ETV Bharat / bharat

'ಪ್ರಧಾನಿ ಮೋದಿ, ಸಿಎಂ ಯೋಗಿ ಹತ್ಯೆ ಮಾಡುತ್ತೇವೆ'.. 26/11 ರೀತಿಯ ದಾಳಿ ಬೆದರಿಕೆ ಹಾಕಿದ ಅಪರಿಚಿತ ವ್ಯಕ್ತಿ

author img

By

Published : Jul 18, 2023, 11:55 AM IST

Updated : Jul 18, 2023, 12:23 PM IST

ಸಿಎಂ ಯೋಗಿ ಹತ್ಯೆ ಬೆದರಿಕೆ
ಸಿಎಂ ಯೋಗಿ ಹತ್ಯೆ ಬೆದರಿಕೆ

ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ವಾಪಸ್ ಕಳುಹಿಸಲು ಬೆದರಿಕೆ ಬಂದ ಬೆನ್ನಲ್ಲೇ, ಈಗ ಪ್ರಧಾನಿ ಮೋದಿ, ಸಿಎಂ ಯೋಗಿ ಆದಿತ್ಯನಾಥ್​ ಹತ್ಯೆ ಮಾಡುವ ಬೆದರಿಕೆ ಕರೆ ಹಾಕಲಾಗಿದೆ.

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹತ್ಯೆ ಮಾಡುವುದಾಗಿ ಮತ್ತೊಂದು ಬೆದರಿಕೆ ಬಂದಿದೆ. ಮುಂಬೈ ಸಂಚಾರ ಪೊಲೀಸ್​ ವಿಭಾಗದ ನಿಯಂತ್ರಣ ಕೊಠಡಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ 26/11 ರ ಮಾದರಿಯ ಮತ್ತೊಂದು ದಾಳಿಗೆ ಸಿದ್ಧರಾಗಿ, ಇಬ್ಬರು ನಾಯಕರನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಪೊಲೀಸರು ಕ್ಷಿಪ್ರ ತನಿಖೆ ಆರಂಭಿಸಿದ್ದಾರೆ.

ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್​ಳನ್ನು ವಾಪಸ್​ ಕಳುಹಿಸದಿದ್ದರೆ 26/11 ರ ಮಾದರಿ ಭಯೋತ್ಪಾದಕ ದಾಳಿ ನಡೆಸಲಾಗುವುದು ಎಂದು ಜುಲೈ 12 ರಂದು ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಬೆದರಿಕೆ ಕರೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಈಗ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಅವರ ಹತ್ಯೆ ಸಂಚು ಮಾಡಿರುವ ಬಗ್ಗೆ ಬೆದರಿಕೆ ಹಾಕಲಾಗಿದೆ. ಪ್ರಕರಣವನ್ನು ಮುಂಬೈ ಪೊಲೀಸರು ಮತ್ತು ಕ್ರೈಂ ಬ್ರಾಂಚ್ ತನಿಖೆ ಆರಂಭಿಸಿದ್ದಾರೆ.

26/11 ಮಾದರಿ ದಾಳಿ ಬೆದರಿಕೆ: ವಾರದ ಹಿಂದಷ್ಟೇ ಮುಂಬೈ ಪೊಲೀಸರಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದು, ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್​ಳನ್ನು ಮರಳಿ ಪಾಕಿಸ್ತಾನಕ್ಕೆ ವಾಪಸ್ ಕಳುಹಿಸದಿದ್ದರೆ 26/11 ಮಾದರಿ ಭಯೋತ್ಪಾದಕ ದಾಳಿ ನಡೆಸಲಾಗುವುದು. ಮುಂಬೈನ ವಿವಿಧೆಡೆ ಬಾಂಬ್ ಮತ್ತು ಎಕೆ 47 ರವಾನಿಸಲಾಗುವುದು ಎಂದು ಅಪರಿಚಿತ ವ್ಯಕ್ತಿ ಹೇಳಿದ್ದ. ಈ ಬಗ್ಗೆ ಮುಂಬೈ ಪೊಲೀಸರು ಅಲರ್ಟ್ ಆಗಿದ್ದರು.

ಇದಲ್ಲದೇ, ದಾದರ್ ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿ ಆತಂಕಕ್ಕೀಡು ಮಾಡಿದ ಯುವಕನನ್ನು ಲೋನಿ ಕಲ್ಭೋರ್ ಪೊಲೀಸರು ಭಾನುವಾರ ಬಂಧಿಸಿದ್ದರು. ಕಡಂವಾಕ್ವಸ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಸಿದ್ಧ ಹೋಟೆಲ್ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು.

ಜೈಲಿನಾಸೆಗೆ ಮೋದಿಗೆ ಬೆದರಿಕೆ: ಕಳೆದ ವರ್ಷ ಯುವಕನೊಬ್ಬ ಜೈಲಿಗೆ ಹೋಗುವ ಇಚ್ಛೆಯಿಂದ ಪ್ರಧಾನಿ ಮೋದಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಕೊನೆಗೂ ಜೈಲು ಪಾಲಾಗಿದ್ದ. ಈಶಾನ್ಯ ದೆಹಲಿಯ ಖಾಜುರಿ ಖಾಸ್ ಪ್ರದೇಶದ ಸಲ್ಮಾನ್ ಎಂಬಾತನೇ ಬಂಧಿತ ಆರೋಪಿ. ಈತ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮೋದಿಯನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಬಂಧಿಸಿ ವಿಚಾರಣೆ ನಡೆಸಿದಾಗ, ನಾನು ಜೈಲಿಗೆ ಹೋಗ ಬಯಸಿದ್ದರಿಂದ ಈ ರೀತಿ ಮಾಡಿದೆ ಎಂದಿದ್ದ. 2018ರಲ್ಲಿ ಕೊಲೆ ಹಾಗೂ ಡ್ರಗ್ಸ್​​ ಪ್ರಕರಣದಲ್ಲಿ ಬಂಧಿಸಿ, ಬಾಲಾಪರಾಧಿ ಕೇಂದ್ರಕ್ಕೆ ಕಳಿಸಲಾಗಿತ್ತು.

ಇದನ್ನೂ ಓದಿ: ದಾವೂದ್​ ಇಬ್ರಾಹಿಂ ಬಂಟರಿಂದ ಪ್ರಧಾನಿ ಮೋದಿ ಹತ್ಯೆಗೆ ಮತ್ತೆ ಬೆದರಿಕೆ ಸಂದೇಶ

Last Updated :Jul 18, 2023, 12:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.