ETV Bharat / bharat

ಆಗ್ರಾದಲ್ಲಿ 'ಮಾಡರ್ನ್'​ ಅತ್ತೆ, 'ಸಂಪ್ರದಾಯಸ್ಥ' ಸೊಸೆಯ ಜಗಳ: ಈ ಸುದ್ದಿ ಓದಿದ್ರೆ ಅಚ್ಚರಿಯಾಗೋದು ಪಕ್ಕಾ!

author img

By ETV Bharat Karnataka Team

Published : Nov 20, 2023, 4:24 PM IST

ಆಗ್ರಾದ ಅತ್ತೆ ಸೊಸೆ
ಆಗ್ರಾದ ಅತ್ತೆ ಸೊಸೆ

ಯಾವ್ಯಾವ ಕಾರಣಕ್ಕೋ ಅತ್ತೆ- ಸೊಸೆ ಜಗಳವಾಡುತ್ತಾರೆ. ಆಗ್ರಾದ ಈ ಅತ್ತೆ ಸೊಸೆಯ ಕಿತ್ತಾಟ ಮಾತ್ರ ವಿಚಿತ್ರವಾಗಿದೆ. ಕುಟುಂಬ ಸಲಹಾ ಕೇಂದ್ರಕ್ಕೆ ಬಂದಿರುವ ಈ ಕೇಸ್​ ಅಧಿಕಾರಿಗಳಿಗೇ ಅಚ್ಚರಿ ತಂದಿದೆ.

ಆಗ್ರಾ (ಉತ್ತರಪ್ರದೇಶ) : ಅತ್ತೆ ಮತ್ತು ಸೊಸೆ ಜಗಳ ಯಾರ ಮನೆಯಲ್ಲಿ ಇಲ್ಲ ಹೇಳಿ. ದೊಡ್ಡದರಿಂದ ಹಿಡಿದು ಅತಿ ಚಿಕ್ಕ ವಿಚಾರಕ್ಕೂ ಕಿತ್ತಾಡುತ್ತಾರೆ. ಅದರಲ್ಲೂ ಸೊಸೆ, ಅತ್ತೆಗಿಂತಲೂ ಸ್ಪೀಡ್​ ಇದ್ದರೆ ಆ ಮನೆಯಲ್ಲಿ ಸಂತೋಷವೇ ಮಾಯವಾಗಿರುತ್ತೆ. ಆದರೆ, ಆಗ್ರಾದ ಈ ಕತೆ ಮಾತ್ರ ಫುಲ್​ ಉಲ್ಟಾ. ಸೊಸೆ ಮಾಡರ್ನ್​ ಆಗಿಲ್ಲ ಅಂತ ಅತ್ತೆ ವರಾತ ತೆಗೆದಿದ್ದಾಳೆ. ಕಡೆಗೆ ಈ ಕೇಸ್​ ಕುಟುಂಬ ಸಲಹಾ ಕೇಂದ್ರಕ್ಕೆ ತಲುಪಿದೆ.

ಭಾರತೀಯ ಸಂಸ್ಕೃತಿಯ ಬಗ್ಗೆ ಹೇಳಿಕೊಡಬೇಕಿದ್ದ ಅತ್ತೆಯೇ ಜೀನ್ಸ್​ ಮತ್ತು ಟಾಪ್​ ಹಾಕುತ್ತಿಲ್ಲ ಎಂದು ಸೊಸೆಯೊಂದಿಗೆ ಕಿತ್ತಾಡುತ್ತಿದ್ದಾರೆ. ಇದಕ್ಕೆ ಪತಿಯ ಸಹಕಾರವೂ ಇದೆ. ಆದರೆ, ತಾನು ಗ್ರಾಮೀಣ ಭಾಗದಿಂದ ಬಂದಾಕೆ, ಈ ಮಾಡರ್ನ್​ ಜಗತ್ತಿನ ಜೀನ್ಸ್​, ಟಾಪ್​ ಧರಿಸಲ್ಲ ಅನ್ನೋದು ದೂರುದಾರ ಮಹಿಳೆಯ ಹೇಳಿಕೆ.

ಏನಿದು ಅತ್ತೆ ಸೊಸೆ ಜಗಳದ ಕಹಾನಿ?: ಉತ್ತರ ಪ್ರದೇಶದ ಆಗ್ರಾದ ಅತ್ತೆ- ಸೊಸೆಯ ಜಗಳ ಚರ್ಚೆಗೆ ಗ್ರಾಸವಾಗಿದೆ. ಜೀನ್ಸ್ ಮತ್ತು ಟಾಪ್ ಧರಿಸುವ ಅತ್ತೆ ತನ್ನಂತೆ ಸೊಸೆಯೂ ಧರಿಸಬೇಕು ಎಂದು ಒತ್ತಾಯಿಸಿದ್ದಾಳೆ. ಆದರೆ, ಸೊಸೆಗೆ ದುಪ್ಪಟ್ಟ, ಚೂಡಿದಾರ ಸೀರೆ ಅಂದ್ರೆ ಇಷ್ಟ. ಇದು ಇಬ್ಬರ ನಡುವಿನ ಕಿತ್ತಾಟಕ್ಕೆ ಕಾರಣವಾಗಿದೆ. ತಾನು ಮಾಡರ್ನ್​ ಆಗಿಲ್ಲವೆಂದು ಅತ್ತೆ ತನ್ನ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಸೊಸೆ ಆರೋಪಿಸಿದ್ದಾರೆ.

ಈ ವಿಷಯ ಕುಟುಂಬ ಸಲಹಾ ಕೇಂದ್ರದ ಮೆಟ್ಟಿಲೇರಿದೆ. ಮಹಿಳೆಗೆ ಮೂರು ತಿಂಗಳ ಹಿಂದಷ್ಟೇ ವಿವಾಹವಾಗಿದೆ. ಪತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನವೆಂಬರ್​ 19 ರಂದು ಪತಿ, ಪತ್ನಿ ಮತ್ತು ಕುಟುಂಬ ಸದಸ್ಯರು ಕುಟುಂಬ ಸಲಹಾ ಕೇಂದ್ರದಲ್ಲಿ ತಮ್ಮ ದೂರು ದಾಖಲಿಸಿದ್ದರು. ಈ ವಿಷಯ ಅಲ್ಲಿನ ಸಂಧಾನಕಾರರಿಗೂ ಅಚ್ಚರಿ ತಂದಿದೆ.

ಗ್ರಾಮೀಣ ಸಂಸ್ಕೃತಿಯ ಹುಡುಗಿ: ತಾನು ಗ್ರಾಮೀಣ ಭಾಗದ ಹುಡುಗಿಯಾಗಿದ್ದು, ಸೀರೆ ಉಡುವ ಸಂಪ್ರದಾಯವಿದೆ. ಸೀರೆ ಉಟ್ಟಿದ್ದಕ್ಕೆ ನನ್ನನ್ನು ಗೇಲಿ ಮಾಡಲಾಗುತ್ತದೆ. ನನ್ನ ಅತ್ತೆ ಜೀನ್ಸ್​ ಮತ್ತು ಟಾಪ್​ ಧರಿಸಲು ಒತ್ತಡ ಹೇರುತ್ತಾರೆ. ಇದಕ್ಕೆ ನನ್ನ ಪತಿಯೂ ಸಾಥ್​ ನೀಡಿದ್ದು, ಕೆಲ ಬಾರಿ ಹಲ್ಲೆಯೂ ಮಾಡಿದ್ದಾರೆ ಎಂದು ನೊಂದ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಇತ್ತ ಅತ್ತೆ ಮಾತ್ರ ಸೊಸೆಯ ನಡೆಯನ್ನ ಒಪ್ಪಲ್ಲ. ಆಕೆ ಮಾಡರ್ನ್​ ಆಗಿರಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಕುಟುಂಬ ಸಲಹಾ ಕೇಂದ್ರದಲ್ಲಿ ಇಬ್ಬರ ನಡುವೆ ಸಂಧಾನ ಮಾಡಿಸಲು ನಡೆದ ಪ್ರಯತ್ನ ಮೊದಲ ದಿನ ವಿಫಲವಾಗಿದೆ. ಹೀಗಾಗಿ ಇನ್ನೊಂದು ದಿನ ಬರಲು ಸೂಚಿಸಲಾಗಿದೆ. ಇಬ್ಬರ ನಡುವೆ ಸಮನ್ವಯ ತರಲು ಪ್ರಯತ್ನಿಸಲಾಗುವುದು ಎಂದು ನೋಡಲ್ ಎಸಿಪಿ ಸುಕನ್ಯಾ ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ: ತಿನಿಸು ಕಟ್ಟೆಗೆ ಪಿಡಬ್ಲುಡಿ ಅಧಿಕಾರಿಗಳ ದಿಢೀರ್ ಭೇಟಿ, ಪರಿಶೀಲನೆ: ಕಾಂಗ್ರೆಸ್-ಬಿಜೆಪಿ ಮಧ್ಯೆ ವಾಗ್ವಾದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.