ETV Bharat / bharat

ಹೆಂಡ್ತಿ ಮೇಲೆ ಮೃಗೀಯ ರೀತಿ ಹಲ್ಲೆ ನಡೆಸಿ, ಮುಖದ ಮೇಲೆ ಕಲ್ಲಿಂದ ಜಜ್ಜಿದ ಪಾಪಿ ಗಂಡ

author img

By

Published : May 18, 2022, 7:15 PM IST

ಕಟ್ಟಿಕೊಂಡ ಹೆಂಡತಿ ಮೇಲೆ ಪತಿಯೊಬ್ಬ ಮೃಗೀಯ ರೀತಿಯಲ್ಲಿ ಹಲ್ಲೆ ನಡೆಸಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

man has brutally thrashed his wife
man has brutally thrashed his wife

ರಾಮಗಢ(ಜಾರ್ಖಂಡ್): ಕಟ್ಟಿಕೊಂಡ ಹೆಂಡತಿ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿರುವ ಗಂಡನೊಬ್ಬ ಆಕೆಯ ಮುಖದ ಮೇಲೆ ಕಲ್ಲಿನಿಂದ ಜಜ್ಜಿರುವ ಹೃದಯ ವಿದ್ರಾವಕ ಘಟನೆ ಜಾರ್ಖಂಡ್​ನ ರಾಮಘಡದಲ್ಲಿ ನಡೆದಿದೆ. ಇದರ ವಿಡಿಯೋ ಸದ್ಯ ವೈರಲ್​ ಆಗ್ತಿದ್ದು, ಪ್ರಕರಣ ದಾಖಲಾಗಿದೆ.

ಮುಖದ ಮೇಲೆ ಕಲ್ಲಿನಿಂದ ಜಜ್ಜಿದ ಪಾಪಿ ಗಂಡ

ಇಲ್ಲಿನ ಭುರ್ಕುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪತಿಯೊಬ್ಬ ಹೆಂಡತಿ ಮೇಲೆ ಹಲ್ಲೆ ನಡೆಸಿದ್ದು, ನೆಲದ ಮೇಲೆ ಬಿದ್ದು ನರಳಾಡುತ್ತಿದ್ದ ಆಕೆಯ ಮುಖಕ್ಕೆ ಕಲ್ಲಿನಿಂದ ಜಜ್ಜಿ ಮತ್ತಷ್ಟು ಗಾಯಗೊಳಿಸಿದ್ದಾನೆ. ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿರುವ ಮಹಿಳೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಇಲ್ಲಿನ ಜೈ ಪ್ರಕಾಶ್ ನಗರದ ನಿವಾಸಿ ಅನಿಲ್ ಸೋನಿ ಈ ರೀತಿಯಾಗಿ ನಡೆದುಕೊಂಡಿದ್ದು, ಪತ್ನಿ ರಿಂಕಿ ದೇವಿ ಮೇಲೆ ಹಲ್ಲೆ ನಡೆಸಿದ್ದಾನೆ. ಮಹಿಳೆಯ ಕಿರುಚಾಟ ಕೇಳಿ ನೆರೆ ಮನೆಯವರು ಬಂದು ನೋಡಿದಾಗ ದಿಗ್ಬ್ರಮೆಗೊಂಡಿದ್ದಾರೆ. ಮೊಬೈಲ್​​ನಲ್ಲಿ ವಿಡಿಯೋ ಸೆರೆ ಹಿಡಿದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಭಾರತ ಶ್ರೀಲಂಕಾದಂತೆ ಭಾಸವಾಗ್ತಿದೆ.. ನಕ್ಷೆ ಸಮೇತ ಟ್ವೀಟ್ ಮಾಡಿದ ರಾಹುಲ್ ಗಾಂಧಿ

ಗಂಭೀರವಾಗಿ ಗಾಯಗೊಂಡಿರುವ ಮಹಿಳೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸ್ಥಿತಿ ಚಿಂತಾಜನಕವಿದ್ದ ಕಾರಣ ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಮಾತನಾಡಿರುವ ರಿಂಕು ದೇವಿ ಸಹೋದರ ಮೋಹನ್, ತಮ್ಮ ಸಹೋದರಿ ಮೇಲೆ ಪತಿ ಬಹಳ ದಿನಗಳಿಂದಲೂ ಹಲ್ಲೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.