ETV Bharat / bharat

ಬರಿಗಾಲಿನಲ್ಲೇ ಭಾರತ್ ಜೋಡೋ ಯಾತ್ರೆ ಪೂರ್ಣಗೊಳಿಸಿದ ದಿನೇಶ್ ಶರ್ಮಾ..!

author img

By

Published : Jan 30, 2023, 6:00 PM IST

Pandit Dinesh Sharma
ಪಂಡಿತ್ ದಿನೇಶ್ ಶರ್ಮಾ

ಪೂರ್ಣಗೊಂಡ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ- ಕೇಸರಿ ಪೇಟ ಹಾಗೂ ರಾಷ್ಟ್ರಧ್ವಜದ ಬಣ್ಣದ ಬಟ್ಟೆಗಳನ್ನು ಧರಿಸಿ ಯಾತ್ರೆ ಕೈಗೊಂಡ ದಿನೇಶ್ ಶರ್ಮಾ- ಭಾರತ್ ಜೋಡೋದ ಎಲ್ಲ ಯಾತ್ರಿಗಳಿಗಿಂತಲೂ ಶರ್ಮಾ ಶೈಲಿಯೇ ವಿಶೇಷ.

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಮುಕ್ತಾಯಗೊಂಡಿದೆ. ಈ ಯಾತ್ರೆ ಮೂಲಕ ಸಮಾಜದ ಎಲ್ಲಾ ವರ್ಗದ ಜನರಿಗೆ ಪ್ರೀತಿ ಹಂಚಲು ಪ್ರಯತ್ನಿಸಿದರು. ಅವರಲ್ಲೊಬ್ಬರು 28 ವರ್ಷದ ಪಂಡಿತ್ ದಿನೇಶ್ ಶರ್ಮಾ. ಶರ್ಮಾ ಕಾನೂನು ಪದವೀಧರರಾಗಿದ್ದು, ಕಳೆದ 12 ವರ್ಷಗಳಿಂದ ಬರಿಗಾಲಿನಲ್ಲೇ ನಡೆದಾಡುತ್ತಿರುವುದು ವಿಶೇಷ.

ಕೇಸರಿ ಪೇಟ ಮತ್ತು ರಾಷ್ಟ್ರಧ್ವಜದ ಬಣ್ಣದ ಬಟ್ಟೆಗಳನ್ನು ಧರಿಸಿರುವ ದಿನೇಶ್ ಶರ್ಮಾ ಭಾರತ್ ಜೋಡೋದ ಎಲ್ಲ ಯಾತ್ರಿಗಳ ನಡುವೆ ಗಮನಸೆಳೆಯುತ್ತಾರೆ. ಶರ್ಮಾ ಅವರು 2011ರಲ್ಲಿ ಪ್ರಾರಂಭಿಸಿದ ಬರಿಗಾಲಿನಲ್ಲಿ ಸಂಚರಿಸುವ ಹೋರಾಟ ಎಂದರೆ, ರಾಹುಲ್ ಗಾಂಧಿ ಅವರು ಭಾರತದ ಪ್ರಧಾನಿಯಾಗುವವರೆಗೂ ಮುಂದುವರಿಸುತ್ತೇನೆ ಎಂದು ಅವರು ಹೇಳುತ್ತಾರೆ.

ಶರ್ಮಾ ಟಿವಿಯಲ್ಲಿ ಕಾಣಿಸದಿದ್ದರೂ, ಯಾವುದೇ ಯಾತ್ರಿ ಅಥವಾ ಸಂದರ್ಶಕರ ಕಣ್ಣುಗಳಿಂದ ತಪ್ಪಿಸಿಕೊಳ್ಳುವುದಿಲ್ಲ. ವಿಷಯಗಳನ್ನು ಇನ್ನಷ್ಟು ಆಸಕ್ತಿದಾಯಕವಾಗಿಸಲು, ರಾಹುಲ್ ಗಾಂಧಿ ಅವರ ಭದ್ರತಾ ವಲಯವನ್ನು ದಾಟಲು ಶರ್ಮಾಗೆ ಮಾತ್ರ ಅವಕಾಶವಿದೆ. ಶರ್ಮಾ ಅವರು ಶಾಸಕರಾಗಲೀ ಅಥವಾ ಕಾರ್ಪೊರೇಟರ್ ಆಗಲೀ ಅಲ್ಲ. ಅವರು ಕಾಂಗ್ರೆಸ್‌ನಲ್ಲಿ ಯಾವುದೇ ಅಧಿಕೃತ ಸ್ಥಾನವನ್ನು ಹೊಂದಿಲ್ಲ. ಆದರೂ, ಗಾಂಧಿ ಮತ್ತು ಅವರ ಸುತ್ತಲಿರುವವರು ಈ ವ್ಯಕ್ತಿಯನ್ನು ವೈಯಕ್ತಿಕವಾಗಿ ಅರಿತುಕೊಂಡಿದ್ದಾರೆ. ಹೆಚ್ಚಿನ ಯಾತ್ರಿಗಳು ಅವರನ್ನು "ಪಂಡಿತ್ ಜೀ" ಎಂದು ಕರೆಯುತ್ತಾರೆ.

ನನ್ನ 12 ವರ್ಷಗಳ ಸುದೀರ್ಘ ಯಾತ್ರೆ: ತಮ್ಮ ಪ್ರಯಾಣದ ಬಗ್ಗೆ ಮಾತನಾಡಿದ ಶರ್ಮಾ ಅವರು, "ನನ್ನ 12 ವರ್ಷಗಳ ಸುದೀರ್ಘ ಯಾತ್ರೆ ಮುಂದುವರೆದಿದೆ. ಇದರೊಂದಿಗೆ ಭಾರತ್ ಜೋಡೋ ಯಾತ್ರೆಯ ರೂಪದಲ್ಲಿ ಮತ್ತೊಂದು ಯಾತ್ರೆ ಪ್ರಾರಂಭವಾಯಿತು. ಭಾರತದ ಅತಿದೊಡ್ಡ ಯಾತ್ರೆ ಇದು, ನನ್ನ ಹೋರಾಟ ಇನ್ನೂ ಮುಂದುವರಿಯುತ್ತದೆ" ಎಂದರು.

ಸಂಬಂಧಿತವಾಗಿ, ಭಾರತ್ ಜೋಡೋ ಯಾತ್ರೆಯು ಸೆಪ್ಟೆಂಬರ್ 7, 2022 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು. ಅಂದಿನಿಂದ ಶರ್ಮಾ, ರಾಹುಲ್ ಗಾಂಧಿಯವರೊಂದಿಗೆ ನಡೆಯುತ್ತಿದ್ದಾರೆ. "ನಾನು ಹರಿಯಾಣದ ಜಿಂದ್‌ನ ಕಾಕ್ರೋಡ್ ಗ್ರಾಮದಲ್ಲಿ ಜನಿಸಿದೆ. ಶ್ರೀಮಂತ ಕುಟುಂಬಕ್ಕೆ ಸೇರಿದವನು. ನನ್ನ ಪ್ರಯಾಣದ ವೆಚ್ಚವನ್ನು ನಾನೇ ಭರಿಸಿದ್ದೇನೆ" ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ನಾಯಕರಾಗಿ ಹೊರಹೊಮ್ಮಿದ ರಾಹುಲ್ ಜೀ: ''ಪಂಡಿತ್ ನೆಹರು ಅವರು ದೇಶದ ಮೊದಲ ಪ್ರಧಾನಿಯಾದಾಗ ಅವರು ರಾಷ್ಟ್ರವನ್ನು ಎತ್ತರಕ್ಕೆ ಕೊಂಡೊಯ್ದರು. ಬಳಿಕ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ದಿವಂಗತ ಅಜ್ಜಿ ಇಂದಿರಾಜಿ ಅವರು ಭಾರತವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದರು. ಅವರು ದೇಶಕ್ಕಾಗಿ ಪ್ರಾಣ ನೀಡಿದ್ದಾರೆ. ಅದೇ ಪಕ್ಷದ ರಾಜೀವ್ ಜೀ ದೇಶಕ್ಕಾಗಿ ನಿಧನರಾಗಿದ್ದಾರೆ. ಅದೇ ಕುಟುಂಬದಿಂದ ರಾಹುಲ್ ಗಾಂಧಿಜಿ ನಾಯಕರಾಗಿ ಹೊರಹೊಮ್ಮಿದರು. ರಾಹುಲ್ ಜೀ ಕೂಡ ಏನಾದರೂ ಉತ್ತಮ ಸಾಧನೆ ಮಾಡುತ್ತಾರೆ ಎಂದು ನಾನು ನಂಬುತ್ತೇನೆ" ಎಂದು ಮನದಾಳದ ಮಾತು ತಿಳಿಸಿದರು.

ಬರಿಗಾಲಿನಲ್ಲಿ ನಡೆಯುವ ಪ್ರತಿಜ್ಞೆ ಮಾಡಿದೆ: ರಾಹುಲ್ ಗಾಂಧಿ ಕುರಿತು ಮಾತನಾಡಿದ ಅವರು, "ರಾಹುಲ್​ ಜೀ ಚಿಕ್ಕ ವಯಸ್ಸಿನಲ್ಲಿ ನೋವು ಕಂಡಿದ್ದಾರೆ, ಅವರು ತಮ್ಮ ಅಜ್ಜಿಯನ್ನು ಕಳೆದುಕೊಂಡರು ಮತ್ತು ಅವರು ತಮ್ಮ ತಂದೆಯನ್ನು ಕಳೆದುಕೊಂಡರು. ರಾಹುಲ್ ಜೀ ಈ ದೇಶಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ನನ್ನ ಭಾರತವನ್ನು ವಿಶ್ವದ 'ನಂಬರ್ ಒನ್' ರಾಷ್ಟ್ರವನ್ನಾಗಿ ನೋಡುವುದು ನನ್ನ ಕನಸು. ಯಾರಾದರೂ ನನ್ನ ಕನಸುಗಳನ್ನು ನನಸಾಗಿಸಲು ಸಾಧ್ಯವಾದರೆ, ಅದು ರಾಹುಲ್ ಜೀ ಎಂದು ನಾನು ಭಾವಿಸಿದೆ. ಇದರಿಂದ ನಾನು ಪ್ರತಿಜ್ಞೆ ಮಾಡಿದೆ " ಎಂದರು.

4,080 ಕಿ.ಮೀ. ಕ್ರಮಿಸಿದ ಯಾತ್ರೆ: 4,080 ಕಿ.ಮೀ. ಕ್ರಮಿಸಿದ ಭಾರತ್ ಜೋಡೋ ಯಾತ್ರೆಯು ನಿನ್ನೆ ಮುಕ್ತಾಯಗೊಂಡಿರುವುದು ಶರ್ಮಾ ಅವರಿಗೆ ಸುಲಭ ವಿಷಯವೇನಲ್ಲ. ಹವಾಮಾನ ಪ್ರತಿಕೂಲವಾಗಿದ್ದರೂ ಕೂಡಾ ಯಾತ್ರೆ ಯಶಸ್ವಿಯಾಗಿ ನಡೆದಿದೆ. ಶರ್ಮಾ ಅವರು ಬರಿಗಾಲಿನಲ್ಲೇ ಯಾತ್ರೆ ಪೂರ್ಣಗೊಳಿಸಲು ಹಲವು ಕಷ್ಟಕರ ಪರಿಸ್ಥಿತಿಯನ್ನು ಎದುರಿಸಲೇಬೇಕಾಯಿತು.

"ದೇಶವನ್ನು ಉಳಿಸುವ" ಹೋರಾಟವಾಗಿ ಶರ್ಮಾ ಅವರು ಯಾತ್ರೆಯನ್ನು ಕೈಗೊಂಡಿದ್ದಾರೆ. ಪ್ರಯಾಣದಲ್ಲಿ ಎದುರಿಸಿದ ಕಷ್ಟಗಳ ಕುರಿತು ಮಾತನಾಡಿದ ಅವರು, "ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜನರು ಪ್ರಜ್ಞೆ ತಪ್ಪಿದರು. ಕೆಲವು ಜನರು ಹುತಾತ್ಮರಾದರು. ಎಲ್ಲರನ್ನೂ ಈ ಸಮಯದಲ್ಲಿ ನೆನಪಿಸಿಕೊಳ್ಳುತ್ತಾರೆ. ನಾನು ಅನುಭವಿಸಿದ ಕಷ್ಟಗಳಿಗಿಂತಲೂ ಈ ಯಾತ್ರೆ ದೊಡ್ಡದು'' ಎಂದು ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ: ತ್ರಿವರ್ಣ ಧ್ವಜ ಹಾರಿಸಿ 'ಭಾರತ್​ ಜೋಡೋ ಯಾತ್ರೆ'ಗೆ ತೆರೆ ಎಳೆದ ರಾಹುಲ್​ ಗಾಂಧಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.