ETV Bharat / bharat

ಐಒಸಿಎಲ್, ಬಿಪಿಸಿಎಲ್​ ಮತ್ತು ಎಚ್​ಪಿಸಿಎಲ್ ರೇಟಿಂಗ್ ಮಟ್ಟ ಸ್ಥಿರ: ಮೂಡೀಸ್ ಅಂದಾಜು

author img

By

Published : Feb 21, 2023, 5:01 PM IST

ಬಿಪಿಸಿಎಲ್​ ಮತ್ತು ಎಚ್​ಪಿಸಿಎಲ್ ರೇಟಿಂಗ್ ಮಟ್ಟ ಸ್ಥಿರ
Moody's affirms stable ratings outlook

ಭಾರತದ ಮೂರು ಪ್ರಮುಖ ತೈಲ ಕಂಪನಿಗಳಾದ ಐಒಸಿಎಲ್, ಬಿಪಿಸಿಎಲ್​ ಮತ್ತು ಎಚ್​ಪಿಸಿಎಲ್ ಇವುಗಳ ರೇಟಿಂಗ್ ಮಟ್ಟ ಸ್ಥಿರವಾಗಿರಲಿದೆ ಎಂದು ಮಾರುಕಟ್ಟೆ ವಿಶ್ಲೇಷಕ ಸಂಸ್ಥೆ ಮೂಡೀಸ್ ಹೇಳಿದೆ.

ಮುಂಬೈ (ಮಹಾರಾಷ್ಟ್ರ) : ಮೂರು ತೈಲ ಸಂಸ್ಕರಣೆ ಮತ್ತು ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL), ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಇವುಗಳ ಅಂದಾಜು ರೇಟಿಂಗ್‌ಗಳ ಮೇಲ್ನೋಟ ಸ್ಥಿರವಾದ ಮಟ್ಟದಲ್ಲಿರಲಿದೆ ಎಂದು ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸ್ ಹೇಳಿದೆ.

ಕಚ್ಚಾ ತೈಲ ಬೆಲೆಗಳು ಕಡಿಮೆಯಾಗುವುದರಿಂದ ಮಾರುಕಟ್ಟೆ ನಷ್ಟ ಮತ್ತು ಮಧ್ಯಮ ವರ್ಕಿಂಗ್ ಕ್ಯಾಪಿಟಲ್ ಅಗತ್ಯತೆಗಳು ಕಡಿಮೆಯಾಗುತ್ತವೆ. ಇದರಿಂದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣೆ ಮತ್ತು ಮಾರುಕಟ್ಟೆ ಕಂಪನಿಗಳ ಕಾರ್ಯನಿರ್ವಹಣೆಯ ಕಾರ್ಯಕ್ಷಮತೆ ಸುಧಾರಿಸುತ್ತದೆ ಎಂಬ ನಮ್ಮ ಅಭಿಪ್ರಾಯಗಳನ್ನು ರೇಟಿಂಗ್ ದೃಢೀಕರಣವು ಪ್ರತಿಬಿಂಬಿಸುತ್ತದೆ ಎಂದು ಮೂಡೀಸ್ ಸಹಾಯಕ ಉಪಾಧ್ಯಕ್ಷೆ ಮತ್ತು ವಿಶ್ಲೇಷಕಿ ಶ್ವೇತಾ ಪಟೋಡಿಯಾ ಹೇಳಿದ್ದಾರೆ.

ಸರ್ಕಾರವು ಈ ಕಂಪನಿಗಳಿಗೆ ಬೆಂಬಲ ಮುಂದುವರಿಸುತ್ತದೆ ಮತ್ತು ತೈಲ ಮಾರುಕಟ್ಟೆ ಕಂಪನಿಗಳ ಹಿಂದಿನ ನಷ್ಟಗಳಿಗೆ ಪರಿಹಾರ ನೀಡುತ್ತದೆ ಎಂಬ ನಿರೀಕ್ಷೆಗಳ ಹಿನ್ನೆಲೆಯಲ್ಲಿ ಮೂಡೀಸ್ ಈ ಕಂಪನಿಗಳ ರೇಟಿಂಗ್ ದೃಷ್ಟಿಕೋನವನ್ನು ಅಂದಾಜಿಸಿದೆ ಎಂದು ಪಟೋಡಿಯಾ ಹೇಳಿದರು. ಸರ್ಕಾರಿ ಸ್ವಾಮ್ಯದ ರಿಫೈನಿಂಗ್ ಮತ್ತು ಮಾರ್ಕೆಟಿಂಗ್ ಕಂಪನಿಗಳ ಕ್ರೆಡಿಟ್ ಮೆಟ್ರಿಕ್‌ಗಳು ಮಾರ್ಚ್ 2024 ರ ವೇಳೆಗೆ ನಮ್ಮ ರೇಟಿಂಗ್ ಮಿತಿಗಳಲ್ಲಿ ಸಾಮಾನ್ಯವಾಗುತ್ತವೆ ಮತ್ತು ನಮ್ಮ ರೇಟಿಂಗ್ ಮಿತಿಯೊಳಗೆ ಇರುತ್ತವೆ ಎಂದು ಪಟೋಡಿಯಾ ತಿಳಿಸಿದರು.

ರೇಟಿಂಗ್​ ಹಿಂದಿನ ತಾರ್ಕಿಕತೆ ಏನು?: ರೇಟಿಂಗ್ ಮುನ್ನೋಟದ ಹಿಂದಿನ ತಾರ್ಕಿಕತೆಯನ್ನು ವಿವರಿಸಿದ ಅವರು, ಮೂಡೀಸ್ ಪ್ರಕಾರ ಬ್ರೆಂಟ್ ಕಚ್ಚಾ ತೈಲ ಬೆಲೆಯು 30 ಸೆಪ್ಟೆಂಬರ್ 2022 (ಏಪ್ರಿಲ್-2022) ಕ್ಕೆ ಕೊನೆಗೊಂಡ ಆರು ತಿಂಗಳವರೆಗೆ USD 105 ರ ಸರಾಸರಿ ಬೆಲೆಗೆ ಹೋಲಿಸಿದರೆ, ಅಕ್ಟೋಬರ್ 2022 ರಿಂದ ಪ್ರತಿ ಬ್ಯಾರೆಲ್‌ಗೆ ಸರಾಸರಿ USD 85 ಕ್ಕೆ ಇಳಿಕೆ ಕಂಡಿದೆ. ಅಂದರೆ ಶೇಕಡಾ 17 ರಷ್ಟು ಕುಸಿದಿದೆ. ಅಲ್ಲದೆ, ಈ ಅವಧಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಚಿಲ್ಲರೆ ಮಾರಾಟದ ಬೆಲೆಗಳು ಬದಲಾಗದೇ ಇರುವುದರಿಂದ ತೈಲ ಮಾರುಕಟ್ಟೆ ಕಂಪನಿಗಳ (OMC ಗಳು) ಲಾಭದಾಯಕತೆ ಹೆಚ್ಚಾಗಿದೆ ಎಂದು ಅದು ಹೇಳಿದೆ.

ಬ್ರೆಂಟ್ ಕಚ್ಚಾ ತೈಲಕ್ಕೆ ಹೋಲಿಸಿದರೆ ರಿಯಾಯಿತಿ ದರದಲ್ಲಿ ತೈಲ ನೀಡುತ್ತಿರುವ ರಷ್ಯಾ ಕಚ್ಚಾ ತೈಲದ ಹೆಚ್ಚಿನ ಖರೀದಿಯು ಭಾರತೀಯ ಸಂಸ್ಕರಣಾಗಾರಗಳಿಗೆ ಉಪಯುಕ್ತವಾಗಿದೆ. ಯುದ್ಧದ ಮೊದಲು ರಷ್ಯಾದ ಕಚ್ಚಾ ತೈಲವು ಒಟ್ಟು ಕಚ್ಚಾ ತೈಲ ಬಳಕೆಯ ಶೇಕಡಾ 2ಕ್ಕಿಂತ ಕಡಿಮೆಯಿತ್ತು. ಆದರೆ, ಅಂದಿನಿಂದ ಇದು ಸುಮಾರು ಶೇ 15 ರಿಂದ 20 ರಷ್ಟು ಹೆಚ್ಚಾಗಿದೆ. ಮುಂದಿನ 12 ರಿಂದ 18 ತಿಂಗಳುಗಳಲ್ಲಿ ಈ ಪ್ರವೃತ್ತಿ ಮುಂದುವರಿಯುವ ಸಾಧ್ಯತೆ ಇದೆ ಮತ್ತು ಭಾರತೀಯ ಸಂಸ್ಕರಣಾಗಾರಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಅದು ಹೇಳಿದೆ.

ಇದಲ್ಲದೇ ಎಲ್ಲ ಮೂರು ತೈಲ ಕಂಪನಿಗಳು ತಮ್ಮ ಅಲ್ಪಾವಧಿಯ ಸಾಲಗಳಿಗೆ ಸಂಬಂಧಿಸಿದಂತೆ ಕಡಿಮೆ ನಗದು ಸಮತೋಲನ ನಿರ್ವಹಿಸುತ್ತವೆ ಎಂದು ಮೂಡೀಸ್ ಹೇಳಿದೆ. ಇದರ ಪರಿಣಾಮವಾಗಿ ಇವುಗಳ ಲಿಕ್ವಿಡಿಟಿ ದುರ್ಬಲವಾಗಿದೆ. ಕಂಪನಿಗಳಿಗೆ ಸದ್ಯ ಪಾವತಿಯಾಗಬೇಕಿರುವ ನಗದು ಬಾಕಿಗಳು, ಕಾರ್ಯಾಚರಣೆಗಳಿಂದ ನಿರೀಕ್ಷಿತ ನಗದು ಹರಿವು, ಮುಂದಿನ 12 ತಿಂಗಳುಗಳಲ್ಲಿ ಬಂಡವಾಳ ಖರ್ಚು, ಲಾಭಾಂಶ ಪಾವತಿಗಳು ಮತ್ತು ಸಾಲದ ಪಕ್ವತೆಯನ್ನು ಸರಿದೂಗಿಸಲು ಸಾಕಾಗುವುದಿಲ್ಲ ಎಂದು ಮೂಡೀಸ್ ತನ್ನ ವರದಿಯಲ್ಲಿ ಹೇಳಿದೆ.

ಇದನ್ನೂ ಓದಿ: 2035ಕ್ಕೆ ಪೆಟ್ರೋಲ್ ಡೀಸೆಲ್ ಕಾರ್ ಸಂಪೂರ್ಣ ಬ್ಯಾನ್: ಇಯು ಮಹತ್ವದ ಒಪ್ಪಂದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.