ETV Bharat / bharat

ಸೋಂಕಿತರನ್ನು ಮಕ್ಕಳಂತೆ ಪೋಷಿಸುವ ಆರೋಗ್ಯ ಸಿಬ್ಬಂದಿ: ನೆಟ್ಟಿಗರ ಮನಗೆದ್ದ ವಿಡಿಯೋ

author img

By

Published : Jun 6, 2021, 2:26 PM IST

ಕೊರೊನಾ ಸೋಂಕಿತರನ್ನು ಮಕ್ಕಳಂತೆ ಪೋಷಿಸುವ ಆರೋಗ್ಯ ಸಿಬ್ಬಂದಿ
ಕೊರೊನಾ ಸೋಂಕಿತರನ್ನು ಮಕ್ಕಳಂತೆ ಪೋಷಿಸುವ ಆರೋಗ್ಯ ಸಿಬ್ಬಂದಿ

ಕೊರೊನಾ ರೋಗಿಗಳು ಆಸ್ಪತ್ರೆಯಲ್ಲಿ ನರಕಯಾತನೆ ಅನುಭವಿಸುವ ದೃಶ್ಯಗಳ ನಡುವೆ ಇಲ್ಲೊಂದು ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರನ್ನು ಮಕ್ಕಳಂತೆ ಪೋಷಿಸುವ ಆರೋಗ್ಯ ಸಿಬ್ಬಂದಿಯ ವಿಡಿಯೋ ವೈರಲ್​ ಆಗಿದೆ.

ಭುವನೇಶ್ವರ: ಜನ್ಮದಿನ ಆಚರಿಸುವುದರಿಂದ ಹಿಡಿದು ರೋಗಿಗಳ ತಲೆಬಾಚುವವರೆಗೆ, ಒಡಿಶಾದ ಆರೋಗ್ಯ ಕಾರ್ಯಕರ್ತರು ಕೊರೊನಾ ಸೋಂಕಿತರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ.

ಒಡಿಶಾದ ಗಂಜಾಂ ಜಿಲ್ಲೆಯ ಬೆರ್ಹಾಂಪುರದ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಆರೋಗ್ಯ ಕಾರ್ಯಕರ್ತರು ಮಾಡುವ ಆರೈಕೆಯ ವಿಡಿಯೋ ನೆಟ್ಟಿಗರ ಮನಗೆದ್ದಿದೆ.

37 ಸೆಕೆಂಡುಗಳ ವೀಡಿಯೊ ಕ್ಲಿಪ್, ನಿಜವಾದ ಆರೈಕೆಯ ರೀತಿಯನ್ನು ಪ್ರತಿಬಿಂಬಿಸುತ್ತದೆ. ಕೊರೊನಾ ಕಾಲದಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ಇಂತಹ ಕಾರ್ಯಗಳು ಸಹಕಾರಿಯಾಗುತ್ತವೆ. ರೋಗಿಗಳು ಸಹ ದಾದಿಯರನ್ನು ತಮ್ಮ ಮನೆಯವರಂತೆಯೇ ಭಾವಿಸುವುದು ಈ ವಿಡಿಯೋದ ಮತ್ತೊಂದು ವಿಶೇಷ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಸುರೇಶ್ ಮೊಹಾಪಾತ್ರಾ ಅವರು ಈ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಯಕರ್ತರನ್ನು ಅಭಿನಂದಿಸಿದ್ದಾರೆ. "ಮಾನವತಾವಾದ ಮತ್ತು ಪ್ರೀತಿಯ ಸ್ಪರ್ಶದಿಂದ ಸಲ್ಲಿಸಿದ ಪ್ರಾಮಾಣಿಕ ಸೇವೆಗಳು ಜನರ ಹೃದಯ ಗೆಲ್ಲುತ್ತವೆ ಮತ್ತು ಇತರರಿಗೆ ಸ್ಪೂರ್ತಿದಾಯಕ ಉದಾಹರಣೆಗಳನ್ನು ನೀಡುತ್ತವೆ" ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.