ETV Bharat / bharat

ದೇಶದಲ್ಲಿ ನಿಲ್ಲದ ಕೋವಿಡ್ ತಲ್ಲಣ: ಹೊಸದಾಗಿ 40,134 ಕೋವಿಡ್ ಕೇಸ್​ಗಳು ಪತ್ತೆ

author img

By

Published : Aug 2, 2021, 10:04 AM IST

ಕೋವಿಡ್
covid

ದೇಶದಲ್ಲಿ ಕೋವಿಡ್​ ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ದಿನೇದಿನೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಹೊಸದಾಗಿ 40,134 ಜನರಿಗೆ ಕೊರೊನಾ ದೃಢಪಟ್ಟಿದೆ.

ನವದೆಹಲಿ: ಭಾರತದಲ್ಲಿ ಹೊಸದಾಗಿ 40,134 ಜನರಿಗೆ ಕೋವಿಡ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 3,16,95,958 ಕ್ಕೆ ಏರಿದೆ. 36,946 ಮಂದಿ ಸೋಂಕಿತನಿಂದ ಚೇತರಿಸಿಕೊಂಡಿದ್ದು, ಆ ಮೂಲಕ ನಿನ್ನೆವರೆಗೆ 3,08,57,467 ಮಂದಿ ಗುಣಮುಖರಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ವೈರಸ್​ಗೆ 422 ಸೋಂಕಿತರು ಬಲಿಯಾಗಿದ್ದು, ಈವರೆಗೆ 4,24,773 ಮಂದಿ ಮೃತಪಟ್ಟಿದ್ದಾರೆ. ಸದ್ಯ ದೇಶದಲ್ಲಿ 4,13,718 ಕೊರೊನಾ ಪ್ರಕರಣಗಳು ಸಕ್ರಿಯವಾಗಿವೆ.

ಐಸಿಎಂಆರ್​ ಟೆಸ್ಟ್

ದೇಶದಲ್ಲಿ ನಿನ್ನೆ ಒಂದೇ ದಿನ 14,28,984 ಸ್ಯಾಂಪಲ್​ಗಳನ್ನು ತಪಾಸಣೆ ಮಾಡಲಾಗಿದ್ದು, ಆಗಸ್ಟ್ 1 ರವರೆಗೆ 46,96,45,494 ಸ್ಯಾಂಪಲ್​ಗಳನ್ನು ಟೆಸ್ಟ್ ಮಾಡಲಾಗಿದೆ.

ಬಿರುಸಿನ ವ್ಯಾಕ್ಸಿನೇಷನ್

ಭಾರತದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಬಿರುಸಿನಿಂದ ಸಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 17,06,598 ಲಸಿಕೆ ಡೋಸ್​ಗಳನ್ನು ನೀಡಲಾಗಿದೆ. ಒಟ್ಟಾರೆ, 47,22,23,639 ವ್ಯಾಕ್ಸಿನ್​ ಡೋಸ್​ಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇದನ್ನೂ ಓದಿ: ಚೀನಾದಲ್ಲೂ ಹರಡುತ್ತಿದೆ ಕೋವಿಡ್ ಡೆಲ್ಟಾ ರೂಪಾಂತರ.. 18 ಪ್ರದೇಶಗಳು ಹಾಟ್​ಸ್ಪಾಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.