಿದೆ ಎಂದು ಎಸ್​ಇಎ ಸದಸ್ಯರು ತಿಳಿಸಿದ್ದಾರೆ.

ಇದನ್ನೂ ಓದಿರಿ: ಸರ್ಕಾರಿ ಬಸ್​ಗೆ ಡಿಕ್ಕಿ ಹೊಡೆದ ಲಾರಿ.. ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ಕಳೆದ ಕೆಲ ದಿನಗಳ ಹಿಂದೆ ಅಡುಗೆ ಎಣ್ಣೆ ಬೆಲೆ ಇಳಿಕೆ ವಿಚಾರವಾಗಿ ತೈಲ ಉದ್ಯಮದ ಪ್ರಮುಖರೊಂದಿಗೆ ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಸಭೆ ನಡೆಸಿದ್ದರು. ಈ ವೇಳೆ ಬೆಲೆ ಇಳಿಕೆ ಮಾಡುವಂತೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಅಡುಗೆ ಎಣ್ಣೆ ದರದಲ್ಲಿ ಇಳಿಕೆಯಾಗಿದೆ. ಬರುವ ಮಾರ್ಚ್​​ 2022ರವರೆಗೆ ಈ ಬೆಲೆ ಜಾರಿಯಲ್ಲಿರಲಿದೆ.

ಅಡುಗೆ ಎಣ್ಣೆ ಬೆಲೆಯಲ್ಲಿ ಇಳಿಕೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಅನೇಕ ರೀತಿಯ ಮಹತ್ವದ ನಿರ್ಧಾರ ಕೈಗೊಂಡಿದ್ದು, ತಾಳೆ ಎಣ್ಣೆ ಬಳಕೆ ಮಾಡಲು ಮನವಿ ಸಹ ಮಾಡಿಕೊಂಡಿದೆ.

ಈಗಾಗಲೇ ಪೆಟ್ರೋಲ್​, ಡೀಸೆಲ್​ ಮೇಲಿನ ಸುಂಕ ಕಡಿತಗೊಳಿಸಿರುವ ಕೇಂದ್ರ ಸರ್ಕಾರ ಕಳೆದ ನವೆಂಬರ್​ ತಿಂಗಳಲ್ಲೇ ಕಚ್ಚಾ ಪಾಮ್ ಆಯಿಲ್‌ ಮೇಲೆ ಶೇ.7.5ರಷ್ಟು, ಕಚ್ಚಾ ಸೋಯಾಬೀನ್ ಎಣ್ಣೆ ಹಾಗೂ ಕಚ್ಚಾ ಸೂರ್ಯಕಾಂತಿ ಎಣ್ಣೆ ಮೇಲೆ ಶೇ.5ರಷ್ಟು ಸುಂಕ ಕಡಿತ ಮಾಡಿದೆ.

ಆರ್‌ಬಿಡಿ ಪಾಮೊಲಿನ್ ತೈಲ, ಸಂಸ್ಕರಿಸಿದ ಸೋಯಾಬೀನ್ ಹಾಗೂ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ ಮೇಲಿನ ಮೂಲ ಸುಂಕವನ್ನು ಪ್ರಸ್ತುತ ಶೇ.32.5 ರಿಂದ 17.5ಕ್ಕೆ ಇಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.