ETV Bharat / bharat

Teltumbde's Death: ತೇಲ್ತುಂಬ್ಡೆ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳುತ್ತೇವೆಂದ ನಕ್ಸಲರು: ನ.27ರಂದು ಬಂದ್‌ಗೆ ಕರೆ

author img

By

Published : Nov 20, 2021, 9:19 AM IST

Teltumbde's Death
Teltumbde's Death

ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಿಪಿಐ (ಮಾವೋವಾದಿ) ಕೇಂದ್ರ ವಕ್ತಾರ ಅಭಯ್, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಢ, ಒಡಿಶಾ, ತೆಲಂಗಾಣ ಮತ್ತು ಆಂಧ್ರಪ್ರದೇಶ - ಈ ಆರು ರಾಜ್ಯಗಳಲ್ಲಿ ಬಂದ್‌ಗೆ ಕರೆ ನೀಡಿರುವುದಾಗಿ ಹಾಗೂ 27 ಮಾವೋವಾದಿಗಳ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

ಗಡ್ಚಿರೋಲಿ (ಮಹಾರಾಷ್ಟ್ರ): ಮಾವೋವಾದಿ ನಾಯಕ ಮಿಲಿಂದ್ ತೇಲ್ತುಂಬ್ಡೆ ಹತ್ಯೆಗೆ ಪ್ರತಿಕಾರ (Revenge For Teltumbde's Death) ತೀರಿಸಿಕೊಳ್ಳುವುದಾಗಿ ನಕ್ಸಲರು ಹೇಳಿದ್ದು, ನವೆಂಬರ್ 27 ರಂದು ಆರು ರಾಜ್ಯಗಳಲ್ಲಿ ಬಂದ್‌ಗೆ ಕರೆ (Maoists call for bandh) ನೀಡಿದ್ದಾರೆ.

ನವೆಂಬರ್​ 13ರಂದು ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಗ್ಯಾರಪಟ್ಟಿ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪೊಲೀಸ್ ದಳ ನಡೆಸಿದ್ದ ಎನ್​ಕೌಂಟರ್​ನಲ್ಲಿ ಮೋಸ್ಟ್ ವಾಂಟೆಡ್​ ಮಾವೋವಾದಿ ನಾಯಕ ಮಿಲಿಂದ್ ತೇಲ್ತುಂಬ್ಡೆ ಸೇರಿ 27 ಮಂದಿ ನಕ್ಸಲರನ್ನು (27 naxals killed in Gadchiroli Encounter) ಹೊಡೆದುರುಳಿಸಲಾಗಿತ್ತು.

ಇದೊಂದು ನಕಲಿ ಎನ್​ಕೌಂಟರ್​ ಎಂದು ಆರೋಪಿಸಿರುವ ನಕ್ಸಲ್​ ಮುಖಂಡರು ಈ ಸಂಬಂಧ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದರು. ಇದೀಗ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಿಪಿಐ (ಮಾವೋವಾದಿ) ಕೇಂದ್ರ ವಕ್ತಾರ ಅಭಯ್, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಢ, ಒಡಿಶಾ, ತೆಲಂಗಾಣ ಮತ್ತು ಆಂಧ್ರಪ್ರದೇಶ - ಈ ಆರು ರಾಜ್ಯಗಳಲ್ಲಿ ಬಂದ್‌ಗೆ ಕರೆ ನೀಡಿರುವುದಾಗಿ ಹಾಗೂ 27 ಮಾವೋವಾದಿಗಳ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಈ ದಿನ ಅತ್ಯಂತ ದುಃಖಕರವಾಗಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Gadchiroli Encounter: ಈ ಎನ್‌ಕೌಂಟರ್ ನಕಲಿ.. ನ್ಯಾಯಾಂಗ ತನಿಖೆಯಾಗಲಿ - ನಕ್ಸಲರ ಆಗ್ರಹ

ಡಿಸೆಂಬರ್ 2 ರಿಂದ 8 ರವರೆಗೆ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ ಸಪ್ತಾಹವನ್ನು ನಕ್ಸಲರು ಆಚರಿಸಲಿದ್ದಾರೆ. ಹೀಗಾಗಿ ಈಗಿನಿಂದ, ವಿಶೇಷವಾಗಿ ನವೆಂಬರ್ 27 ರ ಬಂದ್​ ಬಳಿಕ ಮಾವೋವಾದಿಗಳು ಹಲವಾರು ಹಿಂಸಾಚಾರಗಳನ್ನು ನಡೆಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.