ETV Bharat / bharat

ಜಮ್ಮು ಕಾಶ್ಮೀರದಲ್ಲಿ ಜಮಾತ್-ಇ-ಇಸ್ಲಾಮಿ ಸದಸ್ಯರ ಮನೆಗಳ ಮೇಲೆ NIA ದಾಳಿ

author img

By

Published : Aug 8, 2021, 9:35 AM IST

ಜಮ್ಮು ಮತ್ತು ಕಾಶ್ಮೀರದ ಜಮಾತ್-ಇ-ಇಸ್ಲಾಮಿ ಸಂಘಟನೆಯ ಸದಸ್ಯರ ನಿವಾಸಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ದಾಳಿ ನಡೆಸಿದೆ.

Multiple raids carries out by NIA at many places in J&K
ಜಮ್ಮು ಕಾಶ್ಮೀರದಲ್ಲಿ ಎನ್​ಐಎ: ಜಮಾತ್-ಇ-ಇಸ್ಲಾಮಿ ಸದಸ್ಯರ ಮನೆಗಳ ಮೇಲೆ ದಾಳಿ

ಶ್ರೀನಗರ (ಜಮ್ಮು ಕಾಶ್ಮೀರ): ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದ ಹಲವೆಡೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ದಾಳಿ ನಡೆಸಿದ್ದು, ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ಶೋಪಿಯಾನ್, ಅನಂತನಾಗ್ ಮತ್ತು ಬಂಡಿಪೋರಾ ಸೇರಿದಂತೆ ಕಾಶ್ಮೀರ ಕಣಿವೆಯ ವಿವಿಧ ಜಿಲ್ಲೆಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ದಾಳಿಯನ್ನು ನಡೆಸಿದೆ. ಶೋಪಿಯಾನ್ ಜಿಲ್ಲೆಯ ಮಾಲ್ದೇರಾ ಮತ್ತು ನಾಡಿ ಗಾಮ್ ಪ್ರದೇಶದಲ್ಲಿ ದಾಳಿ ನಡೆಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಜಮಾತ್-ಇ-ಇಸ್ಲಾಮಿ ಸಂಘಟನೆಯನ್ನು ನಿಷೇಧಿಸಲಾಗಿದ್ದು, ಈ ಸಂಘಟನೆಯ ಸದಸ್ಯರ ನಿವಾಸಗಳ ಮೇಲೆ ದಾಳಿಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಶೋಧ ಕಾರ್ಯ ಮುಂದುವರೆಯುತ್ತಿದೆ.

ಇದನ್ನೂ ಓದಿ: 'ಬೆಳ್ಳಿ ಹುಡುಗಿ' ಬರ್ತ್​ಡೇ.. ಮೀರಾಬಾಯಿ ಚಾನುಗೆ ಹುಟ್ಟುಹಬ್ಬದ ಸಂಭ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.