ETV Bharat / bharat

ಏಕಕಾಲಕ್ಕೆ 5 ಮರಿಗೆ ಜನ್ಮ ನೀಡಿದ ಹುಲಿ : ದಾಖಲೆ ಬರೆದ 'ಟಿ 4'

author img

By

Published : May 30, 2021, 6:05 PM IST

ಮಧ್ಯಪ್ರದೇಶ
ಮಧ್ಯಪ್ರದೇಶ

ವಯಸ್ಕ ಹುಲಿಗಳು ಪ್ರಸ್ತುತ ಕುನ್‌ಬಾಪೆಂಚ್ ಉದ್ಯಾನದಲ್ಲಿ 64 ರಷ್ಟಿದ್ದರೆ, ಈ ಪೈಕಿ ಸುಮಾರು 30 ಮರಿಗಳಿವೆ. ಮತ್ತೊಂದೆಡೆ, ಲಂಗಿ ಎಂಬ ಹುಲಿ ಒಂದು ಮರಿಗೆ ಜನ್ಮ ನೀಡಿದ್ದು, ಅದಕ್ಕೆ ಪ್ರಸ್ತುತ ಮೂರು ತಿಂಗಳಾಗಿದೆ..

ಮಧ್ಯಪ್ರದೇಶ : ಪೆಂಚ್ ಟೈಗರ್ ರಿಸರ್ವ್‌ನಲ್ಲಿರುವ ಟಿ 4 ಹೆಸರಿನ ಹುಲಿಯೊಂದು 5 ಮರಿಗಳಿಗೆ ಜನ್ಮ ನೀಡಿದೆ. ಇದೀಗ ಹುಲಿಗಳ ಸಂಖ್ಯೆ ಹೆಚ್ಚಳವಾಗಿದ್ದು, ತಾಯಿ ಹುಲಿಯನ್ನು ನಿಗಾದಲ್ಲಿ ಇಡಲಾಗಿದೆ.

ಏಕಕಾಲದಲ್ಲಿ ಐದು ಮರಿಗಳಿಗೆ ಜನ್ಮ ನೀಡಿದ ಈ ಹುಲಿಯು ದಾಖಲೆ ಬರೆದಿದೆ. ಇನ್ನು, ಪೆಂಚ್ ಪಾರ್ಕ್​ನಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾಗಿದ್ದು, ಸಿಬ್ಬಂದಿ ಮರಿಗಳನ್ನು ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.

ವಯಸ್ಕ ಹುಲಿಗಳು ಪ್ರಸ್ತುತ ಕುನ್‌ಬಾಪೆಂಚ್ ಉದ್ಯಾನದಲ್ಲಿ 64 ರಷ್ಟಿದ್ದರೆ, ಈ ಪೈಕಿ ಸುಮಾರು 30 ಮರಿಗಳಿವೆ. ಮತ್ತೊಂದೆಡೆ, ಲಂಗಿ ಎಂಬ ಹುಲಿ ಒಂದು ಮರಿಗೆ ಜನ್ಮ ನೀಡಿದ್ದು, ಅದಕ್ಕೆ ಪ್ರಸ್ತುತ ಮೂರು ತಿಂಗಳಾಗಿದೆ.

ಟಿ 4 ಟೈಗರ್​ ಈಗಾಗಲೇ 15 ಮರಿಗಳಿಗೆ ಜನ್ಮ ನೀಡಿದೆ. 10 ವರ್ಷದ ಹುಲಿ ಮೊದಲ ಮತ್ತು ಎರಡನೇ ಬಾರಿಗೆ ತಲಾ 3 ಮರಿಗಳು. ಮೂರನೇ ಮತ್ತು ನಾಲ್ಕನೇ ಬಾರಿಗೆ ತಲಾ 2 ಮರಿಗಳು ಮತ್ತು ಐದನೇ ಬಾರಿಗೆ 5 ಮರಿಗಳಿಗೆ ಜನ್ಮ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.