ETV Bharat / bharat

ರೈಲು ಹಳಿ ಸ್ಫೋಟಿಸಿ ವಿಧ್ವಂಸಕ ಕೃತ್ಯ ಎಸಗಿದ ನಕ್ಸಲರು: ಹೌರಾ - ನವದೆಹಲಿ ಸಂಚಾರ ಸ್ಥಗಿತ

author img

By

Published : Jan 27, 2022, 10:36 AM IST

ರೈಲು ಹಳಿ ಸ್ಫೋಟ
ರೈಲು ಹಳಿ ಸ್ಫೋಟ

ಹೌರಾ - ಗಯಾ-ದೆಹಲಿ ರೈಲ್ವೆ ಮಾರ್ಗವನ್ನು ಗುರಿಯಾಗಿಸಿಕೊಂಡು ಜಾರ್ಖಂಡ್‌ನ ಗಿರಿದಿಹ್ ಬಳಿಯ ರೈಲು ಹಳಿಯನ್ನು ಉಗ್ರರು ಸ್ಫೋಟಿಸಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

ಗಿರಿದಿಹ್ (ಜಾರ್ಖಂಡ್): ಜಾರ್ಖಂಡ್‌ನ ಗಿರಿದಿಹ್ ಬಳಿಯ ರೈಲು ಹಳಿಯನ್ನು ಸ್ಫೋಟಿಸಿ ವಿಧ್ವಂಸಕ ಕೃತ್ಯ ಎಸಗಿದ್ದ ನಕ್ಸಲರು ಅಪಾರ ಮಂದಿಯ ಸಾವು - ನೋವಿಗೆ ಸನ್ನರಾಗಿದ್ಧ ಆಘಾತಕಾರಿ ಘಟನೆ ನಡೆದಿದೆ.

ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಮೂಲಗಳ ಪ್ರಕಾರ, ಉಗ್ರರು ಹೌರಾ - ಗಯಾ - ದೆಹಲಿ ರೈಲ್ವೆ ಮಾರ್ಗವನ್ನು ಗುರಿಯಾಗಿಸಿಕೊಂಡು ಕೃತ್ಯ ಎಸಗಿದ್ದಾರೆ. ಘಟನೆ ನಂತರ ಈ ಮಾರ್ಗದ ಎಲ್ಲ ರೈಲುಗಳ ಸಂಚಾರವನ್ನ ಸ್ಥಗಿತಗೊಳಿಸಲಾಗಿದೆ. ಕೆಲ ರೈಲುಗಳ ಮಾರ್ಗ ಬದಲಾವಣೆ ಮಾಡಿ ಬಿಡಲಾಯಿತು. ಇದರಿಂದಾಗಿ ಗಂಗಾ ದಾಮೋದರ್, ಲೋಕಮಾನ್ಯ ತಿಲಕ್ ಎಕ್ಸ್​ಪ್ರೆಸ್ ಸೇರಿದಂತೆ ಹಲವಾರು ರೈಲುಗಳು ನಿಲ್ದಾಣಗಳಲ್ಲೇ ನಿಂತಿವೆ.

ವರದಿಗಳ ಪ್ರಕಾರ, ಸುಮಾರು 12:15 ಕ್ಕೆ ಸ್ಥಳಕ್ಕೆ ಬಂದ ನಕ್ಸಲರ ಗುಂಪೊಂದು ಚಿಚಕಿ ಮತ್ತು ಚೌಧರಿಬಂದ್ ನಿಲ್ದಾಣಗಳ ನಡುವಿನ ಹೌರಾ - ನವದೆಹಲಿ ಮಾರ್ಗದ ರೈಲ್ವೆ ಟ್ರ್ಯಾಕ್​ ಅನ್ನು ಸ್ಫೋಟಿಸಿದೆ. ಇದು ಮುಂಚೆಯೇ ತಿಳಿದು ಬಂದ ಹಿನ್ನೆಲೆಯಲ್ಲಿ ಮಾರ್ಗದ ಎಲ್ಲಾ ರೈಲುಗಳನ್ನು ಸ್ಥಗಿತಗೊಳಿಸಲಾಯಿತು. ಇದರಿಂದ ಭಾರಿ ಅನಾಹುತ ತಪ್ಪಿಸಲಾಗಿದೆ.

ಹಳಿಯ ಜೋಡಣೆ ಕಾರ್ಯವನ್ನ ಸಿಬ್ಬಂದಿ ಆರಂಭಿಸಿದ್ದು, ಈ ಕುರಿತು ಗಿರಿದಿಹ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸ್ ಮತ್ತು ಸಿಆರ್​ಪಿಎಫ್​​ ಕಾರ್ಯಾಚರಣೆ ಮುಂದುವರೆದಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.