ETV Bharat / bharat

ನಾಗ್ಪುರದಲ್ಲಿ ಇಂಡಿಗೋ ವಿಮಾನ ತುರ್ತು ಲ್ಯಾಂಡಿಂಗ್: ಅನಾರೋಗ್ಯಕ್ಕೆ ಒಳಗಾದ ಪ್ರಯಾಣಿಕ, ಆಸ್ಪತ್ರೆಯಲ್ಲಿ ನಿಧನ

author img

By ETV Bharat Karnataka Team

Published : Aug 22, 2023, 10:20 AM IST

Mumbai-Ranchi flight
ನಾಗ್ಪುರದಲ್ಲಿ ಇಂಡಿಗೋ ವಿಮಾನ ತುರ್ತು ಲ್ಯಾಂಡಿಂಗ್; ಪ್ರಯಾಣಿಕರು ಅನಾರೋಗ್ಯಕ್ಕೆ ಒಳಗಾಗುತ್ತಾರೆ, ಆಸ್ಪತ್ರೆಯಲ್ಲಿ ನಿಧನರಾದರು

Indigo flight makes emergency landing: ಮುಂಬೈ - ರಾಂಚಿ ಇಂಡಿಗೋ ವಿಮಾನವನ್ನು ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಪ್ರಯಾಣಿಕರೊಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದರಿಂದ ಅವರು ಮೃತಪಟ್ಟಿದ್ದಾರೆ.

ನಾಗ್ಪುರ (ಮಹಾರಾಷ್ಟ್ರ): ಇಂಡಿಗೋ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರ ಆರೋಗ್ಯ ಹಠಾತ್ ಹದಗೆಟ್ಟು ತೀವ್ರ ತೊಂದರೆ ಎದುರಾದ ಹಿನ್ನೆಲೆಯಲ್ಲಿ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಮುಂಬೈನಿಂದ ರಾಂಚಿಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರು ರಕ್ತ ವಾಂತಿ ಮಾಡಲು ಪ್ರಾರಂಭಿಸಿದ್ದರಿಂದ ತುರ್ತು ಲ್ಯಾಂಡಿಂಗ್ ಅನಿವಾರ್ಯವಾಯಿತು. ಪ್ರಯಾಣಿಕನನ್ನು ದೇವಾನಂದ್ ತಿವಾರಿ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ನಿನ್ನೆ (ಸೋಮವಾರ) ರಾತ್ರಿ ಈ ಘಟನೆ ನಡೆದಿದೆ.

ಘಟನೆಯ ನಂತರ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. 6E 5093 ಸಂಖ್ಯೆ ವಿಮಾನವು ಮುಂಬೈನಿಂದ ರಾಂಚಿಗೆ ಪ್ರಯಾಣಿಸುತ್ತಿತ್ತು ಮತ್ತು 62 ವರ್ಷದ ಪ್ರಯಾಣಿಕ ದೇವಾನಂದ್ ತಿವಾರಿ ಅವರು ವಾಯುಯಾನದ ಸಮಯದಲ್ಲಿ ಅನಾರೋಗ್ಯ ಹಿನ್ನೆಲೆ ರಕ್ತ ವಾಂತಿ ಮಾಡಿದ್ದರಿಂದ, ವಿಮಾನವನ್ನು ನಾಗ್ಪುರ ವಿಮಾನ ನಿಲ್ದಾಣದತ್ತ ಸಾಗಿತು. ರಾತ್ರಿ 8 ಗಂಟೆ ಸುಮಾರಿಗೆ ಪ್ರಯಾಣಿಕ ತನ್ನ ಆರೋಗ್ಯದ ತೊಂದರೆಗಳ ಕುರಿತು ದೂರು ನೀಡಿದ್ದಾನೆ. ಇದರಿಂದ ವಿಮಾನವು ನಾಗ್ಪುರ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಪ್ರಯಾಣಿಕರನ್ನು ತಕ್ಷಣದ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ದೇವಾನಂದ್ ತಿವಾರಿ ಅವರ ಮೃತದೇಹವನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ.

ಇತ್ತೀಚಿನ ಘಟನೆ, ಜೈಪುರ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್: ಲಖನೌದಿಂದ ಶಾರ್ಜಾಕ್ಕೆ ಇಂಡಿಗೋ ವಿಮಾನವು ಭಾನುವಾರ ಜೈಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಇಂಡಿಗೋ ವಿಮಾನವೊಂದು ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಲು ಮುಂದಾದಾಗ ಪ್ರಯಾಣಿಕರೊಬ್ಬರು ಎದೆನೋವು ಎಂದು ದೂರು ನೀಡಿದರು. ಬಳಿಕ ಪ್ರಯಾಣಿಕರಲ್ಲಿ ಗೊಂದಲ ಉಂಟಾಯಿತು. ಪರಿಸ್ಥಿತಿಯನ್ನು ನೋಡಿದ ಪೈಲಟ್ ಯು-ಟರ್ನ್ ತೆಗೆದುಕೊಂಡು ತುರ್ತು ಲ್ಯಾಂಡಿಂಗ್‌ಗೆ ಜೈಪುರ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಯಿಂದ ಅನುಮತಿ ಪಡೆದರು. ಎಟಿಸಿಯಿಂದ ಅನುಮತಿ ಪಡೆದ ನಂತರ ವಿಮಾನವನ್ನು ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ಹೃದಯಾಘಾತದಿಂದ ಬಳಲುತ್ತಿದ್ದ ರೋಗಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ, ವಿಮಾನವು ಉಳಿದ ಪ್ರಯಾಣಿಕರನ್ನು ತೆಗೆದುಕೊಂಡು ಶಾರ್ಜಾ ಕಡೆಗೆ ಹಾರಿತು.

ಈ ವರ್ಷದ ಜೂನ್‌ನಲ್ಲಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿದ್ದ ಹೆಲಿಕಾಪ್ಟರ್ ಕಳಪೆ ಗೋಚರತೆಯ ಹಿನ್ನೆಲೆಯಲ್ಲಿ ಸೆವೋಕ್ ವಾಯುನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಹವಾಮಾನ ಇಲಾಖೆಯು ಭಾರೀ ಮಳೆ ಮತ್ತು ಬಿರುಗಾಳಿಗಳನ್ನು ಮುನ್ಸೂಚನೆ ನೀಡಿದ್ದರಿಂದ ಲ್ಯಾಂಡಿಂಗ್ ಮಾಡಲಾಗಿದೆ. ಉತ್ತರ ಬಂಗಾಳದಲ್ಲಿ ಪಂಚಾಯತ್ ಪ್ರಚಾರದಲ್ಲಿದ್ದ ಮುಖ್ಯಮಂತ್ರಿ, ಪೈಲಟ್ ಅವರ ನಿರ್ಧಾರಕ್ಕೆ ಧನ್ಯವಾದ ಅರ್ಪಿಸಿದ್ದರು.

ಇದನ್ನೂ ಓದಿ: ಬಾಲಾಕೋಟ್​ನಲ್ಲಿ ಇಬ್ಬರು ಉಗ್ರರನ್ನು ಗುಂಡಿಕ್ಕಿ ಕೊಂದ ಭಾರತೀಯ ಸೇನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.